ಪಾರ್ಶ್ವನಾಥ ಜೈನ ತೀರ್ಥ ಧಾಮದಲ್ಲಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಕಾರ್ಯಗಾರ….!

ವರದಿ: ಹೈದರ್‌ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ:

CHETAN KENDULI

ಪಟ್ಟಣದ ಬಿಬಿ ರಸ್ತೆಯಲ್ಲಿರುವ ಐತಿಹಾಸಿಕ ಪಾರಿವಾಟಗುಟ್ಟದಲ್ಲಿರುವ ನಾಕೋಡ ಅವಂತಿ 108 ಪಾರ್ಶ್ವನಾಥ ಜೈನ ತೀರ್ಥ ಧಾಮದಲ್ಲಿ ಜೈನ ಮಂದಿರದ ಸ್ವಾಮಿಜಿಗಳೊಂದಿಗೆ ಸೆ.25 ಮತ್ತು 26ರಂದು ನಡೆಯಲಿರುವ ದಕ್ಷಿಣ ಕರ್ನಾಟಕ 18 ಜಿಲ್ಲೆಗಳ, 150ಮಂಡಲಗಳಿಂದ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಕಾರ್ಯಗಾರಕ್ಕೆ ಸಂಬಂಧಿಸಿದಂತೆ, ರಾಜ್ಯ ಬಿಜೆಪಿ ಪ್ರಶಿಕ್ಷಣ ವರ್ಗ ಕಾರ್ಯಗಾರದ ಬಗ್ಗೆ ಚರ್ಚೆಯನ್ನು ಜಿಲ್ಲೆ ಮತ್ತು ತಾಲೂಕು ಬಿಜೆಪಿ ಮುಖಂಡರು ನಡೆಸಿದರು.

ಸೆ.25 ಮತ್ತು 26ರಂದು ನಡೆಯಲಿರುವ ಕಾರ್ಯಗಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ಕುಮಾರ್ ಕಟೀಲ್, ಗೃಹ ಮಂತ್ರಿಗಳು, ಕಾರ್ಮಿಕ ಸಚಿವರು ಹಾಗೂ ರಾಜ್ಯ ಅಸಂಘಟಿತ ಕಾರ್ಮಿಕರ ಪ್ರಕೋಷ್ಠಕದ ಸಂಚಾಲಕರು ಸೇರಿದಂತೆ ಹಲವಾರು ಭಾಗವಹಿಸಲಿದ್ದಾರೆ.

ಕಾರ್ಯಗಾರಕ್ಕೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. 

ಈ ವೇಳೆಯಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್, ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠಕದ ಸಂಚಾಲಕ ಎಲ್.ಎನ್.ಅಂಬರೀಶ್ ಗೌಡ, ಲ್ಯಾಂಡ್‌ಗ್ರ್ಯಾಂಡ್ ಕಮಿಟಿಯ ಸದಸ್ಯ ಬೊಮ್ಮವಾರ ರಮೇಶ್, ಬಿಜೆಪಿ ತಾಲೂಕು ಮುಖಂಡ ಸೋಮಶೇಖರ್, ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*