ಜಿಲ್ಲಾ ಸುದ್ದಿಗಳು
ಕಾರವಾರ
ಸರ್ಕಾರದಿಂದ ಅಂಗವಿಕಲರಿಗೆ ಬ್ಯಾಟರಿ ಚಾಲಿತ ವಾಹನ ನೀಡಿದರೆ ಆರ್ಥಿಕವಾಗಿಯೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ. ಈ ವಾಹನಗಳಿಗೆ ಸರ್ಕಾರದಿಂದಲೇ ಉಚಿತವಾಗಿ ವಿಮೆ ಮಾಡಿಸಬೇಕು. ಈ ಬಗ್ಗೆ ತಾವು ಸರ್ಕಾರದ ಗಮನ ಸೆಳೆಯಬೇಕು ,ಅಂಗವಿಕಲರಿಗೆ ಸರ್ಕಾರದಿಂದ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ನೀಡಬೇಕು. ಅವುಗಳಿಗೆ ಉಚಿತ ವಿಮೆ ಮಾಡಿಸಬೇಕು ಎಂದು ಜನಶಕ್ತಿ ವೇದಿಕೆಯಿಂದ ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಇತ್ತೀಚಿಗೆ ಪೆಟ್ರೋಲ್ ದರವು ನಿರಂತರವಾಗಿ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೇ ಕಷ್ಟವಾಗುತ್ತಿದೆ. ಹಾಗಿರುವಾಗ, ಅಂಗವಿಕಲರಿಗೆ ಪೆಟ್ರೋಲ್ ಚಾಲಿತ ಬೈಕ್‌ಗಳು ಆರ್ಥಿಕವಾಗಿ ಇನ್ನಷ್ಟು ಹೊರೆಯಾಗಲಿದೆ ಎಂದು ಮನವಿಯಲ್ಲಿ ಅಭಿಪ್ರಾಯ ಪಡಲಾಗಿದೆ.ಸಂಘಟನೆಯ ಅಧ್ಯಕ್ಷ ಮಾಧವ ನಾಯಕ, ಪ್ರಮುಖರಾದ ಸುರೇಶ ನಾಯ್ಕ, ಖೈರುನ್ನೀಸಾ, ಸಿ.ಎನ್.ನಾಯ್ಕ, ಸೂರಜ್ ಕ್ರೂಮ್ಕರ್, ರಾಜೀವ ನಾಯ್ಕ ಉಪಸ್ತಿತರಿದ್ದರು.
Be the first to comment