ಗೋಪೂಜೆ ಸಲ್ಲಿಸುವುದರ ಮೂಲಕ ವಿಜಯದಶಮಿ ಆಚರಣೆ — ನಿರ್ಮಿತಿ ಕೇಂದ್ರದಲ್ಲಿ ಹಬ್ಬದ ವಾತಾವರಣ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲೂಕಿನ ಬೊಮ್ಮವಾರ ರಸ್ತೆಯಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ವಿಜಯದಶಮಿ ಆವರಣೆಯನ್ನು ವಿಭಿನ್ನ ರೀತಿಯಲ್ಲಿ ಗೋವಿನ ಪೂಜೆ ನೆರವೇರಿಸಿ ಆಚರಿಸಲಾಯಿತು.ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಕುಮಾರ್ ಮಾತನಾಡಿ, ನಿರ್ಮಿತಿ ಕೇಂದ್ರದಲ್ಲಿ ಈ ಬಾರಿ ಗೋಪೂಜೆ ಮಾಡುವುದರ ಮೂಲಕ ಪ್ರಾರಂಭಿಸಿ ಎಲ್ಲಾ ಆಯುಧಗಳಿಗೆ, ವಾಹನಗಳು, ಇತರೆ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಲಾಗಿದೆ. ಈ ಬಾರಿ ಭಗವಂತನು ಎಲ್ಲರಿಗೂ ಶುಭವನ್ನು ತರಲಿ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಅತ್ಯಂತ ಸರಳವಾಗಿ ಈ ಬಾರಿ ವಿಜಯದಶಮಿ ಪೂಜಾಕೈಂಕರ್ಯಗಳನ್ನು ಮಾಡಲಾಗಿದೆ ಎಂದರು. 

CHETAN KENDULI

ಗೋವಿನ ಪೂಜೆ ಮಾಡುವ ಸಂದರ್ಭದಲ್ಲಿ ಗೋವಿನ ಅಂಗಾಗಳಲ್ಲಿ ದೇವಾನ್ ದೇವತೆಗಳು ಇವೆ ಎಂಬುವುದರ ಬಗ್ಗೆ ಅರ್ಚಕರು ಗೋವಿನ ಮಹತ್ವದ ಬಗ್ಗೆ ಮತ್ತು ಹಿಂದೂ ಸಂಪ್ರದಾಯದಲ್ಲಿ ಗೋಪೂಜೆ ಯಿಂದ ಲಭಿಸುವ ಫಲಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರು, ಇಂಜಿನೀಯರ್‍ಸ್, ಸಿಬ್ಬಂದಿಗಳು, ಇದ್ದರು. 

Be the first to comment

Leave a Reply

Your email address will not be published.


*