ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡುವ ಬಗ್ಗೆ ಎಚ್ಚರವಿರಲಿ ಬಿಜೆಪಿಯ ನಳೀನ್‌ಕುಮಾರ್ ಕಟಿಲ್ ಅವರ ಟೀಕೆ ಖಂಡಿಸುವಂತಹದ್ದು – ಮಾಜಿ ಶಾಸಕ ಕೆ.ವೆಂಕಟಸ್ವಾಮಿ 

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡಬೇಕಾದರೆ ಬಹಳಷ್ಟು ಯೋಚನೆ ಮಾಡಿ ಮಾತನಾಡಬೇಕು. ಬಹಳ ನೋವಿನ ಸಂಗತಿ ಎಂದರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ರಾಹುಲ್ ಗಾಂಧಿಯವರ ಗಾಂಧಿಜಿಯವರು, ಪ್ರಾಣ ತ್ಯಾಗ ಮಾಡಿದ್ದು ವರ ಅಜ್ಜಿ ಇಂದಿರಾಗಾಂಧಿ ಅದೇ ರೀತಿ ರಾಜೀವ್‌ಗಾಂಧಿಯೂ ಸಹ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನುಭಾವರ ಮಗ ರಾಹುಲ್‌ಗಾಂಧಿಯವರ ಬಗ್ಗೆ ಬಹಳ ತುಚ್ಯವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸ್ವಲ್ಪ ಜವಾಬ್ದಾರಿಯುತವಾಗಿರಬೇಕು. ಪಕ್ಷದ ಬಗ್ಗೆ ಮಾತನಾಡಲಿ ತಪ್ಪೇನು ಇಲ್ಲ ಆದರೆ, ಒಬ್ಬ ವ್ಯಕ್ತಿಯ ಬಗ್ಗೆ ಹೇಳಿಕೆ ಕೊಡುವುದು ಖಂಡನೀಯ ಮುಂದಿನ ದಿನಗಳಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಯುವ ಕಾಂಗ್ರೆಸ್ ಉಗ್ರ ಹೋರಾಟ ಮಾಡಲಿದೆ. ಮೊನ್ನೆಯಷ್ಟೇ ಪ್ರಧಾನಿಯವರ ಬಗ್ಗೆಯೂ ಮಾತನಾಡಿದ್ದು ಸಹ ಅದು ತಪ್ಪೇ ಆ ಮಾತನ್ನು ವಾಪಾಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವುದನ್ನು ಮೊದಲು ಬಿಡಬೇಕು. ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದರು.

CHETAN KENDULI

ಯಾವುದೇ ಪಕ್ಷಗಳು ಅಧಿಕಾರಕ್ಕೆ ಬರಲಿ, ಬರದೇ ಹೋಗಲಿ, ಪಕ್ಷದಲ್ಲಿದ್ದಾಗ ಮಾಡಿರುವ ಸಾಧನೆಗಳನ್ನು ಹೇಳಬೇಕಾಗುತ್ತದೆ. ಆದರೆ ಬಿಜೆಪಿ ಸರಕಾರದಲ್ಲಿನ ವೈಫಲ್ಯಗಳನ್ನು ಹೇಳಬೇಕಾಗುತ್ತದೆ. ನೋಟ್‌ಬ್ಯಾನ್ ಮಾಡಿದರು ಅದರಿಂದ ಬ್ಯಾಂಕುಗಳ ಮುಂದೆ ನಿಂತ ಸುಮಾರು ಜನರು ಸಾವನ್ನಪ್ಪಿರುವ ಘಟನೆಗಳು ಇವೆ. ಉದ್ಯೋಗ ಕಲ್ಪಿಸುತ್ತೇವೆ ಅಂದರು ಅದು ಸಹ ಆಗಲಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಯಾರಿಗೂ ನಿವೇಶನ ಕಲ್ಪಿಸಿಲ್ಲ. ವೈಯಕ್ತಿಕವಾಗಿ ಯಾವುದನ್ನು ತೆಗೆದುಕೊಳ್ಳಬಾರದು. ಪಕ್ಷಾತೀತವಾಗಿ ಕೊರೊನಾ ಬಂದ ಮೇಲೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿಲ್ಲವೆ, ಕೊರೊನಾ ಸಾವನ್ನಪ್ಪಿರುವವರ ಕುಟುಂಬದವರಿಗೆ ಪರಿಹಾರ ನೀಡಿಲ್ಲ, ಕಡೇ ಪಕ್ಷ ಸಾಂತ್ವಾನವನ್ನು ಸಹ ಹೇಳಿಲ್ಲ ಈ ಬಿಜೆಪಿ ಸರಕಾರ. ೨೦೧೩ರಲ್ಲಿ ನಮ್ಮ ದೇಶದ ಸಾಲ ೬೫ಲಕ್ಷ ಕೋಟಿ ಇತ್ತು. ಆದರೆ ಇವತ್ತು ೧೩೫ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇವತ್ತು ಎಲ್ಲಾ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಈ ರೀತಿ ಮಾಡಿದರೆ ಹೇಗೆ ದೇಶ ಅಭಿವೃದ್ಧಿಯಾಗುತ್ತದೆ. ತೈಲಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಬಗ್ಗೆ ಮಾತನಾಡುವುದನ್ನು ಬಿಟ್ಟು ವೈಯಕ್ತಿಕವಾಗಿ ಹೇಳುವುದು ಸರಿಯಾದ ಕ್ರಮವಲ್ಲ ಎಂದು ಗುಡುಗಿದರು. 

ದೇವನಹಳ್ಳಿ ಪಟ್ಟಣದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಕಚೇರಿ ಮರು ಸ್ಥಾಪನೆಗೆ ೭೦ಲಕ್ಷ ರೂ. ವೆಚ್ಚ ತೋರಿಸುತ್ತಿದ್ದಾರೆ. ಅದು ಸಮಗ್ರ ತನಿಖೆಯಾಗಬೇಕು. ಸಂಪೂರ್ಣವಾಗಿ ಕಾಮಗಾರಿಯಾಗದ ೧೦೦ಬೆಡ್‌ಗಳ ಆಸ್ಪತ್ರೆಯನ್ನು ತರಾತುರಿಯಲ್ಲಿ ಉದ್ಘಾಟಿಸಿದ್ದಾರೆ. ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ಕೂಡಲೇ ಅಭಿವೃದ್ಧಿಗೊಳಿಸಬೇಕು. ಕ್ಷೇತ್ರದ ಶಾಸಕರು ಮೂರು ವರ್ಷದ ಅವಧಿಯಲ್ಲಿ ಮಾಡಿರುವ ಕಾಮಗಾರಿಗಳ ಪಟ್ಟಿ ಮಾಡಿಕೊಡಲು ಕೇಳಲಾಗಿದೆ ಎಂದು ಹೇಳಿದರು. 

ಕಾಂಗ್ರೆಸ್ ಮುಖಂಡ ಜಿ.ವೇಣುಗೋಪಾಲ್ ಮಾತನಾಡಿ, ಒಂದು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಯಾವ ರೀತಿ ನಡೆದುಕೊಳ್ಳಬೇಕು ಎಂಬುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರಿಗೆ ತಿಳಿದಿಲ್ಲವೇ, ರಾಜೀವ್‌ಗಾಂಧಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೀಳು ಮಟ್ಟದ ಪದಗಳನ್ನು ಉಪಯೋಗಿಸುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ವಾಜಪೇಯಿ ಅಜಾತ ಶತ್ರು ಎಂಬಂತೆ ಹೆಸರು ತೆಗೆದುಕೊಳ್ಳಬೇಕು. ಯಾರೇ ಆಗಲಿ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಅವರು ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆಯಲ್ಲಿ ಪುರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಸಿ.ಚಂದ್ರಪ್ಪ ಇದ್ದರು.

Be the first to comment

Leave a Reply

Your email address will not be published.


*