ರಾಜ್ಯ ಸುದ್ದಿಗಳು
ದೇವನಹಳ್ಳಿ
ಸುಮಾರು ವರ್ಷಗಳಿಂದ ಶೆಟ್ಟೇರಹಳ್ಳಿ ಗ್ರಾಮದ ರಸ್ತೆ ಸಮಸ್ಯೆ ಬಗೆಹರಿಯದಿರುವುದರಿಂದ ಶೆಟ್ಟೇರಹಳ್ಳಿ ಗ್ರಾಮದ ಸರ್ವೆ ನಂ.೩ರಲ್ಲಿರುವ ಜಮೀನಿನ ಮಾಲೀಕರು ಪ್ರಸ್ತುತ ಗ್ರಾಮಕ್ಕೆ ಹಾದುಹೋಗಿರುವ ರಸ್ತೆಗೆ ಟ್ರಂಚ್ ಹೊಡೆದಿರುವುದರಿಂದ ಗ್ರಾಮಸ್ಥರಿಗೆ ಇದೀಗ ರಸ್ತೆ ಸಮಸ್ಯೆ ಭುಗಿಲೆದ್ದಿದೆ. ಹೇಳಿ ಕೇಳಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಜ್ಜಿಯವರ ಗ್ರಾಮದಲ್ಲಿಯೇ ರಸ್ತೆ ಸಮಸ್ಯೆ ಎದುರಾಗಿರುವುದು ಈ ಗ್ರಾಮದಲ್ಲಿ ಗ್ರಾಮದ ನಕಾಶೆಯಲ್ಲಿ ತೋರಿಸುವಂತೆ ಬಂಡಿ ದಾರಿಯನ್ನು ಅಧಿಕಾರಿಗಳು ಸರಿಯಾಗಿ ಸರ್ವೆ ನಡೆಸದೆ, ಏಕಾಏಕಿ ಸುಮಾರು ೧೨೦ ವರ್ಷಗಳಿಂದ ರಸ್ತೆಯಲ್ಲಿ ಓಡಾಟ ಮಾಡುತ್ತಿದ್ದ ರಸ್ತೆಯನ್ನು ಸರ್ವೆಯರ್‌ಗಳು ಸರ್ವೆ ಕಾರ್ಯ ನಡೆಸಿ ರಸ್ತೆಯಲ್ಲಿ ಟ್ರಂಚ್ ಹೊಡೆದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಗ್ರಾಮಸ್ಥರು ಮತ್ತು ಖಾಸಗಿ ಜಮೀನಿನ ಮಾಲೀಕರು ಮಾತಿನ ಚಕಮಕಿ ನಡೆಸುವುದರ ಮೂಲಕ ರಸ್ತೆ ಕಿತ್ತಾಟಕ್ಕೆ ಮುಂದಾಗಿದ್ದಾರೆ. ೧೨೦ ವರ್ಷಗಳಿಂದ ಆಗಿನ ಪೂರ್ವಜರು ಮಾಡಿರುವ ರಸ್ತೆಗೆ ಇದೀಗ ಬೇಲಿ ಬಿದ್ದಂತಾಗಿದೆ.
ನಕಾಶೆ ಗುರ್ತಿಸಿ ರಸ್ತೆ ಮಾಡಿಕೊಡಲು ಒತ್ತಾಯ: ನಕಾಶೆಯಲ್ಲಿ ತೋರಿಸುವಂತೆ ರಸ್ತೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದು, ಆ ರಸ್ತೆ ಆಗುವವರೆಗೆ ಹಾಲಿ ರಸ್ತೆಯನ್ನು ಉಪಯೋಗಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಇದೀಗ ರಸ್ತೆಯೇ ಇಲ್ಲದಂತಾಗಿದೆ. ಅಧಿಕಾರಿಗಳು ಏನು ಕ್ರಮಕೈಗೊಳ್ಳದಿರುವುದು ಬೇಸರ ತಂದಿದೆ. ಕೂಡಲೇ ರಸ್ತೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಸ್ತೆ ವ್ಯಜ್ಯಕ್ಕೆ ಸಂಬಂಧಿಸಿದಂತೆ ಖಾಸಗಿ ಜಾಗದ ಮಾಲೀಕ ಶೇಖರ್ ಮಾತನಾಡಿ, ಮೊದಲಿನಿಂದಲೂ ರಸ್ತೆ ಇದೆ ಆದರೆ ಸರ್ವೆ ಪ್ರಕಾರ ಈ ರಸ್ತೆ ಇಲ್ಲಿ ಬರುವುದಿಲ್ಲ ಬೇರೆಕಡೆ ಇದೆ. ಇಲ್ಲಿ ಓಡಾಡೋಕೆ ರಸ್ತೆ ಮಾಡಿಲ್ಲ. ಅದಕ್ಕೆ ಸ್ವಂತ ಖಾಸಗಿ ಜಾಗದಲ್ಲಿದ್ದ ರಸ್ತೆಯನ್ನು ಮುಚ್ಚಿದ್ದಾರೆ. ಇದನ್ನು ಮುಚ್ಚಿದ್ದರಿಂದ ಗ್ರಾಮಸ್ಥರು ಗಲಾಟೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಗ್ರಾಮದ ಮುಖಂಡ ಸುಧಾಕರ್ ಮಾತನಾಡಿ, ನಮ್ಮ ಹಿರಿಯಕರು ಮಾಡಿದ್ದ ಜಾಗದಲ್ಲಿ ಇದೀಗ ಜಮೀನು ಪಡೆದಿರುವವರು ವ್ಯಜ್ಯಕ್ಕೆ ಕಾರಣವಾಗುತ್ತಿದೆ. ನಕಾಶೆಯಲ್ಲಿ ಅರ್ಧ ಗ್ರಾಮಕ್ಕೆ ದಾರಿ ಇದೆ. ಸರ್ವೆ ನಂ.೧ರಲ್ಲಿ ೫೦೦-೬೦೦ಅಡಿ ಉದ್ದ ರಸ್ತೆ ಯಾರು ಬಿಡಲ್ಲ. ಆಗಿನ ಹಿರಿಯರು ಬಿಟ್ಟಿದ್ದ ರಸ್ತೆಯನ್ನು ಖಾಸಗಿಯವರು ಜಮೀನು ಕೊಂಡುಕೊಂಡು ಗ್ರಾಮದ ಜನರಿಗೆ ಅನಾನುಕೂಲ ಮಾಡುತ್ತಿದ್ದಾರೆ. ಶಾಸಕರ ಅಜ್ಜಿಯವರ ಊರು ಇದೆ ಆಗಿದೆ. ಈ ರಸ್ತೆಯಲ್ಲಿ ಶಾಸಕರು ಸಹ ಚಿಕ್ಕಂದಿನಿಂದಲೂ ಓಡಾಡಿದ್ದೇನೆ ಎಂದು ಹೇಳಿದ್ದಾರೆ ನಮಗೆ ರಸ್ತೆ ಮಾಡಿಕೊಡಬೇಕು ಅಷ್ಟೇ ಎಂದರು. ಈ ವೇಳೆಯಲ್ಲಿ ಗ್ರಾಮಸ್ಥರು ಮತ್ತು ಖಾಸಗಿ ಜಮೀನಿನ ಮಾಲಿಕರು ಇದ್ದರು.
Be the first to comment