ರಾಜ್ಯ ಸುದ್ದಿಗಳು
ದೇವನಹಳ್ಳಿ
ಯಾವುದೇ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿರುತ್ತದೆ. ಸುಮಾರು ವರ್ಷಗಳ ಹಿಂದೆ ಗ್ರಾಮದ ಹಿರಿಯರ ಸಮ್ಮುಕದಲ್ಲಿ ಕಲ್ಲುಗಳಿಂದ ಕೂಡಿದ ವೀರಗಲ್ಲು ಗುಡಿಯಲ್ಲಿ ಜೋಡಿ ವೀರರು ಇರುವ ಚಿತ್ರವನ್ನು ಹೊಂದಿರುವ ಶಿಲೆಯ ಗುಡಿ ಕಾಲ ಕಳೆದಂತೆ, ನಿಧಿಕಳ್ಳರ ಹೊಡೆತಕ್ಕೆ ಸಿಲುಕಿಕೊಂಡು ಹಂತಹಂತವಾಗಿ ನಶಿಸಿ ಹೋಗಿರುವುದು ಕಣ್ಣಿಗೆ ಬಿದ್ದಾಗ, ವೀರಗಲ್ಲು ಸಂರಕ್ಷಣೆಗೆ ಸ್ಥಳೀಯ ಗ್ರಾಮಸ್ಥರ ಹಾಗೂ ಮುಖಂಡರ ಸಹಕಾರ ದೊರೆತಿದೆ.ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಸೋಲೂರು ದಿನ್ನೆ ಗ್ರಾಮದ ಹೃದಯಭಾಗದಲ್ಲಿ ಜೋಡಿ ವೀರಗಲ್ಲು ಶಿಲೆ ಇರುವ ಗುಡಿಯೊಂದು ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಇದೀಗ ಗ್ರಾಪಂ ಸದಸ್ಯ ಕೆ.ಶ್ರೀನಿವಾಸ್ ನೇತೃತ್ವದಲ್ಲಿ ಗುಡಿಯ ಜೀರ್ಣೋದ್ಧಾರಕ್ಕೆ ಚಿಂತನೆ ನಡೆಸಿದ್ದಾರೆ.
ವೀರಗಲ್ಲು ಸ್ಥಾಪಿಸಲು ಆಗಿನ ಕಾಲದಲ್ಲಿ ಯುದ್ಧ ಮಾಡಿ ವೀರ ಸಾವು ಹೊಂದಿದ ಸವಿನೆನಪಿನಲ್ಲಿ ಪ್ರತಿಷ್ಠಾಪಿಸಿರುವುದು ಎಂಬುವುದು ನಮ್ಮ ತಾತನವರು ಹೇಳುತ್ತಿದ್ದರು. ಅಣ್ಣ ತಮ್ಮಂದಿರು ಯುದ್ಧದಲ್ಲಿ ಭಾಗಿಯಾಗಿ ಮರಣಹೊಂದಿದ್ದಾರೆ ಎಂದು ಹೇಳಿದ್ದಾರೆ. ಅದರ ಜ್ಞಾಪಕಾರ್ಥವಾಗಿ ಸುಮಾರು ವರ್ಷಗಳ ಹಿಂದೆಯೇ ವೀರಗಲ್ಲು ಗುಡಿ ಸ್ಥಾಪಿಸಲಾಗಿದ್ದು, ಅದಕ್ಕೆ ಪೂಜೆಯನ್ನು ಸಹ ನೆರವೇರಿಸುತ್ತಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ವಿಶ್ವನಾಥಪುರ ಗ್ರಾಮ ಪಂಚಾಯಿತಿ ಸದಸ್ಯ ಕೆ.ಶ್ರೀನಿವಾಸ್ ಮಾತನಾಡಿ, ಪೂರ್ವಜರ ಕಾಲದಿಂದಲೂ ಈ ವೀರಗಲ್ಲುಗುಡಿ ಇತ್ತು. ಎಲ್ಲವೂ ನಶಿಸಿ ಹೋಗಿದೆ. ಗ್ರಾಮದ ಹಿರಿಯರೊಂದಿಗೆ ಚರ್ಚಿಸಿ, ವೀರಗಲ್ಲುಗುಡಿಯನ್ನು ಮತ್ತೇ ಪುರುತ್ಥಾನಗೊಳಿಸಲು ಚಿಂತನೆ ನಡೆಸಲಾಗುತ್ತದೆ. ಪುರಾತನ ಕಾಲದಲ್ಲಿ ಈ ಗುಡಿಯಲ್ಲಿ ಅನ್ನದಾನ, ಪರ್ವ ಹೀಗೆ ಹಲವಾರು ರೀತಿಯಲ್ಲಿ ಪೂಜೆಗಳು ನಡೆಯುತ್ತಿದ್ದವು ಎಂದು ಹಿರಿಯರು ಹೇಳುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು. ಬೈಟ್ ಕೆ.ಶ್ರೀನಿವಾಸ್ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕೆ.ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಮಣ್ಣಿನಲ್ಲಿ ಮರೆಯಾಗುತ್ತಿದ್ದ ವೀರಗಲ್ಲು ದುರಸ್ಥಿಗೊಳಿಸಿದರು.
Be the first to comment