ಡಿಪ್ಲೊಮಾ ಪರೀಕ್ಷೆಯನ್ನು ತಾಂತ್ರಿಕ ಮಂಡಳಿಯವರು ಕೈಬಿಡಬೇಕು: ಎನ್.ಎಸ್.ಯು.ಐ ಆಗ್ರಹ…!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯು ಡಿಪ್ಲೊಮಾ ೧,೩ ಮತ್ತು ೫ನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಅವೈಜ್ಞಾನಿತಕ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಎನ್.ಎಸ್.ಯು.ಐ. ಪದಾಧಿಕಾರಿಗಳು ತಹಸೀಲ್ದಾರ ಮೂಲಕ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿಯ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.



ಈ ಸಂದರ್ಭದಲ್ಲಿ ಎನ್.ಎಸ್.ಯು.ಐ. ಜಿಲ್ಲಾದ್ಯಕ್ಷ ಸದ್ದಾಂ ಕುಂಟೋಜಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಪ್ಲೊಮಾ ೨ ಮತ್ತು ೪ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಮುಮದಿನ ಸಮಿಸ್ಟರ್‌ಗೆ ಪ್ರವೇಶ ಅನುಮತಿ ನೀಡಿ ೬ನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಆದರೆ ಸದ್ಯಕ್ಕೆ ಕೊವಿಡ್ ಅಲೆ ತಂಗಿದ್ದರೂ ಮುಂದಿನ ತಿಂಗಳಲ್ಲಿ ೩ನೇ ಅಲೆ ಬರುವ ಮುನ್ಸೂಚನೆ ಇದ್ದರೂ ಮಂಡಳಿಯು ಇಂತಹ ಪರೀಕ್ಷೆಗೆ ಮುಮದಾಗಿರುವುದು ಖಂಡನಿಯ ಎಂದು ಹೇಳಿದರು.
ಸರಕಾರದ ಮಾರ್ಗಸಚಿಯಂತೆ ಕಾಲೇಜಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು. ಆದರೆ ಸರಕಾರ ಇದುವರೆಗೂ ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಲಸಿಕೆ ಪೂರೈಸಿದೆ. ಆದರೆ ಡಿಪ್ಲೊಮಾ ೧ ರಿಂದ ೪ನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ೧೮ ರಿಂದ ೧೮ ವರ್ಷವಾಗಿರುತ್ತದೆ. ಆದರೆ ಇವರಿಗೆ ಲಸಿಕೆ ಮಾತ್ರ ದೊರಕಿರುವುದಿಲ್ಲ. ತಾಂತ್ರಿಕ ಶಿಕ್ಷಣ ಮಂಡಳಿಯು ಇದನ್ನೆಲ್ಲಾ ಪರಿಗಣಿಸದೇ ಎಲ್ಲ ಸಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಮದಾಗಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಡಿಪ್ಲೊಮಾ ೧, ೩ ಮತ್ತು ೫ನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಮುಂದಿನ ಸಮಿಸ್ಟರ್‌ಗಳಿಗೆ ತೇರ್ಗಡೆಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ. ಪದಾಧಿಕಾರಿಗಳಾದ ಬಾಪ್ ಢವಳಗಿ, ರಫೀಕ್ ಶಿರೋಳ, ಲಕ್ಷ್ಮಣ ಚವ್ಹಾಣ, ಮೆಹಬೂಬ ಮೊಕಾಶಿ, ಅಬುಬುಕರ್ ಹಡಗಲಿ, ಸೋಹೇಬ ಪಟೇಲ, ಆಶೀಫ ಗುಡ್ನಾಳ, ಸಾಧಿಕ ನಾಯ್ಕೋಡಿ, ಪ್ರವೀಣ ಹಿಟ್ನಲ್ಲಿ ಇದ್ದರು.

Be the first to comment

Leave a Reply

Your email address will not be published.


*