ಜಿಲ್ಲಾ ಸುದ್ದಿಗಳು
ಹೊನ್ನಾವರ
ಸುತ್ತಲೂ ಶರಾವತಿ ಹಿನ್ನೀರಿನಿಂದ ಆವರಿಸಲ್ಪಟ್ಟು ದ್ವೀಪದಂತಿರುವ ಹೊನ್ನಾವರ ತಾಲೂಕಿನ ಇಡಗುಂಜಿ ಪಂಚಾಯತ್ ಕಳಗಿನ ಇಡಗುಂಜಿ ತಾರೇಬಾಗಿಲು ಮೋಳಕೋಡ್ ಹೊಳೆಗೆ ಸೇತುವೆ ನಿರ್ಮಾಣಕ್ಕೆ 3.60 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿ ಇಂದು ಕಾಮಗಾರಿ ಚಾಲನೆ ನೀಡಿದರು.
ಮಳೆಗಾಲ ಶುರುವಾಯಿತೆಂದರೆ ಬಹುತೇಕ ಪಟ್ಟಣದ ಸಂಪರ್ಕವನ್ನೇ ಕಳೆದುಕೊಳ್ಳುತ್ತಿದ್ದ ಈ ಗ್ರಾಮಕ್ಕೆ ಇನ್ನು ಮುಂದೆ ಆ ಪರಿಸ್ಥಿತಿ ಉಂಟಾಗುವುದಿಲ್ಲ. ಈ ಭಾಗದ ಜನತೆಗೆ ಮತ್ತು ಮುಂದಿನ ಪೀಳಿಗೆಗೆ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಲಾಗುವುದು. ಈಗಾಗಲೇ ಹಲವು ರಸ್ತೆ ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಅಭಿವೃದ್ಧಿಯತ್ತ ಈ ಗ್ರಾಮವನ್ನು ಕೊಂಡೊಯ್ಯಲಾಗುವುದು ಎಂದು ಶಾಸಕ ಸುನೀಲ್ ನಾಯ್ಕ್ ತಿಳಿಸಿದ್ದಾರೆ.
Be the first to comment