ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆ ವಿವಿಧ ಸಂಘಟನೆಗಳಿಂದ ಟಿಪ್ಪುವಿಗೆ ಗೌರವ ಸಮರ್ಪಣೆ 

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ ಜನಿಸಿದ್ದು, ಇದೇ ದೇವನಹಳ್ಳಿಯ ಹೃದಯಭಾಗದಲ್ಲಿ ಇಂದು ಟಿಪ್ಪುಸುಲ್ತಾನನ ಜಯಂತಿ ಹಲವಾರು ಅಭಿಮಾನಿಗಳಿಂದ ಅಪ್ಪಟ ದೇಶ ಪ್ರೇಮಿ ಹಾಗೂ ಬ್ರಿಟೀಷರ ಹೃದಯ ನಡುಗಿಸಿದ ಸುಲ್ತಾನ ಟಿಪ್ಪುಗೆ ವಿಶೇಷ ಗೌರವ ಸಮರ್ಪಿಸಲಾಯಿತು. 

CHETAN KENDULI

ನವೆಂಬರ್ ೧೦ ಟಿಪ್ಪುಜಯಂತಿಯ ಅಂಗವಾಗಿ ದೇವನಹಳ್ಳಿಯ ಟಿಪ್ಪುಸುಲ್ತಾನ ಜನ್ಮಸ್ಥಳ ಮತ್ತು ಪುತ್ಥಳಿಗೆ ಅನೇಕ ಅಭಿಮಾನಿಗಳು ಮಾಲಾರ್ಪಣೆ ಮಾಡಿದರು. ಜಯಂತಿಯ ಕಾರ್ಯಕ್ರಮದಲ್ಲಿ ಜಾತಿ ಬೇಧ ಮರೆತು ಸರ್ವಧರ್ಮಿಯರು ವಿಶೇಷ ನಮನ ಸಲ್ಲಿಸಿದರು. ರೈತ ಸಂಘಟನೆಯಿಂದ ಪುಷ್ಪಮಾಲೆಯನ್ನು ಹಾಕಲಾಯಿತು. ಟಿಪ್ಪುಸುಲ್ತಾನ್ ಚರಿತ್ರೆಯ ವಿವಿಧ ಕನ್ನಡ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕರ್ನಾಟಕ ರಾಜ್ಯ ಸದಸ್ಯ ನಾಸೀರ್ ಹುಸೇನ್, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಅಸೀಫ್ ಸೇಟ್, ಟಿಪ್ಪುಸುಲ್ತಾನರ ೭ನೇ ಸಂತತಿಯವರಾದ ಮನ್ಸೂರ್ ಅಲಿ ಹಾಗೂ ವೀರಕನ್ನಡಿಗರ ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ನಾಜೀರ್ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡು ಟಿಪ್ಪುಸುಲ್ತಾನರಿಗೆ ಗೌರವ ಅರ್ಪಿಸಿದರು. ಟಿಪ್ಪುಸುಲ್ತಾನ ಜನ್ಮಸ್ಥಳದಲ್ಲಿ ಟಿಪ್ಪು ಜಯಂತಿಯಲ್ಲಿ ಕನ್ನಡ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನಿಡಿದು ಭಾವಪೂರ್ವ ಶ್ರದ್ಧಾಂಜಲಿಯನ್ನು ಮುಖಂಡರು ಅರ್ಪಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸದಸ್ಯ ನಾಸೀರ್ ಹುಸೇನ್, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಅಸೀಫ್ ಸೇಟ್, ಕನ್ನಡ ನಾಜೀರ್ ಹಾಗೂ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಎಂ.ಲೋಕೇಶ್ ಮಾತನಾಡಿದರು. ರಾಜ್ಯ ಕೆಪಿಸಿಸಿ ಎಸ್‌ಸಿ ಘಟಕದ ಕಾರ್ಯದರ್ಶಿ ಪ್ರಕಾಶ್, ಡಿಎಸ್‌ಎಸ್ ಸಂಚಾಲಕ ನರಸಪ್ಪ, ಜಿಲ್ಲಾ ಮೈನಾರಿಟಿ ಕಾಂಗ್ರೆಸ್‌ನ ಮುಬಾರಕ್, ರೈತ ಮುಖಂಡರಾದ ಗಾರೆ ರವಿಕುಮಾರ್, ಗಯಾಜ್‌ಪಾಶ, ಯೂಸುಫ್, ಟಿಪ್ಪು ಅಭಿಮಾನಿಗಳ ಬಳಗ ಅಧ್ಯಕ್ಷ ಅಫ್ಸೂ, ಶಬ್ಬೀರ್, ನವೀದ್, ಮುತ್ತು, ಭರತ್, ಎಚ್.ಎಂ.ಎಸ್ ಆಸೀಫ್, ಮುಖಂಡರಾದ ಮ್ಯಾಥ್ಯು, ಭೂವನಹಳ್ಳಿ ಆನಂದ್, ಎಸ್‌ಡಿಪಿಐನ ಮೌಲ, ನಾಸೀರ್, ಸಲೀಂ, ಅರ್ಶದ್, ಸೇರಿದಂತೆ ಹಲವಾರು ಪಾಲ್ಗೋಂಡಿದ್ದರು.

Be the first to comment

Leave a Reply

Your email address will not be published.


*