ಯುವತಿ ನಾಪತ್ತೆ; ದೂರು ದಾಖಲು

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಶಿರಸಿ: ತಾಲೂಕಿನ ಬನವಾಸಿ ಮಳಲಗಾಂವ್ ಸಮೀಪದ ಸುಮಾ ನಾಯ್ಕ(19) ಎಂಬ ನನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ತನ್ನ ಮಗಳು ದ್ವಿತೀಯ ಪಿಯುಸಿ ಓದಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡು ನಗರದಲ್ಲಿಯೇ ಉಳಿಯುತ್ತಿದ್ದಳು. ಕಳೆದ 20 ದಿನಗಳ ಹಿಂದೆ ಮನೆಗೆ ಬಂದು ಎಲ್ಲರೊಡನೆ ಮನೆಯಲ್ಲಿ ಇದ್ದಾಕೆ ಜೂನ್ 21ರ ಬೆಳಿಗ್ಗೆ 5.30ರಿಂದ 6.30ರ ಅವಧಿಯಲ್ಲಿ ನಾಪತ್ತೆಯಾಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Be the first to comment

Leave a Reply

Your email address will not be published.


*