ಶಿರಸಿ: ನಗರ ಸಭೆ ಪೌರಾಯುಕ್ತರಿಗೆ ಮನವಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ

ವರದಿ: ಕುಮಾರ್ ನಾಯ್ಕ

ಜಿಲ್ಲಾ ಸುದ್ದಿಗಳು

ಶಿರಸಿ:

CHETAN KENDULI

ಕರ್ನಾಟಕ ರಾಜ್ಯ ಮುನ್ಸಿಲಪಲ್ ಕಾರ್ಮಿಕರ ಸಂಘ ಉತ್ತರಕನ್ನಡ ಜಿಲ್ಲಾ ಸಮಿತಿಯಿಂದ ಶಿರಸಿ ನಗರ ಸ್ಥಳೀಯ ಸಂಸ್ಥೆಯಲ್ಲಿ ಗುತ್ತಿಗೆ ಹೊರ ಗುತ್ತಿಗೆ ನೌಕರರ ಸಮಸ್ಯೆಗಳು ಇತ್ಯರ್ಥ ಮಾಡುವ ಕುರಿತು ಶಿರಸಿ ನಗರಸಭೆ ಪೌರಾಯುಕ್ತರಿಗೆ ಮನವಿ ನೀಡಿದರು.

ಶಿರಸಿಯಲ್ಲಿ ನಗರ ಸ್ಥಳೀಯ ಸಂಸ್ಥೆಯಲ್ಲಿ ಸ್ವಚ್ಚತಾ ನೌಕರರು, ನೀರಿನ ಸರಬರಾಜು, ಮನೆ ಮನೆ ಕಸ ಸಂಗ್ರಹಣೆ ಕಾರ್ಮಿಕರ ವೇತನ ಸೌಲತ್ತು ಮತ್ತು ಇನ್ನಿತರ ಸಮಸ್ಯೆಗಳನ್ನು ಇತ್ಯರ್ತಿಸುವುದು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಈ ಮನವಿ ಮುಖಾಂತರ ತಿಳಿಸಿದರು.

ಬೇಡಿಕೆಗಳು: 

1).ನೀರಿನ ಸರಬರಾಜು ನೌಕರರಿಗೆ 2018 ರಿಂದ ಜೂನ್ ತಿಂಗಳ 2021ರ ವರೆಗೆ 10170 ರೂ. ಮಾತ್ರ ಗುತ್ತಿಗೆದಾರ ಸಂದಾನ ಮಾಡಿರುತ್ತಾರೆ. ಈ ಕುರಿತಂತೆ ಪರಿಶೀಲಿಸಿ ಶೀಘ್ರದಲ್ಲಿ ಕಾರ್ಮಿಕರಿಗೆ ಸಂದಾಯ ಮಾಡಬೇಕು. ಇವರ EPF ESI ಗೊಂದಲಗಳನ್ನು ಸರಿಪಡಿಸಬೇಕು.

2) ಇತ್ತಿಚೇಗೆ ಸ್ವಚ್ಛತಾ ಕೆಲಸದ ನಿಮಿತ್ತವಾಗಿ 10 ಜನ ಪೌರಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು, ಅವರನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು. ಅವರನ್ನೇ ಮುಂದುವರೆಸಿ ಕನಿಷ್ಠ ಕೂಲಿ EPF ESI ಜಾರಿಗೊಳಿಸಬೇಕು.

3) ನೀರಿನ ಸರಬರಾಜು ಹಾಗೂ ಸ್ವಚ್ಚತಾ ಕಾರ್ಮಿಕರಿಗೆ ಅಗತ್ಯವಾದ ಕೆಲಸದ ಸಲಕರಣೆಗಳನ್ನು ಕಾಲ ಕಾಲಕ್ಕೆ ಒದಗಿಸಬೇಕು.

4) ಎಲ್ಲಾ ಕಾರ್ಮಿಕರಿಗೆ ಸಮವಸ್ತ್ರವನ್ನು ನೀಡಬೇಕು.

ಈ ಎಲ್ಲಾ ಅಂಶಗಳನ್ನು ಅತೀ ಶೀಘ್ರದಲ್ಲಿ ಈಡೇರಿಸಬೇಕು. ಮತ್ತು ನೀರಿನ ಸರಬರಾಜು ನೌಕರರ ವ್ಯತ್ಯಾಸ ವೇತನಕ್ಕೆ ಸಂಭಂದಿಸಿದಂತೆ ವಿಳಂಬವಾದಲ್ಲಿ ಬ್ಯಾಂಕ್ ಸ್ಟೇಟ್ ಮೆಂಟ್ ತೆಗೆದುಕೊಂಡು ಕಾರ್ಮಿಕ ನ್ಯಾಯಾಲಯಕ್ಕೆ ಧಾವ ಹೂಡುವುದು ಅನಿವಾರ್ಯವಾಗುತ್ತದೆ ತಮ್ಮ ಮನವಿಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಿ.ಸ್ಯಾಮ್ಸನ್. ಜಿಲ್ಲಾ ಕಾರ್ಯದರ್ಶಿ ಶಿರಸಿ ನಾಗಪ್ಪ ನಾಯ್ಕ, ತಾಲೂಕ ಕಾರ್ಯದರ್ಶಿ ಕಿರಣ್ ಹರಿಜನ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*