ಟಿಪ್ಪು ದೇಶದ್ರೋಹಿ ಅಲ್ಲ, ದೇಶ ಪ್ರೇಮಿ : ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಕೆ.ಶಿವಪ್ಪ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಇಡೀ ಭಾರತದ ಅರಸರೆಲ್ಲ ಬ್ರಿಟಿಷರ ವಿರುದ್ಧ ಮಂಡಿಯೂರಿ ಅವರ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಗುಲಾಮಗಿರಿಯಲ್ಲಿ ಬದುಕುತ್ತಿರುವಾಗ ಕನ್ನಡ ನಾಡಿನ ಕಾವೇರಿ ತೀರದ ಮೈಸೂರು ಸೀಮೆಯ ವೀರಕನ್ನಡಿಗನೊಬ್ಬ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಎದೆಗೊಟ್ಟು ಉತ್ತರಕೊಟ್ಟಿದ್ದ ಆ ಏಟು ಅಂತಿಂತ ಏಟಲ್ಲ ಭಾರತದಲ್ಲಿ ಬ್ರಿಟಿಷರ ಬೇರುಗಳು ಅಲುಗಾಡತೊಡಗಿದ್ದವು. ಅಷ್ಟೇ ಅಲ್ಲ ಇಲ್ಲಿ ಕೊಟ್ಟ ಏಟಿನ ಸದ್ದು ಬ್ರಿಟನ್ನಿಗೆ ತಲುಪಿ ಬ್ರಿಟಿಷ್ ದೊರೆಗಳ ನಿದ್ದೆಗೆಡಿಸಿತ್ತು ತನ್ನ ನಾಡಿನ ರಕ್ಷಣೆಗಾಗಿ ಬ್ರಿಟೀಷರಿಗೆ ತನ್ನ ಮಕ್ಕಳನ್ನೇ ಒತ್ತೆಯಾಳಾಗಿಸಿದ್ದ ಮಹಾನ್ ದೇಶಭಕ್ತ ಮೈಸೂರು ಹುಲಿ ಟಿಪ್ಪುಸುಲ್ತಾನ್ ದೇಶದ್ರೋಹಿ ಅಲ್ಲ ಪರಮ ದೇಶ ಭಕ್ತ ಎಂದು ದೇವನಹಳ್ಳಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಕೆ.ಶಿವಪ್ಪ ತಿಳಿಸಿದರು.

CHETAN KENDULI

ದೇವನಹಳ್ಳಿಯಲ್ಲಿರುವ ಟಿಪ್ಪು ಜನ್ಮಸ್ಥಳದಲ್ಲಿ ಪುಷ್ಪಮಾಲೆ ಅರ್ಪಿಸಿ ಮಾತನಾಡಿದ ಅವರು ಈಗಿನ ಕನ್ನಂಬಾಡಿ ಆಣೆಕಟ್ಟಿನ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು, ಈ ನಾಡಿಗೆ ರೇಷ್ಮೆಯನ್ನು ತಂದು ಲಕ್ಷಾಂತರ ರೈತರ ಬದುಕಿಗೆ ಬೆಳಕು ನೀಡಿದ್ದು, ಕೇರಳದ ಕೆಳವರ್ಗದ ಹೆಣ್ಣುಮಕ್ಕಳ ಸ್ಥನ ತೆರಿಗೆ ರದ್ದುಪಡಿಸಿದ್ದು, ಭಾರತದ ನೆಲದಲ್ಲಿ ಆಧುನಿಕ ಯುದ್ದೋಪಕರಣಗಳನ್ನು ತಯಾರಿಸಿ ಬೆಳೆಸಿದ್ದು, ಮರಾಠರು ಶೃಂಗೇರಿ ಶಾರದಾಪೀಠವನ್ನು ಧ್ವಂಸಗೊಳಿಸಿ, ಅದನ್ನು ಲೂಟಿ ಮಾಡಿಕೊಂಡು ಹೋದಾಗ, ಅದಕ್ಕಾಗಿ ಶೃಂಗೇರಿ ಸ್ವಾಮಿಗಳ ಕ್ಷಮೆ ಕೇಳಿ, ಲೂಟಿ ಮಾಡಿಕೊಂಡ ಆಭರಣಗಳನ್ನು ಮತ್ತೆ ಮಾಡಿಸಿಕೊಟ್ಟು ಮಠವನ್ನು ಜೀರ್ಣೋದ್ಧಾರ ಮಾಡಿದ್ದು, ಹೀಗೆ ಹಿಂದೂ ದೇವಾಲಯಗಳಿಗೆ ನೆರವು ನೀಡಿದ ನೂರಾರು ಉದಾಹರಣೆಗಳನ್ನು ಕೊಡಬಹುದು. ಯಾರು ಭೂಮಿ ಉಳುತ್ತಾರೋ, ಅವರು ಯಾವ ಜಾತಿಯವರೇ ಆಗಿದ್ದರೂ ಅವರಿಗೆ ಭೂಮಿ ಒಡೆತನ ನೀಡಬೇಕೆಂದು ಘೋಷಣೆ ಮಾಡಿದ. ದೇವಸ್ಥಾನ ಮತ್ತು ಮಠಗಳ ವಶದಲ್ಲಿದ್ದ ನೂರಾರು ಎಕರೆ ಭೂಮಿಯನ್ನು ಅಲ್ಲಿ ಉಳುಮೆ ಮಾಡುವ ಶೂದ್ರರಿಗೆ ಹಂಚಿದ್ದು ಇದು ವೀರ ಕನ್ನಡಿಗನೊಬ್ಬನ ಇತಿಹಾಸ, ರಾಜಕೀಯವಲ್ಲ ಇವೆಲ್ಲ ಆತನ ಸ್ವಾಭಿಮಾನ, ನಾಗರಿಕರ ಕನಿಷ್ಠ ಘನತೆ, ರಾಜ್ಯದ ರಕ್ಷಣೆಗೆ ತೋರಿದ ಕಾಳಜಿ ವ್ಯಕ್ತಪಡಿಸುತ್ತವೆ ಇದಕ್ಕಾಗಿ ಭಾರತದ ಸಂವಿಧಾನದ ಮೂಲ ಪ್ರತಿಯಲ್ಲಿ ಟಿಪ್ಪುವಿನ ಚಿತ್ರ ಅಳವಡಿಸಲಾಗಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನೆ ಬಣದ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್ ಗೌಡ ಮಾತನಾಡಿ ಟಿಪ್ಪು ಕನ್ನಡ ನಾಡಿನ ಹೆಮ್ಮೆ, ವೀರ ಕನ್ನಡಿಗ, ಯುದ್ಧದಲ್ಲಿ ಶತ್ರುದೇಶಗಳ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಕಾರಣಕ್ಕಾಗಿ ತನ್ನದೇ ತಂದೆಯ ಸೇನಾ ದಳದ ಮುಖ್ಯಸ್ಥ ಮಖ್ಬುಲ್ ಅಹಮದ್ ನನ್ನು ಶಿಕ್ಷೆಗೆ ಗುರಿಪಡಿಸಿದ ಟಿಪ್ಪು ಸುಲ್ತಾನ್. ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸಿದ ಕನ್ನಡ ಭಾಷಿಕ ಪ್ರದೇಶಗಳನ್ನು ಮೊದಲ ಬಾರಿಗೆ ಒಂದುಗೂಡಿಸಿದ ಶ್ರೇಯಸ್ಸು ಟಿಪ್ಪು ಸುಲ್ತಾನ್ ಗೆ ಸಲ್ಲುತ್ತದೆ. ಆಗ ಗುಲಬರ್ಗಾ, ಬೀದರ್ ಸೇರಿದಂತೆ ಕೆಲ ಭಾಗಗಳು ಹೊರತುಪಡಿಸಿ ಇಡೀ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದಲ್ಲಿ ವಿಲೀನಗೊಂಡಿದ್ದವು. ನಲವತ್ತು ವರ್ಷ ಮಾತ್ರ ಬಾಳಿ ಮರಣ ಹೊಂದಿದ ಟಿಪ್ಪು ನಂತರ ಮತ್ತೆ ಕರ್ನಾಟಕ ಒಡೆದು ಚೂರುಚೂರಾಯಿತು ಎಂದರು.

ಕನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ ನೀರಾವರಿ ಸೌಲಭ್ಯ ಕಲ್ಪಿಸಲು ಟಿಪ್ಪು ಸಾಕಷ್ಟು ಶ್ರಮಿಸಿದ. ಹಳೆಯ ಮೈಸೂರಿನ ಕೋಲಾರ-ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ ಮುಂತಾದ ಕಡೆ ನಾವು ಕಾಣುವ ಕೆರೆಕಟ್ಟೆಗಳು ನಿರ್ಮಾಣಗೊಂಡಿದ್ದು ಆತನ ಕಾಲದಲ್ಲಿ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳಿದ್ದು ೧೭೬೧ ರಿಂದ ೧೭೯೯ರ ತನಕ. ಈ ೩೮ ವರ್ಷಗಳಲ್ಲಿ ಅವರು ಯುದ್ಧ ಮಾಡದ ಒಂದೇ ಒಂದು ವರ್ಷವೂ ಇಲ್ಲ. ಹೀಗಾಗಿ ಟಿಪ್ಪು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ನಿರ್ಮಾಣದ ಅದ್ಭುತ ಶಿಲ್ಪಕಲೆಯ ದೇವನಹಳ್ಳಿಯ ಐತಿಹಾಸಿಕ ಕೋಟೆ ಟಿಪ್ಪು ಬಲವಂತದ ಮತಾಂತರ ಮಾಡುತ್ತಿದ್ದ ಎಂಬ ಆರೋಪ ಕೋಮುವಾದಿಗಳು ಮಾಡುತ್ತಾರೆ. ಇದು ನಿಜವೇ ಆಗಿದ್ದರೆ ಶ್ರೀರಂಗಪಟ್ಟಣ ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಈಗ ಹಿಂದೂಗಳಿಗಿಂತ ಮುಸಲ್ಮಾನರ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಮತಾಂತರ ನಡೆದೇ ಇಲ್ಲವೆಂದಲ್ಲ. ಹಿಂದೂ ಧರ್ಮದಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ರೋಸಿ ಹೋದ ದಲಿತರು ಮತಾಂತರ ಮಾಡಿರಬಹುದು ಎಂದರು ಈ ಸಂಧರ್ಭದಲ್ಲಿ ಇತಿಹಾಸ ಸಂಶೋದಕ ಗುರುಸಿದ್ದಯ್ಯ, ಅಲ್ಪ ಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಗಯಾಜ್ ಪಾಷಾ, ಪ್ರಧಾನ ಕಾರ್ಯದರ್ಶಿ ನಾಸೀರ್,ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ,ಜಿಲ್ಲಾ ಕಾರ್ಯದರ್ಶಿ ಮುರಳಿ, ಅಸ್ಲಾಂ ಮತ್ತಿತರರು ಉಪಸ್ಥಿತರಿದ್ದರು,

Be the first to comment

Leave a Reply

Your email address will not be published.


*