ಜಿಲ್ಲಾ ಸುದ್ದಿಗಳು
ರಣೆಬೆನ್ನೂರು
ರಾಣೇಬೆನ್ನೂರು ತಾಲ್ಲೂಕು ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪೋಲಿಸ್ ಇಲಾಖೆಯವರು ರಕ್ಷಣೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ?ಹಗಲು ರಾತ್ರಿಯೆನ್ನದೆ ತುಂಗಭದ್ರಾ ನದಿಯ ಒಡಲನ್ನು ಬಗೆಯುತ್ತಿರುವ ಅಕ್ರಮ ಮರಳು ದಂಧೆಕೋರರು .ಅಕ್ರಮ ಮರಳು ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕುಮಾರಪಟ್ಟಣಂ ಪೊಲೀಸ್ ಠಾಣಾ ಪಿಎಸ್ಸೈ ಸಂಪೂರ್ಣ ವಿಫಲ .
ಅಕ್ರಮ ಮರಳು ದಂಧೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿದ ನಮ್ಮ ಮಾಧ್ಯಮ ಪ್ರತಿನಿಧಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಅಕ್ರಮ ಮರಳು ದಂಧೆಕೋರರು .ದಿಟ್ಟವಾಗಿ ಅಕ್ರಮ ಮರಳು ದಂಧೆಕೋರರ ಪ್ರತಿರೋಧವನ್ನು ಮೆಟ್ಟಿ ನಿಂತ ನಮ್ಮ ಪತ್ರಿಕಾ ಪ್ರತಿನಿಧಿಗಳು.ತಳದಿಂದ ಪೋಲಿಸ ಠಾಣಾ ಪಿಎಸ್ಸೈ ಅವರಿಗೆ ಕರೆ ಮಾಡಿದರೆ ಬೇಜವಾಬ್ದಾರಿತನದ ಉತ್ತರ ನೀಡಿದ ಕುಮಾರಪಟ್ಟಣಂ ಪಿಎಸ್ ಐ .ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ದಾವಣಗೆರೆ ಜಿಲ್ಲೆಯಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಿದ ನೀವು, ಹಾವೇರಿ ಜಿಲ್ಲೆಗೆ ಹೋದಮೇಲೆ ಏಕೆ ಮೌನವಾಗಿದ್ದೀರಿ.
ರಾಣೆಬೆನ್ನೂರು ಶಾಸಕ ಅರುಣ ಪೂಜಾರ ಅವರಿಂದ ತುಂಗಭದ್ರಾ ನದಿಯಲ್ಲಿ ಅಕ್ರಮ ದಂಧೆಕೋರರಿಗೆ ಬರೆದು ಕೊಟ್ಟಿದ್ದಾರೆಯೇ ?ಹೀಗೊಂದು ಪ್ರಶ್ನೆ ಕಾಡುತ್ತಿದೆ .ಕುಮಾರಪಟ್ಟಣಂ ಪೋಲಿಸ್ ಠಾಣಾ ಸಿಬ್ಬಂದಿಗಳಿಂದ ಅಸಹಾಯಕತೆಯ ಉತ್ತರ. ಶಾಸಕರಾದ ಅರುಣ್ ಪೂಜಾರ್ ಅವರ ಬೆಂಬಲದಿಂದ ಕುಮಾರಪಟ್ಟಣಂನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.ಎಂದು ಕುಮಾರಪಟ್ಟಣಂ ತಾನು ಪೊಲೀಸ್ ಸಿಬ್ಬಂದಿಗಳು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ? ಅಥವಾ ಅವರ ಮೇಲೆ ಒತ್ತಡವಿದೆಯೇ?
ಒಟ್ಟಾರೆಯಾಗಿ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನ ತುಂಗಭದ್ರಾ ನದಿಯ ಸುತ್ತ ಅಕ್ರಮ ಮರಳು ಗಣಿಗಾರಿಕೆಯಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ .ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿರುವ ಕುಮಾರಪಟ್ಟಣಂ ಪಿಎಸ್ ಐ ಹಾಗೂ ಸಿಪಿಐ ಭಾಗ್ಯವತಿ ಅವರನ್ನು ಕೂಡಲೇ ವರ್ಗಾವಣೆಗೊಳಿಸಿ ದಕ್ಷ, ಸಮರ್ಥ ಪೊಲೀಸ್ ವರಿಷ್ಠರಿಗೆ ನೇಮಕ ಮಾಡುವಂತೆ ನಮ್ಮ ಪತ್ರಿಕಾ ಮಾಧ್ಯಮದಿಂದ ಆಗ್ರಹ.
Be the first to comment