ಜಿಲ್ಲಾ ಸುದ್ದಿಗಳು
ಹೊನ್ನಾವರ:
ಚಿತ್ತರಂಜನ, ತಿಮ್ಮಪ್ಪ ನಾಯ್ಕ, ಪರೇಶ್ ಮೇಸ್ತ ಕೊಲೆ ಬಿಜೆಪಿಯವರ ರಾಜಕಾರಣದ ವಸ್ತುವಾಗುತ್ತಿದೆ. ಮುಂದೆ ಇವರು ರಾಜಕಾರಣಕ್ಕೆ ಯಾರನ್ನು ಬಳಸಿಕೊಳ್ಳುತ್ತಾರೆ ನೋಡಬೇಕು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.
ಅವರು ಮಂಕಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾಸರಕೋಡ ಮತ್ತು ಕೆಳಗಿನೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಮೂರು ವರ್ಷದಲ್ಲಿ ಗ್ರಾಮ ಪಂಚಾಯತಕ್ಕೆ ಒಂದೇ ಒಂದು ಮನೆಮಂಜೂರಿ ಮಾಡದ ಬಿಜೆಪಿ ಸರಕಾರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮನೆ ಮಂಜೂರಿಯಾದರೆ ಹಲವು ಜನರಿಗೆ ಉದ್ಯೋಗ ಸಿಗುತ್ತದೆ. ಕೂಲಿ ಕೆಲಸ, ಕಲ್ಲು ಕಟ್ಟುವವರಿಗೆ, ಆಚಾರಿ, ಮರಳು ಹೀಗೆ ಹಲವು ರೀತಿಯಲ್ಲಿ ಉದ್ಯೋಗಕ್ಕೆ ಅವಕಾಶ ಸಿಗುತ್ತದೆ ಎಂದರು.
ಬ್ಯಾoಕ, ರೈಲ್ವೆ, ಬಿಎಸ್‌ಎನ್‌ಎಲ್ ಹೋಯ್ತು, ಕಾಂಗ್ರೆಸ್ ಏನು ಮಾಡಿಲ್ಲ ಅಂತಾರೆ ಇದು ಯಾರು ಮಾಡಿದ್ದು. ಬಿಜೆಪಿ ತೊಲಗಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಹಾಗೆ ಹೋರಾಟ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಗ್ರಾ. ಪಂ. ಅಧ್ಯಕ್ಷ ಮಂಜು ಗೌಡ, ತಾ. ಪಂ. ಸದಸ್ಯ ಗಣಪ್ಪಯ್ಯ ಗೌಡ, ಗಾ. ಪಂ. ಅಧ್ಯಕ್ಷ ಗಂಗಾಧರ ಗೌಡ, ಅಣ್ಣಪ್ಪ ಗೌಡ, ಮಾಬ್ಲ ಗೌಡ, ರಾಜು ನಾಯ್ಕ ಮಂಕಿ, ಯುವ ಕಾಂಗ್ರೆಸ್ ಅಧ್ಯಕ್ಷ ಹರೀಶ ಗೌಡ, ಲಿಂಗ ಗೌಡ, ಗೋವಿಂದ ನಾಯ್ಕ ಮಂಕಿ ಮಾತನಾಡಿದರು. ಜೂಜೆ ಪಾರ್ನದೀಸ್, ಅಣ್ಣಪ್ಪ ನಾಯ್ಕ ಇನ್ನಿತರ ಮುಖಂಡರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Be the first to comment