ಹಿಂಗಾರು, ಬೇಸಿಗೆ : ವಿವಿಧ ಬೆಳೆಗಳಿಗೆ ವಿಮೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸುವಂತೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಆಹಾರ ಬೆಳೆಗಳಿಗೆ ಬೆಳೆ ವಿಸ್ತೀರ್ಣಕ್ಕೆ ತಕ್ಕಂತೆ ಬೆಳೆ ವಿಮಾ ಕಂತಿನ ಶೇಕಡಾ 1.5 ರಷ್ಟು ಹಾಗೂ ವಾಣಿಜ್ಯ ಬೆಳೆಗಳಿಗೆ ಬೆಳೆ ವಿಮಾ ಕಂತಿನ ಶೇಕಡಾ 5 ರಷ್ಟು ರೈತರು ಪಾವತಿಸಬೇಕಾಗಿರುತ್ತದೆ. ಹಿಂಗಾರು ಹಂಗಾಮಿಗೆ ಜೋಳ, ಅಗಸೆ, ಕುಸುವೆ, ಹುರಳಿ (ಮ.ಆ), ಜೋಳ (ನೀ) ಬೆಳಗಳಿಗೆ ವಿಮೆ ಕಂತು ಪಾವತಿಗೆ ನವೆಂಬರ 15, ಸೂರ್ಯಕ್ರಾಂತಿ, ಗೋದಿ (ಮ.ಆ), ಸೂರ್ಯಕ್ರಾಂತಿ (ನೀ) ಗೆ ನವೆಂಬರ 30, ಗೋವಿನ ಜೋಳ, ಗೋಧಿ, ಈರುಳ್ಳಿ (ನೀ)ಗೆ ಡಿಸೆಂಬರ 16 ಹಾಗೂ ಕಡಲೆ (ಮ.ಆ, ನೀ) ಗೆ ಡಿಸೆಂಬರ 30 ಕೊನೆಯದಿನವಾಗಿದೆ. ಬೇಸಿಗೆ ಹಂಗಾಮಿಗೆ ಸೂರ್ಯಕ್ರಾಂತಿ ಶೇಂಗಾ, ಈರುಳ್ಳಿ (ನೀ) ವಿಮೆ ಕಂತು ಪಾವತಿಗೆ ಫೆಬ್ರವರಿ 28, 2022 ಕೊನೆಯ ದಿನವಾಗಿರುತ್ತದೆ.

ಬೆಳೆ ವಿಮೆ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಬೆಳೆ ವಿಮೆ ಕಂಪನಿಯ ತಾಲೂಕು ಪ್ರತಿನಿಧಿಗಳಾದ ಸಂತೋಷ ಕಮತಗಿ (8151074930) ಮಹಾಂತೇಶ ತೆಗ್ಗಿನಮಠ (9901259436) ಬಸವರಾಜ ಧೂಪದ (9036620814) ಮಲ್ಲಿಕಾರ್ಜುನ ಬ್ಯಾಳಿ (9008134063) ಅನೀಲ ಆಯ್ ರವಿಕಿರಣ (6360923667) ನೀರಂಜನ ಕೋಟೂರ (9740316233) ರಾಜಶೇಖರ ಗಾಣಗೇರ (7829316745) ಮಹೇಶ ಮಣ್ಣನ್ನವರ (7846060071) ರಾಜಶೇಖರ ಗಾಣಗೇರ (7829316745) ಇವರನ್ನು ಸಂಪರ್ಕಿಸಬಹುದಾಗಿದೆ.

Be the first to comment

Leave a Reply

Your email address will not be published.


*