ಅನುಪಯುಕ್ತ ಬಂಡೆ ಪ್ರದೇಶದ ಗುಂಡಿಗೆ ರಾತ್ರಿ ವೇಳೆ ತ್ಯಾಜ್ಯ ಸರಿದ ಅಪರಿಚಿತರು ಸ್ಥಳೀಯರ ಆಕ್ರೋಶ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಡಿ ಪ್ರದೇಶದ ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಬಚ್ಚಹಳ್ಳಿ ರಸ್ತೆ ಮಾರ್ಗದ ಅನುಪಯುಕ್ತ ಬಂಡೆ ಪ್ರದೇಶದ ಗುಂಡಿಗೆ ಅಪರಿಚಿತ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡು, ದುರ್ವಾಸನೆಯಿಂದ ಸ್ಥಳೀಯರು ಬದುಕು ನಡೆಸುವ ಪರಿಸ್ಥಿತಿ ಉಂಟಾಗಿದೆ.ಗ್ರಾಮಸ್ಥರು ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಸಹ ಅಧಿಕಾರಿಗಳ ನಿರುತ್ಸಾಹ ಎದ್ದುಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯತೇಚ್ಛವಾಗಿ ಗುಂಡಿಗೆ ತ್ಯಾಜ್ಯ ಸುರಿಯುತ್ತಿರುವುದರಿಂದ ಬಂಡೆ ಪ್ರದೇಶದಲ್ಲಿ ಮಳೆ ನೀರಿನೊಂದಿಗೆ ಬೆರೆತು ಅಂತರ್ಜಲ ವಿಷಪೂರಿತವಾಗುತ್ತಿದೆ. ಇದೇ ರೀತಿ ತ್ಯಾಜ್ಯ ಸುರಿಯುತ್ತಲೇ ಇದ್ದರೆ ಮುಂದೊಂದು ದಿನ ಆ ಭಾಗದಲ್ಲಿ ಯಾರು ಸಹ ಜನರು ವಾಸಮಾಡಲು ಆಗುವುದಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದರು.

CHETAN KENDULI

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸಿಲ್ಲ. ಸುತ್ತಮುತ್ತಲಿನ ಜನರು ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ತಿಂಡ್ಲು-ದ್ಯಾವರಹಳ್ಳಿ-ಜಾಲಿಗೆ-ಬಚ್ಚಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಿರುವ ಬಂಡೆ ಇದಾಗಿದ್ದು, ಯಾರೋ ರಾತ್ರಿ ವೇಳೆಯಲ್ಲಿ ಬಿಬಿಎಂಪಿಯಿಂದ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್, ಸತ್ತ ಜಾನುವಾರುಗಳನ್ನು ಸಹ ಇಲ್ಲಿಗೆ ತಂದು ಸುರಿಯುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಈ ಭಾಗದಲ್ಲಿ ಉತ್ತಮ ವಾತಾವರಣವಿದೆ. ತ್ಯಾಜ್ಯ ಸುರಿಯುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಸಂಚಾರ ಮಾಡಲೂ ತೊಂದರೆಯಾಗುತ್ತಿದೆ ಎಂದು ಬಿಕೆಎಸ್ ಪ್ರತಿಷ್ಠಾನದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.

* ಬಿ.ಕೆ.ಶಿವಪ್ಪ | ಅಧ್ಯಕ್ಷರು, ನಾಗರೀಕ ಹಿತರಕ್ಷಣಾ ಸಮಿತಿ
ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಬದಲಿಗೆ ಅನೈರ್ಮಲ್ಯ ತಾಣವನ್ನಾಗಿಸುತ್ತಿರುವುದು ಸರಿಯಲ್ಲ. ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸಿ, ತ್ಯಾಜ್ಯ ಸುರಿಯದಂತೆ ಎಚ್ಚರಿಕೆಯ ನಾಮಫಲಕ ಅಳವಡಿಸಬೇಕು. ರಾತ್ರಿ ವೇಳೆಯಲ್ಲಿ ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವುದರ ಮೂಲಕ ದಂಡವಿಧಿಸಬೇಕು. ಸ್ಥಳೀಯ ಜನಪ್ರತಿನಿದಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಶೀಘ್ರವಾಗಿ ಇತ್ತ ಗಮನಹರಿಸಿ ಕ್ರಮಕೈಗೊಳ್ಳಬೇಕು.

Be the first to comment

Leave a Reply

Your email address will not be published.


*