ಜಿಲ್ಲಾ ಸುದ್ದಿಗಳು
ಹೊನ್ನಾವರ
ರಾಜಕಾರಣಿಗಳು ನಮ್ಮ ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಸರ್ವ ಪಕ್ಷದಲ್ಲಿ ಕೆಲಸ ಮಾಡುವ ನಮ್ಮ ಸಮಾಜದ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಇದರ ಪರಿಣಾಮವನ್ನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನೋಡಬೇಕಾಗುತ್ತದೆ ಎಂದು ಆರ್ಯಇಡಿಗ ಸಮಾಜದ ರಾಷ್ಟ್ರೀಯ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಪ್ರಣಮಾನಂದ ಸ್ವಾಮೀಜಿ ಹೊನ್ನಾವರ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.ಸಣ್ಣಪುಟ್ಟ ಎಲ್ಲಾ ಸಮಾಜಕ್ಕೂ ನಿಗಮ ಮಂಡಳಿ ಘೋಷಣೆ ಮಾಡಿದ್ದಾರೆ. ಆದರೆ ನಮ್ಮ ಸಮುದಾಯಕ್ಕೆ ನಿಗಮ ಮಂಡಳಿ ಇಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಂಡಳಿ ಆಗಬೇಕು. ೫೦೦ ಕೋಟಿ ಅನುದಾನವನ್ನು ಮಂಜೂರು ಮಾಡಬೇಕು. ನಮ್ಮ ಸಮುದಾಯದ ಯುವ ಜನತೆ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದ ಎಂಎಸ್ ಐಎಲ್ ಶಾಪ್ ನಲ್ಲಿ ನಮ್ಮ ಸಮುದಾಯಕ್ಕೆ ೫೦ ಶೇಕಡಾ ಉದ್ಯೋಗ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
೨ ಎ ಕೆಟಗರಿಯಲ್ಲಿ ಮೀಸಲಾತಿ ಶೇಕಡ ಹೆಚ್ಚಿಸುವ ಬದಲು ಇನ್ನೊಂದು ಸಮುದಾಯದ ಸೇರಿಸುವ ಷಡ್ಯಂತ್ರವೇ ನಡೆಯುತ್ತಿದೆ. ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ನಮ್ಮ ಸಮುದಾಯದ ಕುಲಕಸುಬನ್ನು ನಿಲ್ಲಿಸಿದೆ. ಈ ಮೂಲಕ ಆರ್ಯ-ಈಡಿಗ-ನಾಮಧಾರಿ ೨೬ ಉಪ ಪಂಗಡಗಳನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿವಂಗತ ಬಂಗಾರಪ್ಪನವರ ಹೆಸರಿಡಬೇಕು ಪ್ರತಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ನಮ್ಮ ಸಮಾಜದ ಸಮುದಾಯ ಭವನಗಳಿಗೆ ಬಿಡುಗಡೆಯಾಗಿರುವ ಹಣವನ್ನು ಶೀಘ್ರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಸಚಿನ್ ನಾಯ್ಕ್ ದರ್ಬೆಜಡ್ಡಿ ಅರೇಂಗಡಿ, ರಾಜೇಶ್ ನಾಯ್ಕ, ಗಣೇಶ್ ನಾಯ್ಕ, ರಾಜು ನಾಯ್ಕ, ಮಯೂರ್ ನಾಯ್ಕ, ಗೋಪಾಲ ನಾಯ್ಕ ಉಪಸ್ಥಿತರಿದ್ದರು.
Be the first to comment