ಜಿಲ್ಲಾ ಸುದ್ದಿಗಳು
ಭಟ್ಕಳ:
ಮುರ್ಡೇಶ್ವರ ಬೀಚ್ ನಲ್ಲಿ ಅಲೆಯ ರಬಸಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ.
ಪ್ರವಾಸಿಗ ಆಂದ್ರ ಪ್ರದೇಶದ ಮೂಲದವನಾಗಿದ್ದು ಐದು ಜನ ಪ್ರವಾಸಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.ಐದು ಜನರಲ್ಲಿ ಒಬ್ಬ ಪ್ರವಾಸಿಗ ಕೊಚ್ಚಿಹೋಗಿದ್ದು ಲೈಪ್ ಗಾರ್ಡಗಳ ಸಮಯ ಪ್ರಜ್ನೆಯಿಂದ ನಿನ್ನೆ ಒಂದು ಜೀವ ಬದುಕಿದ್ದು ಲೈಪ್ ಗಾರ್ಡಗಳ ಸಾಹಸಕ್ಕೆ ಪ್ರವಾಸಿಗರ ಮೆಚ್ಚುಗೆ ವ್ಯಕ್ತವಾಗಿದೆ.
ಅತಿರೇಕವಾಗಿ ವರ್ತಿಸುತ್ತಿರುವ ಪ್ರವಾಸಿಗರು:
ಉತ್ತರಕ ಕನ್ನಡ ಜಿಲ್ಲೆಯ ಪ್ರವಾಸಿ ತಾಣವಾದ ಬೀಚ್ ಗಳಲ್ಲಿ ಹಲವು ಕಡೆ ಲೈಪ್ ಗಾರ್ಡಗಳ ವ್ಯವಸ್ಥೆ ಮಾಡಲಾಗಿದೆ.ಆದರೆ ಪ್ರವಾಸಿಗರಿಗೆ ಲೈಪ್ ಗಾರ್ಡಗಳು ಯಾರೆಂಬುದೇ ಗೊತ್ತಾಗದೇ ಅವರ ಮಾತಿಗೆ ವಾಗ್ವಾದ ನಡೆಸಿ ಅವರೊಂದಿಗೆ ಜಗಳಕ್ಕೆ ನಿಲ್ಲುವ ಘಟನೆಗಳು ನಡೆಯುತ್ತಿವೆ.ಪೋಲೀಸ್ ಇಲಾಖೆ ಇದನ್ನು ಸೂಕ್ಷ್ಮವಾಗಿ ಗಮನಿಸಿ ಲೈಪ್ ಗಾರ್ಡಗಳ ಜೊತೆ ನಿಂತು ಅವರಿಗೆ ರಕ್ಷಣೆ ನೀಡುವದರ ಜೊತೆಗೆ ಇಂತ ಅವಘಡಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ.
Be the first to comment