ಬಾಗಲಕೋಟೆ:ಇಲಕಲ್ಲ ತಾಲೂಕಿನ ಗುಡೂರ (ಎಸ್.ಸಿ) ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯವರು ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಿಗೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯವರಿಂದ ಅಂದಾಜು.50.00ಲಕ್ಷ ವೆಚ್ಚದಲ್ಲಿ ಗುಡೂರ ಗ್ರಾಮದಲ್ಲಿ ನಿರ್ಮಾಣಗೊಂಡ ಪ್ರವಾಸಿಮಂದಿರದ ಉದ್ಘಾಟನೆಯನ್ನು ಹುನಗುಂದ ಕ್ಷೇತ್ರದ ಶಾಸಕ ದೊಡ್ಡಮಗೌಡ ಪಾಟೀಲ ಉದ್ಘಾಟಿಸಿದರು.ನಂತರ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಭೂಮಿ ಪೂಜೆ ಮತ್ತು ಅಂದಾಜು 35.00ಲಕ್ಷ ವೆಚ್ಚದಲ್ಲಿ 2019-20 ನೇ ಸಾಲಿನ ಸ್ವಚ್ಚ ಭಾರತ ಮಿಷನ್, ಗ್ರಾಮೀಣ ಎಮ್ ಎನ್ ಆರ್ ಜಿ ಇ ಮತ್ತು 14 ನೇ ಹಣಮಾಸು ಯೋಜನೆಯಡಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯ ಭೂಮಿ ಪೂಜಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಪ್ರಶಾಂತ ವಸ್ತ್ರದ,ದುರ್ಗಪ್ಪ ತಳ್ಳಿಕೇರಿ,ಮಹೇಶ್ ಪವಾರ, ಅಮೃತ್ ಪವಾರ, ಶೇಕಣ್ಣ ಬೆಳಗಲ್ಲ, ಪಿಡಿಓ ಬಸವರಾಜ್ ರೇವಡಿ,ಗ್ರಾಮಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ರಾಜು ದಾನಿ, ಗಣಪಥಸಾ ಪವಾರ ಹಾಗೂ ನರಪತ ರಾಜಾಪುರೋಹಿತ ಉಪಸ್ಥಿತರಿದ್ದರು.
Be the first to comment