ರಾಜ್ಯ ಸುದ್ದಿಗಳು
ಭಟ್ಕಳ
ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಯ ಸುಳ್ಳು ಪ್ರಮಾಣಪತ್ರ ಪಡೆದುಕೊಂಡು ಅವಾಂತರ ಸೃಷ್ಟಿಸಿದ್ದಾರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ “ಹಸ್ಲರ್” ಹೆಸರಿನ “ಹೊಲೆಯ” ಜಾತಿಯಂತೆ ದಕ್ಷಿಣ ಕನ್ನಡ ಜಿಲ್ಲೆಯ “ಮೊಗೇರ್” ಎಂಬ ಜಾತಿಯ ಸಮಾನಾಂತರ ಹೆಸರಿನ ದುರುಪಯೋಗ ಪಡೆದುಕೊಂಡ ಮೀನುಗಾರ ಮೊಗೇರರು ನೈಜ ಪರಿಶಿಷ್ಟರ ಸರ್ಕಾರಿ ಸೌಲಭ್ಯ ಪಡೆದು ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ, ಈ ಸುಳ್ಳು ಪ್ರಮಾಣ ಪತ್ರದ ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇತ್ತೀಚಿಗೆ ಭಟ್ಕಳ ತಾಲೂಕಿನ ಪಟ್ಟಣ ಪಂಚಾಯಿತಿಯ ಪರಿಶಿಷ್ಟರ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಪರಿಶಿಷ್ಟ ಜಾತಿಯವರಲ್ಲದ ಮೀನುಗಾರ ಮೊಗೇರರು ನಾಮಪತ್ರ ಸಲ್ಲಿಸಿದ್ದಾರೆ, ಪರಿಶಿಷ್ಟ ಜಾತಿಯವರಲ್ಲದ ಉಮೇದುವಾರಿಕೆಯನ್ನು ರದ್ದುಪಡಿಸುವಂತೆ ಮತ್ತು ಅವರಿಗೆ ಪರಿಶಿಷ್ಟ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡದಂತೆ ಭಟ್ಕಳದಲ್ಲಿ ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ ನಾರಾಯಣ ಶಿರೂರ್ ರವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಭೆಗೆ ಕಾರವಾರಕ್ಕೆ ಧರಣಿ ನಿರತರಿಗೆ ಆಹ್ವಾನಿಸಲಾಯಿತು,
ಆದ್ರೆ ಉತ್ತರ ಕನ್ನಡ ಜಿಲ್ಲಾ ಜಾತಿ ಪರಿಶೀಲನಾ ಸಭೆಯಲ್ಲಿ ನ್ಯಾಯ ಸಿಗಗಿಲ್ಲ, ಅದಕ್ಕಾಗಿ ಹಿರಿಯ ದಲಿತ ಹೋರಾಟಗಾರ ನಾರಾಯಣ ಶಿರೂರು ರವರು ಭಟ್ಕಳದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರದ ವಿರುದ್ಧ ತಮ್ಮ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ, ಈ ಹೋರಾಟಕ್ಕೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ನಿಜವಾದ ಪರಿಶಿಷ್ಟ ಜಾತಿಯ “ಮೊಗೇರ್” ಜನಾಂಗದವರು ತಮ್ಮ ಬೆಂಬಲ ಸೂಚಿಸಿದ್ದಾರೆ, ಜೊತೆಗೆ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಪರಿಶಿಷ್ಟ ರು ನಾರಾಯಣ ಶಿರೂರು ರವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ, ನಾರಾಯಣ ಶಿರೂರು ರವರ ನ್ಯಾಯಯುತ ಹೋರಾಟಕ್ಕೆ ನಾವೆಲ್ಲ ಪರಿಶಿಷ್ಟರು ಬೆಂಬಲ ಸೂಚಿಸೋಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ರವರ ಸಂವಿಧಾನವನ್ನು ಎತ್ತಿ ಹಿಡಿದು ಸುಳ್ಳುಜಾತಿ ಪ್ರಮಾಣ ಪತ್ರವನ್ನು ಪಡೆದವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸೋಣ ಎಂದಿದ್ದಾರೆ.
Be the first to comment