ವೀಕೆಂಡ್ ಕರ್ಪ್ಯೂ: ಗ್ರಾಮೀಣ ರೈತರಿಗೆ ವಿನಾಯಿತಿಗೆ ಅಗ್ರಹ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಹೊಂದಿ, ನಗರ ಪ್ರದೇಶದಲ್ಲಿ ವಾಸ್ತವ್ಯ ಮಾಡುತ್ತಿರುವ ರೈತಾಪಿ ಕುಟುಂಬದ ಸದಸ್ಯರಿಗೆ ವಾರಾಂತ್ಯದ ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ನಗರ ವಾಸ್ತವ್ಯದ ಸ್ಥಳದಿಂದ ಕೃಷಿ ಕ್ಷೇತ್ರಕ್ಕೆ ಓಡಾಡಲು ವಿನಾಯಿತಿ ನೀಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾಧಿಕಾರಿಗಳಿಗೆ ಅಗ್ರಹಿಸಿದ್ದಾರೆ.  ಕೃಷಿ ಭೂಮಿ ಗ್ರಾಮೀಣ ಭಾಗದಲ್ಲಿ ಹೊಂದಿರುವ ಮತ್ತು ನಗರ ಪ್ರದೇಶದಲ್ಲಿ ವಾಸ್ತವ್ಯ ಮನೆ ಹೊಂದಿರುವAತಹ ರೈತಾಪಿ ಕುಟುಂಬದ ಸದಸ್ಯರು ದಿನನಿತ್ಯ ಕೃಷಿ ಚಟುವಟಿಕೆಗೆ ಗ್ರಾಮೀಣ ಭಾಗಕ್ಕೆ ಓಡಾಡುವುದು ಅನಿವಾರ್ಯವಾಗಿರುತ್ತದೆ. ಇಂತಹ ರೈತಾಪಿ ಕುಟುಂಬದ ಸದಸ್ಯರಿಗೆ ವೀಕೆಂಡ್ ಕರ್ಪ್ಯೂದಿಂದ ಕೃಷಿ ಚಟುವಟಿಕೆಗೆ ನಿರ್ಭಂದಿಸಿದAತಾಗುತ್ತದೆ.

CHETAN KENDULI

ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಹೊಂದಿ ಪಹಣಿ ಪತ್ರಿಕೆ ಹೊಂದಿರುವAತಹ ರೈತ ಕುಟುಂಬಗಳಿಗೆ ಅವಶ್ಯ ಚಟುವಟಿಕೆಗಳಿಗೆ ವೀಕೆಂಡ್ ಕರ್ಪ್ಯೂದಿಂದ ವಿನಾಯಿತಿ ನೀಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.

  ಗ್ರಾಮೀಣ ರೈತರು ಕೃಷಿ ಪೂರಕ ಚಟುವಟಿಕೆಗೆ ಸಂಬAಧಿಸಿ ನಗರ ಪ್ರದೇಶಕ್ಕೆ ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ, ಪಹಣಿ ಪತ್ರಿಕೆಯ ದಾಖಲೆ ಹೊಂದಿರುವAತಹ ರೈತ ಕುಟುಂಬ ಸದಸ್ಯರಿಗೂ ನಗರ ಪ್ರದೇಶದಲ್ಲಿ ಸಂಚರಿಸುವ ಸಂದರ್ಭದಲ್ಲಿ ಕಿರುಕುಳ ಮತ್ತು ತೊಂದರೆ ಆಗದ ರೀತಿಯಲ್ಲಿ ಜಿಲ್ಲಾಡಳಿತವು ಕ್ರಮ ಜರುಗಿಸಬೇಕೆಂದು ರವೀಂದ್ರ ನಾಯ್ಕ ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.

Be the first to comment

Leave a Reply

Your email address will not be published.


*