ಶ್ರೀ ಮಾರಿಕಾಂಬಾ ದೇವಸ್ಥಾನದ ಸೇವಾದರ ವಿಪರೀತ ಹೆಚ್ಚಳ – ಹಳೆ ಧರ್ಮದರ್ಶಿಗಳ ಹೆಗಲೇರಿಸಿ ತಪ್ಪಿಸಿಕೊಳ್ಳಲೆತ್ನಿಸುತ್ತಿರುವ ನೂತನ ಧರ್ಮದರ್ಶಿಗಳು

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಶಿರಸಿ

ಶ್ರೀ ಮಾರಿಕಾಂಬಾ ದೇವಸ್ಥಾನದ ಸೇವಾ ದರವನ್ನು ಅತಿಯಾಗಿ ಹೆಚ್ಚಿಸಿದ್ದೂ ಅಲ್ಲದೇ, ಇದರಲ್ಲಿ ತಮ್ಮದೆನೂ ಇಲ್ಲ, ಹಳೆಯ ಧರ್ಮದರ್ಶಿಗಳೇ ಪರಿಷ್ಕೃತ ದರ ಸಿದ್ದಪಡಿಸಿದ್ದು, ತಾವು ಕೇವಲ ಅನುಷ್ಠಾನಕ್ಕೆ ತಂದಿದ್ದೇವೆ ಎನ್ನುವ ಅರ್ಥದಲ್ಲಿ ತಮ್ಮ ಹೆಗಲ ಮೇಲಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.ಪರಿಷ್ಕೃತ ಸೇವಾದರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಒಂದಕ್ಕೆ ಹತ್ತರಷ್ಟು ಒಮ್ಮೆಲೇ ಹೆಚ್ಚಿಸಿದ್ದು ತಪ್ಪು ಎಂದು ಸಾರ್ವಜನಿಕರು ಮಾತನಾಡಲಾರಂಭಿಸಿದ್ದಾರೆ.

CHETAN KENDULI

ಹಳೆಯ ಧರ್ಮದರ್ಶಿಗಳ ಹೆಗಲ ಮೇಲೆ ಜವಾಬ್ದಾರಿ ಹೊರಿಸಿ, ತಮ್ಮದೆನೂ ಇಲ್ಲವೇ ಇಲ್ಲ ಎಂಬರ್ಥದ ಜಾವಾಬ್ದಾರಿ ಮರೆತದ್ದು ವಿಪರ್ಯಾಸವೇ ಸರಿ.ಈ ಹಿಂದಿನ ಸಮಯದಲ್ಲಿ ಹಲವು ಅಕ್ರಮಗಳು ದೇವಸ್ಥಾನದ ಆಡಳಿತದಲ್ಲಿ ನಡೆದಿದೆ ಎಂಬ ಅನುಮಾನವಿದ್ದು, ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ ಎಂಬ ಮಾಹಿತಿ ಇದ್ದು, ಇದರ ತನಿಖೆ ನಡೆಸದೇ ಕೇವಲ ಬೊಕ್ಕಸ ತುಂಬಿಸಿ ಜನರ ತಲೆಗೆ ಕಟ್ಟಲು ಯತ್ನಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ‌.

ಕಾಲಕ್ಕೆ ತಕ್ಕಂತೆ ದರಪಟ್ಟಿಯೂ ಹೆಚ್ಚಬೇಕು ಎಂಬುದು ಸರಿಯಾದರೂ, ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ಹಿಂಪಡೆಯದೇ, ಜನರ ಜೇಬಿಗೆ ಒಮ್ಮೆಲೆ ಭಾರೀ ಪ್ರಮಾಣದಲ್ಲಿ ದರ ನಿಗದಿಪಡಿಸಿದ್ದು ಸರಿಯಾದ ಕ್ರಮವಲ್ಲ.ಪರಿಷ್ಕೃತ ದರಪಟ್ಟಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 5 ರ ಒಳಗೆ ಅವಕಾಶವಿದ್ದು, ಸಾರ್ವಜನಿಕರು ಆಕ್ಷೇಪ ಸಲ್ಲಿಸಬಹುದಾಗಿದೆ.

Be the first to comment

Leave a Reply

Your email address will not be published.


*