ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ಶ್ರೀ ಶಿವಕುಮಾರಸ್ವಾಮಿಜೀ ಸರ್ಕಲ್ ಬಳಿಯ ತಾಲೂಕು ವೀರಶೈವ ಲಿಂಗಾಯತ ಸಮಾಜದ ಕಚೇರಿಯಲ್ಲಿ ವೀರಶೈವ ಲಿಂಗಾಯತ ಸಭೆಯಲ್ಲಿ ಸಿದ್ದಲಿಂಗ ಸ್ವಾಮಿಜಿಗಳ ಜನ್ಮದಿನದ ಆಚರಣೆ ಮತ್ತು ಜಿಲ್ಲಾ, ತಾಲೂಕು ಮಟ್ಟದ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು.ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಸಿ.ವಿರುಪಾಕ್ಷಯ್ಯ ಮಾತನಾಡಿ, ಒಂದು ವಿಧಾನಸಭಾ ಅವಧಿಗೆ ೩ ಜನ ಮುಖ್ಯಮಂತ್ರಿ ಆದರೆ ರಾಜ್ಯದ ಅಭಿವೃದ್ಧಿ ಮಾಡುವುದು ಕಷ್ಟಸಾಧ್ಯವಾಗಿದೆ. ಅದರಿಂದ ಒಂದು ಅವಧಿಗೆ ಒಬ್ಬರೇ ಮುಖ್ಯಮಂತ್ರಿ ಇರಬೇಕು. ಕೋವಿಡ್ ವಿಚಾರವಾಗಿ ಸಮರ್ಥವಾಗಿ ನಿಭಾಯಿಸಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಧಿ ಪೂರ್ಣಗೊಳಿಸಲು ಅತ್ಯಂತ ಗೌರವಾನ್ವಿತವಾಗಿ ಅವರ ಪಕ್ಷ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ರಮೇಶ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ೫ ವರ್ಷ ಅವಧಿ ಪೂರ್ಣಗೊಳಿಸಬೇಕು ಎಂಬುವ ಆಗ್ರಹವಾಗಿದೆ. ಬಸವ ತತ್ವ ಆಧಾರಿಸಿ ಆಡಳಿತ ನಡೆಸುವ ಮುಖ್ಯಮಂತ್ರಿ ಇವರಾಗಿದ್ದಾರೆ. ಕೊರೊನಾ ಕಾಲದ ಸಂಕಷ್ಟದ ಸಮಯದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿರುವುದು ಬಿಜೆಪಿಗೆ ಮುಂದೆ ಬರುವ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮುನಿರಾಜು, ಪ್ರ.ಕಾ. ಎಸ್.ವಿರೂಪಾಕ್ಷಯ್ಯ, ನಿರ್ದೇಶಕರಾದ ಪುಟ್ಟ ಬಸವರಾಜು, ಎಸ್.ಸೋಮಶೇಖರ್, ತಾಲೂಕು ಉಪಾಧ್ಯಕ್ಷ ಆರ್.ನಾಗಭೂಷಣ್, ಸಮಾಜದ ಎಸ್.ವಿಜಯ್‌ಕುಮಾರ್, ಎಸ್.ನಾಗೇಶ್, ಕುಮಾರ್, ಕಾಂತರಾಜ್, ವೀರಭದ್ರಪ್ಪ, ಶಶಿಕಲಾ, ನಳಿನಿಕುಮಾರಿ, ಚಂದ್ರಶೇಕರ್, ನಂದಿ ಸೌಹರ್ಧ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನ ಕಾರ್ಯನಿರ್ವಹಕಿ ಸಹನ, ಕಾರ್ಯದರ್ಶಿ ಕಾರ್ತಿಕ್ ಸೇರಿದಂತೆ ಹಲವು ಮುಖಂಡರು ಇದ್ದರು.
Be the first to comment