ನಾರಾಯಣಪುರ : ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಶ್ರೀ ಈಶ್ವರ ದೇವಸ್ಥಾನದಲ್ಲಿ ಯಾದಗಿರಿ ಜಿಲ್ಲಾ ಜಂಗಮ ಜಾಗೃತಿ ಸಮಾವೇಶದಲ್ಲಿ ಕೊಡೇಕಲ್ಲಿನ ಶ್ರೀ ದುರದುಂಡೇಶ್ವರ ಮಠದ ಪೂಜ್ಯ ಶಿವಕುಮಾರಸ್ವಾಮೀಜಿಗಳು, ಗುಳಬಾಳ ಮಠದ ಶ್ರೀ ಮರಿಹುಚ್ಚೇಶ್ವರ ಸ್ವಾಮೀಜಿ, ನಾಗನಟಿಗಿ ಶ್ರೀ ವೀರಭದ್ರೇಶ್ವರ ಮಠದ ಪೂಜ್ಯರಾದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಬಲಶೆಟ್ಟಿಹಾಳದ ವಿರಕ್ತಮಠದ ಶ್ರೀ ಸಿದ್ದಲಿಂಗಯ್ಯ ಶಾಸ್ತ್ರಿಗಳು ಈ ಸಂದರ್ಭದಲ್ಲಿ ಮಾತನಾಡಿ.
ಪವಿತ್ರ ಜಂಗಮ ಸಮಾಜ ಶ್ರೀಮಂತ ಇಲ್ಲದಿದ್ದರೂ ಸಂಸ್ಕೃತಿಯಲ್ಲಿ ಶ್ರೀಮಂತಿಕೆಯನ್ನು ಹೊಂದಿರುವ ಸರ್ವಶ್ರೇಷ್ಠ ಪವಿತ್ರವಾದ ಸಮಾಜವಾಗಿದೆ ಜಂಗಮ ಸಮಾಜವು ಕಟ್ಟಡಗಳಿಂದ ಆಸ್ತಿ ಅಂತಸ್ತು ಗಳಿಂದ ಶ್ರೀಮಂತಿಕೆ ಇಲ್ಲದಿದ್ದರೂ ಸಮಾಜದಲ್ಲಿ ಸರ್ವ ಶ್ರೇಷ್ಠ ಸಮಾಜವಾಗಿದೆ.
ಜಂಗಮ ಲಿಂಗ,ವಿಭೂತಿ,ಜೋಳಿಗೆ,ಬೆತ್ತ ,ಜೋಳದ ಹಿಟ್ಟು ಭಿಕ್ಷೆ ಅಥವಾ ಕಂತೆ ಭಿಕ್ಷೆ ಮಾಡುವವನು ಕರ್ನಾಟಕದ ಎಲ್ಲಾ ಭಾಗದಲ್ಲಿ ಕಾಣಬಹುದು.ಕೇವಲ ಬಿಕ್ಷೆ ಬೇಡುವದಷ್ಟೆ ಅಲ್ಲ. ಸಮಾಜದಲ್ಲಿ ಬೆರೆತು ಹುಟ್ಟಿನಿಂದ ಅಂತ್ಯದವರೆಗೂ ಎಲ್ಲಾ ಕಾರ್ಯವನ್ನು ಮಾಡುವ ಪುರೋಹಿತನಾಗಿ, ಅವರು ನೀಡುವ ದಕ್ಷಿಣೆಯನ್ನು ಪಡೆದು, ಅವರಿಗೆ ಶುಭವನ್ನೇ ಆಶೀರ್ವದಿಸುವ ಗುರುವಾಗಿ, ಗ್ರಾಮದ ಸ್ವಾಮಿಯಾಗಿ ಶಿವನ ಪ್ರತಿರೂಪವೇ ಜಂಗಮ.
ಮೂಲ ಕಾಯಕ ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ “ಸಾರುವ ಜಂಗಮ ಅಥವಾ ಸಾರುವ ಅಯ್ಯನವರು”. ಲಿಂಗಕ್ಕೆ ಕಂತಿ ಮಾಡುವ “ಕಂತಿ ಜಂಗಮ” ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ
ಸಹಾಯಕನಾಗಿರುವ ಜಂಗಮನೇ “ಮಠಪತ್ತಿ” ಪತ್ರಿ ಹಂಚುವವರು ಮಠದವರು.
ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವದಿಲ್ಲ.
ಶರಣರ ಹಲವಾರು ವಚನಗಳಲ್ಲಿ ಬಳಕೆಯಾಗಿರುವ ಜಂಗಮ ನಂಪುಸಕಾರ್ಥದಲ್ಲಿ ಪ್ರಯೋಗವಾಗಿರುವುದೆ ಈ ಮಾತಿಗೆ ಸಾಕ್ಷಿ. ಸಮಾಜವನ್ನು ಅವರು ಜಂಗಮವೆಂದು ಕರೆದಿರುವರೆ ಹೊರತು, ಒಂದು ಜಾತಿಯನ್ನು ಜಂಗಮವೆಂದು ಕರೆದಿಲ್ಲ. ಯಾವ ಆದರ್ಶಗಳನ್ನು ಹೇಳುತ್ತಾನೋ ಅದರಂತೆ ನಡೆಯುವವನೆ ಜಂಗಮ.
ಈ ಜಂಗಮ ಸಮಾಜವು ಇಂದಿನವರೆಗೆ ಸರ್ಕಾರದ ಯಾವುದೇ ಸೌಲಭ್ಯ ಪಡಿಯದೆ ನಾವು ಪರಾವಲಂಬಿಯಾಗಿ ಬದಕು ನಡೆಸುತ್ತಿದ್ದೇವೆ ಮತ್ತು ಗುರು ಮತ್ತು ಸ್ವಾಮಿಗಳಂತೆ ನಡೆದಿದ್ದೇವೆ. ಇದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಸಹಾಯ ದೊರೆತಿರುವುದಿಲ್ಲ. ಈ ಸಮಾಜವು ಸಂಘಟನೆಗೊಂಡು ಸ್ವಾವಲಂಬಿ ಜೀವನವನ್ನು ನಡೆಸುವ ಉದ್ದೇಶ ಹೊಂದಿದೆ. ಆದರೂ ಯಾಕೆ ನಾವುಗಳು ಹೀಗೆ ಮುಂದುವರಿಯದೆ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆ ಪ್ರತ್ಯೇಕ ರಾಜ್ಯ ಅಥವಾ ದೇಶ ಕೇಳಿದರೂ ಆಶ್ಚರ್ಯವಿಲ್ಲ. ಜಂಗಮ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಜಂಗಮ ಸಮುದಾಯ ತನ್ನದೇ ಆದ ಸಂಸ್ಕೃತಿ ಸರ್ವ ಶ್ರೇಷ್ಠತೆ ಹೊಂದಿರುವ ದೇಶಕ್ಕೆ ಸಮಾಜವಾಗಿದೆ ಜಂಗಮರು ಸಂಘಟಿತರಾಗಬೇಕು ಶಿಕ್ಷಣವಂತರಾಗಬೇಕು ಆರ್ಥಿಕವಾಗಿ ಸಬಲರಾಗಬೇಕು ಜಂಗಮರು ಜಾಗೃತರಾಗಬೇಕು ಒಗ್ಗಟ್ಟಿನ ಮಂತ್ರ ಪಠಿಸಲು ಮುಂದಾಗಬೇಕು ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಜಂಗಮ ಜಾಗೃತಿ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಯ್ಯ S ಹಿರೇಮಠ, ಅರ್ಚಕ ಸಂಗಯ್ಯ ಹಿರೇಮಠ, ಜಂಗಮ ಜಾಗೃತಿ ಯುವ ವೇದಿಕೆ ಜಿಲ್ಲಾಧ್ಯಕ್ಷ ನಾಗಯ್ಯ ಸ್ವಾಮಿ, ವೀರಭದ್ರಯ್ಯ ಗಣಾಚಾರಿ, ನಾಗಯ್ಯ ಸ್ವಾಮಿ, ಬಸಯ್ಯಸ್ವಾಮಿ, ಶ್ರೀಮತಿ ಗುರುದೇವಿ ಹಿರೇಮಠ, ಸುನಿಲ್ ಪಂಚಾಂಗಮಠ, ಗಂಗಯ್ಯ ಸ್ವಾಮಿ ಹಾಗೂ ನಾರಾಯಣಪುರ ಸುತ್ತಮುತ್ತಲಿನ ಗ್ರಾಮದ ಜಂಗಮ ಸಮಾಜದ ಗುರು ಹಿರಿಯರು ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು. ವಿಶ್ವನಾಥ್ ಹಿರೇಮಠ ಪ್ರಾರ್ಥಿಸಿದರು, ಚೆನ್ನಯ ಹಿರೇಮಠ ಸ್ವಾಗತಿಸಿದರು, ಮಲ್ಲಯ್ಯ ಹಿರೇಮಠ ನಿರೂಪಿಸಿದರು, ವಿರೂಪಾಕ್ಷಯ್ಯ ಹಿರೇಮಠ ವಂದಿಸಿದರು.
ವರದಿ : ಪ್ರೀತಿ ಪಿ ರಾಠಿ ನಾರಾಯಣಪುರ
Be the first to comment