ಜಿಲ್ಲಾ ಸುದ್ದಿಗಳು
ವಿಜಯಪುರ:
ಗ್ರಾಮೀಣ ಭಾಗದ ಮಹಿಳೆಯರು ಶ್ರೇಯೋಭಿವೃದ್ಧಿಗಾಗಿ ರಾಜ್ಯದಲ್ಲಿ ಕರ್ನಾಟಕ ಸೇವಾ ಮಹಿಳಾ ಸಂಘ ಸ್ಥಾಪನೆಗೊಂಡಿದ್ದು ಇದಕ್ಕೆ ಎಲ್ಲ ಮಹಿಳೆಯರೂ ಬೆಂಬಲ ನೀಡಬೇಕು ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಉರ್ಮಿಳಾ ಮಠಪತಿ ಹೇಳಿದರು.
ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಗ್ರಾಮದಲ್ಲಿ ಮಹಿಳೆಯರ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರಿಗೆ ವಿವಿಧ ರೀತಿಯ ತೊಂದರೆಗಲು ಎದುರಾಗುತ್ತವೆ. ಅಂತಹ ತೊಂದರೆಗಳನ್ನು ಸಂಘದ ಸದಸ್ಯರಲ್ಲಿ ತಿಳಿಸಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು. ಇನ್ನೂ ಗ್ರಾಮೀಣ ಭಾಗದ ವೃದ್ಧ, ವಿಕಲಚೇತನ,ಪತಿ ಕಳೆದುಕೊಂಡ ಮಹಿಳೆಯರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ್ಳನ್ನು ದೊರಕಿಸಿ ಕೊಡುವುದು ಸೇರಿದಂತೆ ಇನ್ನಿತರ ಸೇವೆಯನ್ನೂ ಸಂಘದಿಂದ ಮಾಡಲಾಗುವುದು ಎಂದು ಅವರು ಹೇಳಿದರು.
ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಮಹಾದೇವಿ ಕಾಪಸೆ ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
Phone number: 9902284143
Be the first to comment