ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಮೇಲೆ ಆರೋಪ ಸತ್ಯಕ್ಕೆ ದೂರವಾದದ್ದು : ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗಜೇಂದ್ರ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು

ದೇವನಹಳ್ಳಿ

ಸತ್ಯಕ್ಕೆ ದೂರವಾದ ಮಾತನ್ನು ಸುದ್ದಿವಾಹಿನಿಯಲ್ಲಿ ಪ್ರಸಾರವಾದ್ದರಿಂದ ಮೂರು ಜನರನ್ನು ಕರ್ತವ್ಯದಿಂದ ತಾತ್ಕಾಲಿಕವಾಗಿ ಅಮಾನತ್ತುಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿಯೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಉಪಾಧ್ಯಕ್ಷ ಗಜೇಂದ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಿಳೆಯನ್ನು ರಕ್ಷಣೆ ಮಾಡಲು ಕುಡಿದ ಅಮಲಿನಲ್ಲಿ ಬಸ್ ಹತ್ತಿದ ವ್ಯಕ್ತಿಯನ್ನು ಕಾಲು ಮಡಚು, ಮಹಿಳೆಯರಿಗೆ ಮೀಸಲಿಟ್ಟಿರುವ ಸೀಟನ್ನು ಬಿಟ್ಟು ಬೇರೆ ಆಸನದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ ನಿರ್ವಾಹಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಅವರ ಮೇಲೆ ತಲ್ಲಾಡಿ, ಟಿಕೆಟ್ ನೀಡುವ ಯಂತ್ರವನ್ನು ಕೆಳಗೆ ಬೀಳಿಸಿ ರಂಪಾಟ ಸೃಷ್ಟಿಸಿದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಪ್ರಯಾಣಿಕನನ್ನು ಬಸ್ ಕಡೆಗೆ ನೂಕಿ ಎಳೆದಾಡುವಾಗ ಪ್ರಯಾಣಿಕನ ಮೇಲೆ ಅಲ್ಲೆ ಎಂದು ಸುಳ್ಳು ಸುದ್ದಿ ತಿಳಿದು, ಅವರನ್ನು ವೃತ್ತಿಯಿಂದ ವಜಾಗೊಳಿಸಿರುವುದು ಸರಿಯಾದ ಕ್ರಮವಲ್ಲ. ಬಸ್ ಚಾಲಕರು, ನಿರ್ವಾಹಕರು ಎಷ್ಟೇ ಕಷ್ಟವಾದರೂ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಯಾಣಿಕರ ಸೇವೆಯಲ್ಲಿರುತ್ತಾರೆ. ಸತ್ಯಾಂಶವನ್ನು ತಿಳಿಯದೆ, ಏಕಾಏಕೀ ಅಮಾನತು ಶಿಕ್ಷೆ ನೀಡಿರುವುದನ್ನು ಕೂಡಲೇ ಹಿಂಪಡೆದು ಅವರನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಬೇಕು ಎಂದು ಒತ್ತಾಯಿಸಿದರು.

CHETAN KENDULI

ಪ್ರಯಾಣಿಕೆ ಮಂಜುಳ ಮಾತನಾಡಿ, ನಾನು ಬಿಎಂಟಿಸಿ ಬಸ್ ಹತ್ತುವಾಗ ಕುಡಿದ ವ್ಯಕ್ತಿಯೊಬ್ಬರ ಕಾಲು ಮಡಚಲು ಹೇಳಿದ್ದರಿಂದ ಬಾಯಿಗೆ ಬಂದಂತೆ ಏರುದ್ವನಿಯಲ್ಲಿ ಬೈದರು. ಅದಕ್ಕೆ ನಿರ್ವಾಹಕರ ಬಳಿ ನನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಕಂಠಪೂರ್ತಿ ಕುಡಿದ ನಿನ್ನನ್ನು ಈ ಬಸ್‌ನಲ್ಲಿ ಕರೆದುಕೊಂಡು ಹೋಗಲು ಆಗುವುದಿಲ್ಲ. ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದಾಗ ನಿರ್ವಾಹಕನ ಮೇಲೆಯೂ ಸಹ ಗೂಂಡಾವರ್ತನೆ ತೋರಿದ್ದಾನೆ. ಅದ್ದರಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪರಾರಿಯಾಗಿದ್ದಾನೆ. ಇದರಲ್ಲಿ ಬಸ್ ಚಾಲಕ, ನಿರ್ವಾಹಕರ ಯಾವುದೇ ತಪ್ಪು ಇಲ್ಲ.

ನನ್ನ ಸಮಸ್ಯೆಗೆ ಸಹಾಯ ಮಾಡಲು ಬಂದಿದ್ದರು. ಇನ್ನು ಈ ಬಗ್ಗೆ ಬಿಎಂಟಿಸಿ ಬಸ್ ನಿಲುಗಡೆಯ ಸ್ಥಳದ ಪಕ್ಕದಲ್ಲಿಯೇ ಟೀ ಅಂಗಡಿ ಮಾಲೀಕ ಮೋಹನ್‌ಕುಮಾರ್ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ್ದು, ಘಟನೆಗೆ ಜ್ವಲಂತ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು

Be the first to comment

Leave a Reply

Your email address will not be published.


*