ಮತ್ತಿಘಟ್ಟ ಊರ ಜನರ ಶ್ರಮದಾನದಲ್ಲಿ ರಸ್ತೆ ತೆರವು ಕಾರ್ಯ; ಸ್ವರ್ಣವಲ್ಲೀ ಮಠದಿಂದ ಕಿಟ್-ಔಷಧಿ ವಿತರಣೆ

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಶಿರಸಿ

ಸ್ವರ್ಣವಲ್ಲಿ ಶ್ರೀಗಳ ಆದೇಶದ ಮೇರೆಗೆ ಜು.25 ರಂದು ಮತ್ತಿಘಟ್ಟದ ಊರ ನಾಗರೀಕರು ಹಾಗೂ ಆಯ್.ಎಮ್.ಎ. ಶಿರಸಿಯ ವೈದ್ಯರುಗಳು, ಸ್ವರ್ಣವಲ್ಲಿ ಸಂಸ್ಥಾನದ ಹವ್ಯಕ ಜಾಗೃತಿ ಪಡೆಯವರು ಅಂಕೋಲಾ ತಾಲೂಕಿನ ಹಳವಳ್ಳಿ, ಕೋನಾಳ, ರಾಮನಗುಳಿ, ಕಲ್ಲೇಶ್ವರ ಭಾಗದ ನೆರೆ ಸಂತ್ರಸ್ತರ ಕೆಲವು ಮನೆಗಳಿಗೆ ತೆರಳಿ, ಅವರ ಕಷ್ಟಗಳಲ್ಲಿ ಪಾಲ್ಗೊಂಡು ಸಂಸ್ಥಾನದ ಕೆಲವು ಕಿಟ್‍ಗಳನ್ನು ಹಾಗೂ ರೋಗಿಗಳಿಗೆ ಔಷಧಿಗಳನ್ನೂ ವಿತರಿಸಿದರು.ಇದಕ್ಕೂ ಪೂರ್ವ ಜು.24 ರಂದು ಈ ನೆರೆಸಂತ್ರಸ್ತ ಭಾಗಗಳಿಗೆ ತೆರಳಲು ಇರುವ ಏಕೈಕ ಮಾರ್ಗವಾದ ಮತ್ತಿಘಟ್ಟ-ಕೆಳಗಿನಕೇರಿ-ಕಮ್ಮಾಣಿ ರಸ್ತೆಗಳನ್ನು ಮತ್ತಿಘಟ್ಟದ ಊರ ನಾಗರಿಕರು ರಸ್ತೆ ತೆರವು ಕಾರ್ಯವನ್ನು ಮಾಡಿದರು.

CHETAN KENDULI

ಈ ಕೆಲಸದಲ್ಲಿ ಪ್ರಮುಖರಾದ ಶ್ರೀ ಗೋಪಾಲಕೃಷ್ಣ ವೈದ್ಯ, ಆನಂದ ವೈದ್ಯ, ಆದರ್ಶ ಭಟ್ಟ, ನಚಿಕೇತ ಹೆಗಡೆ, ಗಿರಿಧರ ಹೆಗಡೆ, ಶ್ರೀಕಾಂತ ಗೌಡ, ಸುಬ್ರಾಯ ಸಿದ್ದಿ, ಪ್ರಭಾಕರ ಗೌಡ, ಪ್ರವೀಣ ಗೌಡ, ರಾಮು ಗೌಡ, ಸುರೇಶ ಗೌಡ, ನಾಗಪತಿ ಹೆಗಡೆ, ರಘುನಂದನ ಮರಾಠಿ, ಮಾದೇವ ಗೌಡ, ಮಂಜುನಾಥ ಗೌಡ, ಗಣಪತಿ ಗೌಡ, ಪುರುಷ ಗೌಡ, ರಾಜು ಹೆಗಡೆ, ಗಪ್ಪು ಗೌಡ ಹಾಗೂ ಮಸ್ಕತ್ತಿ ಕುಟುಂಬದವರು ಸಹಕರಿಸಿದರು.ಕಳೆದ ವರ್ಷ ಈ ಪ್ರದೇಶದಲ್ಲಿ ನೆರೆ ಉಂಟಾದಾಗ ಇದೇ ಮತ್ತಿಘಟ್ಟ ದಾರಿಯಲ್ಲಿ ಸಂತ್ರಸ್ತರಿಗೆ ಸಂಚಾರ ವ್ಯವಸ್ಥೆಯಾಗಿದ್ದು ,ಇನ್ನೂ ಹಸಿಯಾಗಿ ಇರುವಾಗಲೇ ಈ ವರ್ಷವೂ ಗುಳ್ಳಾಪುರ ಸೇತುವೆ ಕುಸಿದಿದ್ದರಿಂದ ಆ ಭಾಗದ ಸಂಪರ್ಕಕ್ಕೆ ಮತ್ತಿಘಟ್ಟದ ರಸ್ತೆಯೇ ಸುಲಭ ಸಂಪರ್ಕವೆಂದು ಸಾಬೀತಾಗಿದ್ದು, ಇನ್ನಾದರೂ ಈ ಮತ್ತಿಘಟ್ಟ-ಕೆಳಗಿನಕೇರಿ-ಕಮ್ಮಾಣಿ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಸರಕಾರ ಮಾಡಲಿ ಎಂಬುದು ಸಾರ್ವಜನಿಕರ ಅಹವಾಲಾಗಿದೆ.

Be the first to comment

Leave a Reply

Your email address will not be published.


*