ಗೃಹಭಾಗ್ಯ ಯೋಜನೆಯ ಮನೆಗಳ ವಿಲೇವಾರಿಯಲ್ಲಿ ತಾರತಮ್ಯ: ಎಸ್.ಸಿ.ಎಸ್.ಟಿ. ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ವತಿಯಿಂದ ಆಯುಕ್ತರಿಗೆ ಮನವಿ

ಅಂಬಿಗ್ ನ್ಯೂಸ್

ರಾಜ್ಯ ಸುದ್ದಿಗಳು 

ಭಟ್ಕಳ:

CHETAN KENDULI

ತಾಲೂಕ ಕೊರಗರ ಕೇರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಪಂಗಡದ ಗೃಹಭಾಗ್ಯ ಯೋಜನೆಯ ಮನೆಗಳ ವಿಲೇವಾರಿಯಲ್ಲಿ ತಾರತಮ್ಯ ನೀತಿ ಮತ್ತು ನಿವೃತ್ತ/ದಿನಗೂಲಿ/ನೇರಪಾವತಿ/ಸಮಾನವೇತನ ಪೌರಕಾರ್ಮಿಕರು ಅವರ ಅವಲಂಬಿತರಿಗೆ ಬದಲಿ ವಸತಿ ವ್ಯವಸ್ಥೆಯನ್ನು

ಕಲ್ಪಿಸದೆ ಮನೆಯಿಂದ ಒಕ್ಕಲೆಬ್ಬಿಸುತ್ತಿರುವದನ್ನು ತಡೆಯುವ ಕುರಿತು ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ/ಪಂಗಡ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ವತಿಯಿಂದ ತಾಲೂಕ ಸಹಾಯಕ ಆಯುಕ್ತರು ಮತ್ತು ಪುರಸಭಾ ಅಧ್ಯಕ್ಷ ಪರ್ವೇಜ್‌ ಖಾಶಿಂ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈಗ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಲ್ಲಿ ಪೌರಕಾರ್ಮಿಕರ ಅನೇಕ ಮನೆಗಳು ಅಗಲಿಕರಣಕ್ಕೆ ಹೋಗುತ್ತಿರುವುದರಿಂದ ಅವರಿಗೆ ಪರಿಹಾರವಾಗಲಿ ಬದಲಿ ವ್ಯವಸ್ಥೆಯಾಗಲಿ ಆಗಿದ್ದು

ಇರುವುದಿಲ್ಲ ಆದ್ದರಿಂದ ಅವರಿಗೆ ಈ ಕೂಡಲೆ ಬದಲಿ ಮನೆಯ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಅಲ್ಲಿಂದ ಸ್ಥಳಾಂತರಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ತಾಲೂಕಿನಲ್ಲಿ ಗೃಹಭಾಗ್ಯದ ಮನೆ ಹಂಚಿಕೆಯಲ್ಲಿ ಎರಡು ಸಮುದಾಯದವರಿಗೆ ಒಟ್ಟಿಗೆ ಮನೆಯನ್ನು ವಿಲೇವಾರಿ ಮಾಡದೆ ಅವರಿಗೆ ಬೇರೆ ಬೇರೆಯಾಗಿ ವಿಲೇವಾರಿ ಮಾಡಿದಲ್ಲಿ ಮುಂದಾಗ ಬಹುದಾದ ತೊಂದರೆಯನ್ನು ತಪ್ಪಿಸ ಬಹುದಾಗಿದೆ ಎಂದು ಈ ಮೂಲಕ ತಿಳಿಸಲು ಬಯಸುತ್ತೇವೆ. ಎಂದು ಮನವಿ ಸಲ್ಲಿಸಲಾಯಿತು.

Be the first to comment

Leave a Reply

Your email address will not be published.


*