ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಗಾಂಧಿ ವೃತ್ತದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಪುರಸಭೆಯ ಕಚೇರಿ, ಬಾವಿಕಟ್ಟಿ, ದೈವದಕಟ್ಟಿ, ಕನಕ ವೃತ್ತ ಗಚ್ಚಿನಮಠ, ಸೇರಿದಂತೆ ಇನ್ನಿತರೆ ವಿವಿಧ ಬಡಾವಣೆಗಳಿಂದ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಕಾಲ್ನಡಿಗೆಯ ಜಾಥಾ ಮೂಲಕ ಹಳೆ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಲ್ಲಿ ಸೇರಿ ಕೆಲವು ಗಂಟೆಗಳ ಕಾಲ ಪ್ರತಿಭಟಿಸಿ ಎ.ಜೆ ಸದಾಶಿವ ಆಯೋಗ ಜಾರಿ ಮಾಡುವ ಕುರಿತು ದಲಿತ ಪರ ಸಂಘಟನೆಗಳು ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದರು. ಈ ದೇಶದಲ್ಲಿ ಮನುವಾದಿಗಳ ಕುತಂತ್ರದಿಂದ ಜಾತಿ ವ್ಯವಸ್ಥೆಯನ್ನು ನಿರ್ಮಾಣಮಾಡಿದ ಮೂಲನಿವಾಸಿ ಅಸ್ಪೃಶ್ಯ ದಲಿತ ಜನಾಂಗವನ್ನು ನಾಯಿ ಹಂದಿಗಿಂತ ಕೀಳಾಗಿ ಗೋಪುರಕ್ಕೆ ಸಾರ್ವಜನಿಕ ಸ್ಥಳಗಳಿಗೆ ನಿಷೇಧ ಹೇರುವ ಮೂಲಕ ನೀರು ಮುಟ್ಟಿದರೆ ಮೈಲಿಗೆ ನೆರಳು ಸೋಕಿದರೆ ಮೈಲಿಗೆ ಆಗುತ್ತದೆ ಎಂದು ಊರಾಚೆಗೆ ಇಟ್ಟು ಬಿಟ್ಟು ಚಾಕ್ರಿ ಮಾಡಿಸಿಕೊಂಡು ಶಾಶ್ವತವಾಗಿ ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಿ ಪ್ರಾಣಿಗಳಿಗಿಂತ ಹೀನಾಯ ಬದುಕು ಸಾಗುವಂತೆ ಮಾಡಿ, ಆ ಬದುಕು ಸಾಗಿಸಿದವರೇ ಮೂಲ ಅಸ್ಪೃಶ್ಯ ಜಾತಿಗಳಾದ ಮಾದಿಗ-ಹೊಲೆಯ, ಮೋಚಿ, ಸಮಗಾರ, ಡಕ್ಕಲಿಗ ಸಂಬಂಧಿತ ಜಾತಿಗಳು ಈ ಅನಿಷ್ಠ ಪದ್ಧತಿಯ ವ್ಯವಸ್ಥೆಯನ್ನು ಮುತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಈ ದೇಶದಲ್ಲಿ ಅನೇಕ ಸಾಮಾಜಿಕ ಪರಿವರ್ತನೆಗಳು ಹೋರಾಟಗಳು ಇಡೀ ದೇಶಾದ್ಯಂತ ನಡೆದವು. ಅದರ ಪ್ರತಿಫಲವೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯರ ಬದುಕಿಗೆ ಬೆಳಕಾಗಿ ಬಂದರು.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿರಂತರ ಹೋರಾಟದ ಪ್ರಯುಕ್ತ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಈ ಜಾತಿ ವ್ಯವಸ್ಥೆಯ ವಿರುದ್ಧ ಸಮಾನ ಅವಕಾಶಗಳಿಗಾಗಿ ಮತ್ತು ಪ್ರತ್ಯೇಕ ಶಿಕ್ಷಣಕ್ಕೆ, ಉದ್ಯೋಗಕ್ಕೆ ಮೀಸಲಾತಿ ನೀಡಲು 1932 ರಲ್ಲಿ ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ವಾದ ಮಂಡಿಸಿದರು. ಅವರ ಹೋರಾಟದ ಪ್ರತಿಫಲವೇ ಇಂದು ಮೀಸಲಾತಿ ಜಾರಿಗೆ ಬಂದಿದ್ದು, ಅದರ ಪ್ರತಿಫಲವೇ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಎಂಎಲ್ಎ, ಎಂಪಿ, ಜೆಡ್ ಪಿ, ಟಿಎಂಸಿ ಪಿಪಿ, ಜಿಪಿ ಸದಸ್ಯರಾಗಲು ಅಂಬೇಡ್ಕರ್ ಅವರೇ ಕಾರಣ ಎನ್ನುವುದು ನಾವ್ಯಾರೂ ಮರೆಯಬಾರದು. ಮುಂದೆ ಸ್ವತಂತ್ರ ಭರತವಾದಾಗ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದರು. ಶೋಷಣೆಗೆ ಒಳಪಟ್ಟ ಅಸ್ಪೃಶ್ಯರಿಗೆ ಶೇಕಡಾ 15% ರಷ್ಟು ಮೀಸಲಾತಿಯನ್ನು ನೀಡಿ ದೇಶದಲ್ಲಿ ಸಂಪೂರ್ಣ ಅಸ್ಪೃಶ್ಯತೆಯ ನಿವಾರಣೆ ಮಾಡುವಂತೆ ಅವಕಾಶ ಕಲ್ಪಿಸಿದರು. ಆದರೆ ದೇಶ ಸ್ವಾತಂತ್ರ್ಯ ಗೊಂಡು ಇಂದಿಗೆ 72 ವರ್ಷ ಗತಿಸಿದರೂ ನಮ್ಮನ್ನಾಳುವ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದಲಿತರ ಮೇಲೆ ದೌರ್ಜನ್ಯ ಮಹಿಳೆಯರ ಮೇಲೆ ಮತ್ತು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಅವುಗಳನ್ನು ತಡೆಗಟ್ಟ ಬೇಕಾದ ಸರ್ಕಾರಗಳು ಸಂಪೂರ್ಣ ವಿಫಲವಾದ ಪ್ರಯುಕ್ತ ಮನೆ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದ ದಲಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಸಹಕರಿಸದಿದ್ದಕ್ಕೆ ಯಾಕೆ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಅದಕ್ಕೆ ಇಲ್ಲಿಯವರೆಗೂ ಆಕೆಯ ಕುಟುಂಬಕ್ಕೆ ಕನಿಷ್ಠ ಪರಿಹಾರ ನೀಡುವಲ್ಲಿಯೂ ಕೂಡ ಸರ್ಕಾರ ವಿಫಲವಾಗಿದೆ. ಈಗ ಟನೆಗೆ ಇಡೀ ರಾಜ್ಯಾದ್ಯಂತ ಹೋರಾಟದ ಮೂಲಕ ಆಕ್ರೋಶ ವ್ಯಕ್ತ ವಾಗುತ್ತದೆ. ಗೃಹಮಂತ್ರಿಗಳು ಸೂಕ್ತ ಕ್ರಮವಹಿಸಿ ಆರೋಪಿಗಳನ್ನು ಗಲ್ಲು ಶಿಕ್ಷೆ ನೀಡಲು ಕ್ರಮವಹಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ.ಡಾಕ್ಟರ್ ಬಾಬಾ ಸಾಹೇಬರ ಅವರ ಪ್ರಯತ್ನದಿಂದ ಬಂದ ಶೇಕಡಾ 15 ಪರ್ಸೆಂಟ್ ಮೀಸಲಾತಿಯನ್ನು ಸಮಾಜದ ಮುಖ್ಯವಾಹಿನಿಗೆ ಬರುವುದನ್ನು ಗಮನಿಸಿದ ಮನುವಾದಿಗಳು ಆಡಳಿತ ನಡೆಸಿದ ಸರಕಾರಗಳು ಅಸ್ಪೃಶ್ಯರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಸಮರ್ಪಕವಾಗಿ ನೀಡದೆ ಇಲ್ಲಿಯವರೆಗೂ ಜಾತಿಗಳನ್ನು ವಂಚಿಸುತ್ತಾ ಬಂದಿದ್ದಾರೆ.ಈ ನಡುವೆ ಓಟಿನ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಶೇಕಡಾ 15% ರಲ್ಲಿ ಅಸ್ಪಶ್ಯ ಜಾತಿಗಳಿಗೆ ಇದ್ದ ಮೀಸಲಾತಿಗೆ ಎಲ್ ಜಿ ಹಾವನೂರ ವರದಿ ಆಧಾರದ ಮೇಲೆ ಮತ್ತಷ್ಟು ಸ್ಪೃಶ್ಯ ಜಾತಿಗಳಾದ ಬೋವಿ, ಬಂಜಾರ, ಕೊರಮ, ಕೊರಚ ಜಾತಿಗಳನ್ನು ಸೇರಿಸಿದರು. ಈ ವರದಿಯ ವಿರುದ್ಧ ಯಾವುದೇ ಅಸ್ಪೃಶ್ಯ ಜಾತಿಗಳು ವಿರೋಧಿಸದೆ ಇದ್ದರೆ ಜಾತಿಗಳನ್ನು ನಮ್ಮ ಸಮಾನರು ಎಂದು ತಿಳಿದು ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಿದರು.
ಆದರೆ ಸರ್ಕಾರಗಳು ಶೇಕಡ 15% ರ ಮೀಸಲಾತಿ ಯನ್ನು ಹೆಚ್ಚಿಸದೆ ಇದ್ದ ಕಾರಣದಿಂದ ಇಂದು ಪರಿಶಿಷ್ಟರಲ್ಲಿ ಮೀಸಲಾತಿಯಲ್ಲಿ ಅಂಗೈಯಷ್ಠಿದ್ದವರು. ಅಂಗಳವನುಂಗಿದರು ಎನ್ನುವ ರೀತಿಯಲ್ಲಿ ವ್ಯತ್ಯಾಸಗಳಾಗಿವೆ. ಇದರಿಂದ ಮೀಸಲಾತಿಯಲ್ಲಿ ಅನಾಥರಾದ ಮೂಲ ಅಸ್ಪೃಶ್ಯರು ಒಳಮೀಸಲಾತಿ ಹೋರಾಟಕ್ಕೆ ಸಿದ್ಧರಾದರು. ಮೊದಲಿಗೆ ಆಂಧ್ರದಲ್ಲಿ ಆರಂಭಗೊಂಡ ಒಳಮೀಸಲಾತಿ ಗಾಗಿ ನಡೆದ ಹೋರಾಟದಿಂದ ಪ್ರೇರಿತರಾದ ಮೂಲ ಅಸ್ಪೃಶ್ಯರು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯಾವಾರು ಮೀಸಲಾತಿಗಾಗಿ ಆಗ್ರಹಿಸುತ್ತಾ ಬಂದಿದ್ದಾರೆ. ಹೋರಾಟಕ್ಕೆ ಮಣಿದ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಅವರು ರಾಜ್ಯಾದ್ಯಂತ ಅಧ್ಯಯನ ಮಾಡಿ ಸರ್ಕಾರಕ್ಕೆ ತಮ್ಮ ವರದಿಯನ್ನು ನೀಡಿ ಎಂಟು ವರ್ಷಗಳಾಗುತ್ತಾ ಬಂದಿದೆ. ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಜಾತಿಯ ಜನಸಂಖ್ಯಾವಾರು ಮೀಸಲಾತಿ ಹಂಚಿಕೆ ಮಾಡಲು ಮಾದಿಗ 28 ಜಾತಿಗಳಿಗೆ ಶೇಕಡ 6% ವಲಯ ಸಂಬಂಧಿತ 25 ಜಾತಿಗಳಿಗೆ ಶೇಕಡ 5% ಸ್ಪರ್ಶ ಜಾತಿಗಳಿಗೆ ಶೇಕಡ 3% ಇತರ ಜಾತಿಗಳಿಗೆ ಶೇಕಡ 1% ನೀಡುವಂತೆ ಶಿಫಾರಸ್ಸು ಮಾಡಿದೆ. ಪರಿಶಿಷ್ಟರ ಐಕ್ಯತೆಯನ್ನು ಸಾಧಿಸುವ ಮೂಲಕ ಜಾತಿ ಜನಸಂಖ್ಯಾವಾರು ಮೀಸಲಾತಿ ಅನಿಸಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಅಸಮತೋಲನವನ್ನು ಸರಿಪಡಿಸಲು ಹಂಚಿಕೆಯ ಬಗ್ಗೆ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗವು ನೀಡಿರುವ ವರದಿಯನ್ನು ಕಂಪನಿ ಸದನದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಯಥಾವತ್ತಾಗಿ ಜಾರಿಗೊಳಿಸುವಂತೆ ಈ ಬೃಹತ್ ಪ್ರತಿಭಟನೆ ಮೂಲಕ ದಲಿತ ಸಂಘಟನೆಗಳ ಒಕ್ಕೂಟ ಮಸ್ಕಿ ವತಿಯಿಂದ ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದರು.ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು,ಕಾರ್ಯದರ್ಶಿಗಳು , ಖಜಾಂಚಿ, ಸದಸ್ಯರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ತಾಲ್ಲೂಕಿನ ವಿವಿಧ ಗ್ರಾಮದ ಸದಾಶಿವ ಆಯೋಗಕ್ಕೆ ಒಳಪಡುವ ಎಲ್ಲಾ ಸಮುದಾಯದ ಮಹಿಳಾ ಮತ್ತು ಪುರುಷ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment