ರಾಜ್ಯ ಸುದ್ದಿಗಳು
ಕಾರವಾರ
ಇತ್ತೀಚಿನವರೆಗೂ ಪಿವಿಸಿ ಕಾರ್ಡ್ ನಲ್ಲಿ ಬರುತ್ತಿದ್ದ ವಾಹನಗಳ ನೋಂದಣಿ ಪ್ರಮಾಣಪತ್ರವನ್ನು (ರಿಜಿಸ್ಟ್ರೇಶನ್ ಸರ್ಟಿಫಿಕೇಟ್/ ಆರ್.ಸಿ)ಏಕಾಏಕಿಸ್ಥಗಿತಗೊಳಿಸಿ ವಾಹನ ಮಾಲೀಕರಿಗೆ ಸಮಸ್ಯೆ ತಂದೊಡ್ಡಿದೆ. ಎಂದು ಡ್ರೈವಿಂಗ್ ಸ್ಕೂಲ್ ಮಾಲೀಕ ರಾಘು ನಾಯ್ಕ ಹೇಳಿದ್ದಾರೆ.
ಹೊಸ ವಾಹನಗಳನ್ನು ಖರೀದಿಸಿದವರು ತಮ್ಮ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ಅವುಗಳನ್ನು ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡವರಿಗೆ ಹಾಗೂ ಹಳೆಯ ವಾಹನವಾದರೆ ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಂಡು, ಆರ್.ಟಿ.ಒ.ನಲ್ಲಿ 250 ರೂ.ಗಳ ಚಲನ್ ತುಂಬಿದ ಒಂದು ವಾರದ ಬಳಿಕ ಸಾರಿಗೆ ಇಲಾಖೆಯಿಂದ ಆರ್.ಸಿ ಕಾರ್ಡ್ ಅಂಚೆಯ ಮೂಲಕ ಮಾಲೀಕರ ಮನೆಗೆ ಬರುತ್ತಿದ್ದವು. ಆದರೆ ಕಳೆದ ಎರಡು ತಿಂಗಳಿನಿಂದ ಆರ್.ಸಿ ಕಾರ್ಡ್ ಗಳು ಬರುವುದು ಸ್ಥಗಿತಗೊಂಡಿತ್ತು.
ಸಾರಿಗೆ ಅಧಿಕಾರಿಗಳನ್ನು ಕೇಳಿದರೆ, ಪಿವಿಸಿ ಕಾರ್ಡ್ ಇಲ್ಲ. ಬೆಂಗಳೂರು ಮಟ್ಟದಲ್ಲಿ ಮುದ್ರಣ ಸಮಸ್ಯೆ ಎಂದು ಹೇಳುತ್ತಿದ್ದರು. ಆದರೆ ಇದೀಗ ವಾಹನಗಳ ನೋಂದಣಿ ಮಾಡಿಕೊಂಡವರಿಗೆ ಏಕಾಏಕಿ ನೋಂದಣಿ ಪತ್ರವನ್ನು ಕಲರ್ ಪ್ರಿಂಟ್ ನೀಡಲಾಗುತ್ತಿದೆ ಇದರಿಂದ ವಾಹನ ಮಾಲೀಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಡ್ರೈವಿಂಗ್ ಸ್ಕೂಲ್ ಮಾಲೀಕ ರಾಘು ನಾಯ್ಕ ಹೇಳಿದ್ದಾರೆ.
Be the first to comment