ಗಿಡಗಳಿಗೆ ನೀರುಣಿಸಿ ಹುಟ್ಟುಹಬ್ಬ ಆಚರಣೆ….!!! ಪರಿಸರ ಕಾಳಜಿ ಎಲ್ಲರಲ್ಲಿ ಬರಬೇಕು: ಕುಲಕರ್ಣಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಭೂಮಿಯ ತಾಪಮಾನ ಹೆಚ್ಚುತ್ತ ನಡೆದಿದ್ದು, ಅದರ ನಿಯಂತ್ರಣಕ್ಕೆ ನಾವು ಗಿಡಗಳನ್ನು ಕಡಿಯುವುದನ್ನು ನಿಲ್ಲಿಸಬೇಕು, ಜೊತೆಗೆ ಗಿಡಗಳನ್ನು ನೆಡುವ ಕೆಲಸ ಮಾಡಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸರಾವ ಕುಲಕರ್ಣಿ  ಹೇಳಿದರು.

ಅವರು ಶುಕ್ರವಾರ ಪಟ್ಟಣದ ಹುಡ್ಕೋ ಸಮೀಪದ ನಾಯನೇಗಲಿ ಬಡಾವಣೆಯಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರುಣಿಸಿ, ತಮ್ಮ ಹುಟ್ಟು ಹಬ್ಬ ಆಚರಿಸಿ ಮಾತನಾಡಿದರು.

ನಾವು ಹುಟ್ಟು ಹಬ್ಬದ ಆಚರಣೆಗೆ ಸಾಕಷ್ಟು ದುಂದುವೆಚ್ಚ ಮಾಡುತ್ತೇವೆ, ಇದರೊಂದಿಗೆ ಪ್ರತೀ ಹುಟ್ಟುಹಬ್ಬಕ್ಕೆ, ಕನಿಷ್ಠ ಒಂದು ಗಿಡ ನೆಟ್ಟರೆ ಭೂಮಿಯೇ ನಂದನವನವಾಗುತ್ತದೆ ಎಂದರು. ಜೀವವಿಮಾ ನಿಗಮದ ಶಾಖಾ ವ್ಯವಸ್ಥಾಪಕ ಕೆ.ಎಸ್.ಕಲ್ಯಾಣಶೆಟ್ಟಿ ಮಾತನಾಡಿ, ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ, ನಂತರ ಗಿಡಗಳನ್ನು ಒಂದು ಹಂತದವರೆಗೆ ರಕ್ಷಿಸಿ, ನೀರುಣಿಸಿ, ಬೆಳೆಸುವುದು ಸಹ ಅಷ್ಟೇ ಮುಖ್ಯವಾಗಿದೆ. ಪಟ್ಟಣದಲ್ಲಿ ಹಸಿರು ತೋರಣ ಗೆಳೆಯರ ಬಳಗ ಮಾಡುತ್ತಿರುವ ಪರಿಸರದ ಕೆಲಸ ಅರ್ಥಪೂರ್ಣವಾದುದು ಹಾಗೂ ಉಳಿದವರಿಗೂ ಮಾದರಿಯಾಗಿದೆ ಎಂದರು. ಸಭೆಯನ್ನದ್ದೇಶಿಸಿ ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ವಕೀಲರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕಲ್ಯಾಣಮಠ, ಕಾರ್ಯದರ್ಶಿ ಕಿರಣ ಕಡಿ, ಸಂಚಾಲಕ ಮಹಾಬಲೇಶ್ವರ ಗಡೇದ, ಮಾಜಿ ಅಧ್ಯಕ್ಷ  ಅಶೋಕ ರೇವಡಿ, ಬಿ.ಎಸ್.ಮೇಟಿ, ರವಿ ಗೂಳಿ, ಎಂ.ಎಸ್.ಬಾಗೇವಾಡಿ, ವೆಂಕನಗೌಡ ಪಾಟೀಲ, ಸುರೇಶ ಕಲಾಲ, ಎಲ್.ಎಂ.ಚಲವಾದಿ, ರವಿ ತಡಸದ, ವೀರೇಶ ಹಂಪನಗೌಡ್ರ, ಬಿ.ಎಂ.ಪಲ್ಲೇದ, ಜಿ.ಎಂ.ಹುಲಗಣ್ಣಿ, ಡಾ.ಸಿ.ಕೆ.ಶಿವಯೋಗಿಮಠ, ವಿಲಾಸ ದೇಶಪಾಂಡೆ, ವಿಶ್ವನಾಥ ನಾಗಠಾಣ, ಸಾಥಪ್ಪ ಗುರುಬಟ್ಟಿ, ಸಿದ್ದನಗೌಡ ಪಾಟೀಲ, ಬಸವರಾಜ ಬಿಜ್ಜೂರ, ಶಿವಕುಮಾರ ಶಾರದಳ್ಳಿ, ಹಣಮಂತ ಬೆಳಗಲ್ಲ, ಸೋಮನಾಳ, ತಾಳಿಕೋಟಿ ಮತ್ತಿತರರು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ವೀರೇಶ ಹಂಪನಗೌಡ್ರ ವಂದಿಸಿದರು.

Be the first to comment

Leave a Reply

Your email address will not be published.


*