ತಾಲೂಕ ವಿದ್ಯುತ್ ಗುತ್ತಿಗೆದಾರ ಪದಾಧಿಕಾರಿಗಳ ನೇಮಕ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

 

ಮಸ್ಕಿ

CHETAN KENDULI

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಗುತ್ತಿಗೆದಾರ ಸಭೆ ನಡೆಸಲಾಯಿತು.ನಂತರ ತಾಲೂಕ ವಿದ್ಯುತ್ ಗುತ್ತಿಗೆದಾರರ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಇಲ್ಲಿನ ಉಪ ವಿಭಾಗ ಜೆಸ್ಕಾಂ ಕಾರ್ಯಾಲಯ ಮುಂದೆ ನೂತನ ಪದಾಧಿಕಾರಿಗಳನ್ನು ಸನ್ಮಾನ ಮಾಡಲಾಯಿತು. ಗೌರವ ಅಧ್ಯಕ್ಷರನ್ನಾಗಿ ಪಂಪಣ್ಣ ಶೆಟ್ಟಿ, ಅಧ್ಯಕ್ಷರಾಗಿ ಪ್ರಶಾಂತ್ ಮುರಾರಿ, ಉಪಾಧ್ಯಕ್ಷರಾಗಿ ಪ್ರಕಾಶ್ ಪಾಟೀಲ್, ಕಾರ್ಯದರ್ಶಿಯಾಗಿ ಜಮದಗ್ನಿ ಗೋನಾಳ, ಖಜಾಂಚಿಯಾಗಿ ರವಿ ಬಡಿಗೇರ್ ಇವರನ್ನು ನೇಮಕ ಮಾಡಲಾಯಿತು. 

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾದ ಮಲ್ಲಪ್ಪ ಅಮೀನಗಡ, ನಿಂಗಪ್ಪ ಚೌಹಾನ್, ಜಯರಾಜ ನುಗಡೋಣಿ, ಕಾರ್ತಿಕ ಬಿದನೂರು ಮಠ, ಸಂಗಮೇಶ್ ಸಂತೆಕಲ್ಲೂರು, ಬಸವರಾಜು, ಶಂಕರ ಬಂಡಿ, ದೇವರಾಜ್, ತಿರಕನ ಗೌಡ ಬಳಗಾನೂರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆಂಚಪ್ಪ ಭಾವಿಮನಿ, ಸಹಾಯಕ ಅಭಿಯಂತರ ವೆಂಕಟೇಶ್, ತಿರುಪತಿ ನಾಯಕ್, ಶ್ರೀಶೈಲ ಪಾಟೀಲ್ ಸೇರಿದಂತೆ ಇನ್ನಿತರರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*