ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಜನ ನಾಯಕರಾಗಿ ಹೊರಹೊಮ್ಮಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರ ೫೩ನೇ ಜನ್ಮ ದಿನದ ಸಂಭ್ರಮವು ಎರಡನೇ ದಿನಕ್ಕೂ ಮುಂದು ವರೆದಿದೆ. ಇದೇ ಸಂದರ್ಭದಲ್ಲಿ ದಿಡೀರ್ ಪ್ರತಕ್ಷರಾದ ನಾಗಾಸಾಧುಗಳು ಗುರು ಪೂರ್ಣಿಮಾ ದಿನದಂದು ಶಾಸಕರಿಗೆ ಆಶೀರ್ವದಿಸಿದ್ದು ಅಚ್ಚರಿಕೆಯಾಗಿದೆ.
ಹೌದು, ಗುರುವಾರ ಶಾಸಕರ ಜನ್ಮದಿನವನ್ನು ಮುದ್ದೇಬಿಹಾಳ ಕ್ಷೇತ್ರದ ಜನತೆ ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಣೆಯನ್ನು ಮಾಡಿದರು. ಆದರೆ ಮುದ್ದೇಬಿಹಾಳ ಹಾಗೂ ದೇ.ಹಿಪ್ಪರಗಿ ಮತಕ್ಷೇತ್ರದ ಮೂಲೆ ಮೂಲೆಯಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಶಾಸಕ ನಡಹಳ್ಳಿಯವರಿಗೆ ಜನಾಭಿನಂದನೆಗಳು ಎರಡನೇ ದಿನಕ್ಕೂ ಹರಿದು ಬರುತ್ತಿದೆ.
ಸಂಭ್ರಮದ ಮದ್ಯಯೂ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದ ಶಾಸಕ ನಡಹಳ್ಳಿ:
ಗುರುವಾರ ಶಾಸಕರ ಜನ್ಮದಿನ ವಿದ್ದರೂ ಸಾವಿರಾರು ಜನರು ಅಭಿನಂದನೆ ಸಲ್ಲಿಸಲು ಅವರ ದಾಸೋಹ ನಿಲಯಕ್ಕೆ ಆಗಹಿಸಿದ್ದರು. ಎಲ್ಲ ಅಭಿಮಾನಿಗಳನ್ನೂ ಹಾಗೂ ಅಧಿಕಾರಿಗಳನ್ನು ಬೇಟಿಯಾಗಿ ಧನ್ಯತೆಗಳನ್ನು ಅರ್ಪಿಸಿದ ಶಾಸಕ ನಡಹಳ್ಳಿ ಅವರು ಸಮಯಕ್ಕೆ ಬೆಲೆ ತೆತ್ತಿ ಮುದ್ದೇಬಿಹಾಳ ತಾಲೂಕಿನ ಬಂಗಾರಗುಂಡ ಸೇರಿದಂತೆ ವಿವಿಧಡೆಯಲ್ಲಿ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಭೂಮಿ ಪೂಜೆ ಸಲ್ಲಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನೋಟ್‌ಬುಕ್ ವಿತರಣೆ:
ಹಿಂದಿನಿಂದಲೂ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆಯನ್ನು ಮಾಡುತ್ತಿದ್ದ ಸೇವೆಯನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತಮ್ಮ ಜನ್ಮದಿನದಂದು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಅಂದಾಜು 5 ಲಕ್ಷ ನೋಟ್‌ಬುಕ್‌ಗಳನ್ನು ತಯ್ಯಾರಿಸಲಾಗುತ್ತಿದ್ದು ಮೊದಲನೇ ಹಂತವಾಗಿ 2.5 ಲಕ್ಷ ನೋಟ್‌ಬುಕ್‌ಗಳು ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಕೆಲ ಕುಟುಂಬಗಳು ಕೊರೊನಾದಿಂದ ಆರ್ಥಿಕವಾಗಿ ಭಾರಿ ಹಿನ್ನಡೆಯಾಗಿದ್ದರ ಬಗ್ಗೆ ಮಾಹಿತಿ ಪಡೆದಿರುವ ಶಾಸಕರು ಅಂತಹ ಮಕ್ಕಳಿಗೆ ಉಚಿತವಾಗಿ ಶಾಲಾ ಸಮವಸ್ತ್ರಗಳನ್ನೂ ವಿತರಿಸುವ ತಯ್ಯಾರಿ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Be the first to comment