ಜಿಲ್ಲಾ ಸುದ್ದಿಗಳು
ಹೊನ್ನಾವರ
ಹೊನ್ನಾವರದ ಘನತ್ಯಾಜ್ಯ ಘಟಕಕ್ಕೆ ಕುಮಟಾ ಕಸವನ್ನು ತರುವುದನ್ನು ತಡೆಯುವಂತೆ ಒತ್ತಾಯಿಸಿ ಬುಧವಾರ ತಾಲೂಕಿನ ಸಮಾನ ಮನಸ್ಕರು ಒಟ್ಟಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕಳೆದ ನಾಲ್ಕು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ಕಸ ಹಾಕಲು ಅವಕಾಶ ಪಡೆದು , ನಿರಂತರವಾಗಿ ಕಸ ಹಾಕುತ್ತಿರುವುದು ತಾಲೂಕಿನ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ದಿನದ ಹಿಂದೆ ಕುಮಟಾ ಪರಸಭೆ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪಡೆದು ಉಳಿದ ತಾಲೂಕುಗಳಿಗೆ ಮಾದರಿ ಎಂದು ಬಿಂಬಿತವಾಗಿದ್ದು, ತಾಲೂಕಿನ ನಿವಾಸಿಗಳಿಗೆ ಅಚ್ಚರಿ ಮೂಡಿಸುವಂತಹ ಸಂಗತಿ ಇದಾಗಿದೆ. ಕಸ ವಿಲೇವಾರಿಗೆ ಅವಕಾಶ ಇಲ್ಲದಿದ್ದರೂ, ಪ್ರಶಸ್ತಿ ನೀಡಿರುವುದು ಯಾವ ಮಾನದಂಡದ ಮೇಲೆ ಎಂದು ಪ್ರಶ್ನೆ ಮೂಡಿದೆ.
ನಾಲ್ಕೈದು ವರ್ಷದಿಂದ ಸಮಸ್ಯೆಯ ಬಗ್ಗೆ ಕುಮಟಾ-ಹೊನ್ನಾವರ ಹಾಲಿ ಮಾಜಿ ಶಾಸಕರಾಗಿ ಪ್ರಮುಖ ಮೂರು ಪಕ್ಷದವರು ಚಕಾರ ಎತ್ತದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಯ್ಕೆಯಾದ ಇಂದಿನ ಹಾಗೂ ಹಿಂದಿನ ಶಾಸಕರು ನಗರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ. 2009 ರಂದು ಅಂದಿನ ಅಧ್ಯಕ್ಷ ಸದಾನಂದ್ ಭಟ್ ಅವಧಿಯಲ್ಲಿ ವಿಲೇವಾರಿ ಘಟಕ ಆರಂಭಿಸಿ ಪಟ್ಟಣದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿತ್ತು. ಇದೀಗ ಕುಮಟಾ ಪುರಸಭೆಯ ಕಸವನ್ನು ಇಲ್ಲಿಗೆ ಹಾಕುತ್ತಿರುವುದಕ್ಕೆ ವಿರೋಧವಿದ್ದು , ಇಂದಿನಿಂದ ಕಸ ಹಾಕುವುದನ್ನು ನಿಲ್ಲಿಸಬೇಕು, ಗೇಟಿಗೆ ಬೀಗ ಹಾಕಿ ಯಾವುದೇ ಕಾರಣಕ್ಕೂ ಕುಮಟಾ ವಾಹನ ಒಳ ಪ್ರವೇಶಿಸಬಾರದು, ಒಂದು ವೇಳೆ ಪ್ರವೇಶ ಮಾಡಿದ್ದೆ ಆದಲ್ಲಿ ಮುಂದಿನ ಅನಾಹುತಕ್ಕೆ ಕುಮಟಾ ಪುರಸಭೆ ಹಾಗೂ ಶಾಸಕ ದಿನಕರ್ ಶೆಟ್ಟಿ ನೇರ ಹೊಣೆಯಾಗಲಿದ್ದಾರೆ.
ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸದಾನಂದ್ ಭಟ್, ಕರವೇ ಅಧ್ಯಕ್ಷ ಉದಯರಾಜ್ ಮೇಸ್ತ, ಉಮೇಶ್ ಮೇಸ್ತ, ಲೋಕೇಶ ಮೇಸ್ತ, ಸುರೇಶ್ ಸಾರಂಗ್, ಗಿರೀಶ್ ನಾಯ್ಕ ಹಡಿಕಲ್, ಪ್ರದೀಪ್ ಹೆಗಡೆ , ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ತಿತರಿದ್ದರು.
Be the first to comment