ಬಾಗಲಕೋಟೆ:ಇಳಕಲ್ಲ ತಾಲೂಕು ಗುಡೂರ ಗ್ರಾಮದಲ್ಲಿ ಹುಲ್ಲೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಭಾರತದ ಅಮೃತ ಮಹೋತ್ಸವದ ಅಂಗವಾಗಿ, ತಾಲೂಕ ಕಾನೂನು ಸೇವಾ ಸಮಿತಿ ಹುನಗುಂದ, ವಕೀಲರ ಸಂಘ ಹುನಗುಂದ ಮತ್ತು ತಾಲೂಕ ಆಡಳಿತ ಹುನಗುಂದ ತಾಲೂಕ ಪಂಚಾಯತಹುನಗುಂದ ಇವರ ಸಂಯುಕ್ತ ಆಶ್ರಯದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಹುನಗುಂದ ವಕೀಲರ ಸಂಘದ ಅಧ್ಯಕ್ಷರು ಎಮ್ ಬಿ ಪಾಟೀಲ ಉದ್ಘಾಟಿಸಿ ಎಲ್ಲರಿಗೂ ಕಾನೂನು ಒಂದೇ ಕಾನೂನು ನಿಯಮಗಳನ್ನು ನಾಗರಿಕರು ತಿಳಿದುಕೊಳ್ಳಬೇಕು ಎಂದು ಹೇಳುದರು, ಕಾನೂನು ಅರಿವು ಉಪನ್ಯಾಸವನ್ನು ಎಮ್, ಆರ್, ಮಾರೇನಕೊಳ್ಳದ ವಕೀಲರು ಆರೋಪಿ ಮತ್ತು ಅಪರಾಧಿಗೆ ಇರುವ ಕಾನೂನು ನೆರವು ಪ್ರಯೋಜನದ ಬಗ್ಯೆ ಹಾಗೂ ಪ್ರತಿಯೊಬ್ಬ ನಾಗರಿಕರು ಕಾನೂನು ಮತ್ತು ನಿಯಮಗಳನ್ನು ಅನುಸರಿಸಿ ಶಾಂತಿಯುತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ಉಪನ್ಯಾಸನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ಪಿ. ಎಚ್. ಗೌಡರ. ಗ್ರಾಮ ಪಂಚಾಯತ ಅಧ್ಯಕ್ಷರು ಶ್ರೀಮತಿ ಚಾಂದನಿ ಇಟಗಿ, ಉಪಾಧ್ಯಕ್ಷರಾದ ಹಣಮಂತ ತೊಟ್ಲಪ್ಪನವರ, ಗ್ರಾಮ ಪಂಚಾಯತ ಅಕೌಂಟನ್ಸಿಗಳಾದ ಕೊರಿಶೆಟ್ಟರ್, ಗ್ರಾಮ ಪಂಚಾಯತ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ತುಪ್ಪದ ಹಾಗೂ ಕಾಖಂಡಕಿ ಉಪಸ್ಥಿತರಿದ್ದರು.
Be the first to comment