ರಾಜ್ಯ ಸುದ್ದಿಗಳು
ದೇವನಹಳ್ಳಿ
ಸರಕಾರದ ಇ-ಶ್ರಮ ಕಾರ್ಡು ಯೋಜನೆಯಡಿಯಲ್ಲಿ ಪ್ರತಿಯೊಬ್ಬರು ಗುರುತಿನ ಚೀಟಿಯನ್ನು ಉಚಿತವಾಗಿ ಪಡೆದುಕೊಳ್ಳಲು ಆನ್‌ಲೈನ್ ಅರ್ಜಿ ಸಲ್ಲಿಸಿ ನೊಂದಣಿ ಮಾಡಿಕೊಳ್ಳಿ ಎಂದು ಬಿಕೆಎಸ್ ಪ್ರತಿಷ್ಠನದ ಅಧ್ಯಕ್ಷ ಬಿ.ಕೆ.ಶಿವಪ್ಪ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಪಂ ವ್ಯಾಪ್ತಿಯ ಸುಣಘಟ್ಟ ಗ್ರಾಮದಲ್ಲಿ ಸುಣಘಟ್ಟ ಗ್ರಾಮದ ನೂತನ ಘಟಕ ರಚನೆ ಮತ್ತು ಯುವ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಇ-ಶ್ರಮ ಕಾರ್ಡು ಮಾಡಿಸಲು ಆಧಾರ್‌ಕಾರ್ಡು, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಪಾಸ್ ಪುಸ್ತಕವನ್ನು ತೆಗೆದುಕೊಂಡು ಸ್ಥಳೀಯ ಸೈಬರ್‌ಗಳಿಗೆ ತೆರಳಿ ಮಾಡಿಸಬಹದು. ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಯುವಕರು ಸಂಘಟಿತರಾಗಬೇಕು. ಯಾವುದೇ ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಮೊದಲು ಸರಕಾರಿ ಕಚೇರಿಗಳಿಗೆ ಸಂಘಟನೆಯ ಪದಾಧಿಕಾರಿಗಳು ಖುದ್ದಾಗಿ ಹೋಗಿ ಅಲ್ಲಿನ ಮಾಹಿತಿಯನ್ನು ಪಡೆದುಕೊಂಡು ಸಂಸ್ಥೆಯ ಪರವಾಗಿ ಬಡವರ, ನೊಂದವರ ಮತ್ತು ದೀನ-ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ, ಹಿಂದುಳಿದವರ್ಗಗಳವರಿಗೆ ವಿಷಯವನ್ನು ತಲುಪಿಸಿ, ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸರಕಾರದಿಂದ ಬರುವ ಹಲವಾರು ಯೋಜನೆಗಳ ಅನುದಾನ ಅರ್ಹರೂ ಪಡೆಯದೆ, ಬೇರೆಯವರ ಪಾಲಾಗುತ್ತಿದೆ. ಇದನ್ನು ತಪ್ಪಿಸಲು ಯುವಕರು ಜಾಗೃತರಾಗಬೇಕು. ಸಂಘಟನೆಯ ಶಕ್ತಿಯನ್ನು ಬಳಸಿಕೊಂಡು ಪ್ರತಿಯೊಬ್ಬರು ಕಾನೂನಿನ ಚೌಕಟ್ಟಿನಲ್ಲಿ ತಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳುವಂತಾಗಬೇಕು. ವಿದ್ಯಾವಂತರು ಅವಿದ್ಯಾವಂತರಿಗೆ ಸಹಕಾರ ನೀಡಬೇಕು. ಸಂಘದಿಂದ ಹಲವಾರು ಜನಪರ ಕೆಲಸಗಳನ್ನು ಮಾಡುವ ಉದ್ದೇಶವನ್ನು ಹೊಂದಬೇಕು. ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ದುಡಿದರೆ ಮುಂದೊಂದು ದಿನ ಸಮಾಜದಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿ ಗುರ್ತಿಸಿಕೊಳ್ಳುವಂತಾಗುತ್ತದೆ. ಯಾರು ನಮ್ಮನ್ನು ಗುರ್ತಿಸುವುದು ಬೇಡ, ನಾವಾಗಿಯೇ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರವವಹಿಸಿ ಶ್ರದ್ಧೆಯಿಂದ ಕೆಲಸ ನಿರ್ವಹಣೆ ಮಾಡಬೇಕು ಎಂದು ಸಲಹೆ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಘಟಕದ ಪದಾಧಿಗಳಿಗೆ ಬಿಕೆಎಸ್ ಪ್ರತಿಷ್ಠಾನದ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ಕುಂದಾಣ ಗ್ರಾಪಂ ಘಟಕದ ಅಧ್ಯಕ್ಷ ಗೋವಿಂದಸ್ವಾಮಿ, ಉಪಾಧ್ಯಕ್ಷ ಜಯಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್, ಸಂಘಟನಾ ಕಾರ್ಯದರ್ಶಿಗಳಾದ ಮಹೇಂದ್ರಕುಮಾರ್, ಶ್ರೀಧರ್ ಮೂರ್ತಿ, ಮಾರಪ್ಪ, ಮಧು, ತಾಲೂಕು ಸ್ವಯಂ ಸೇವಕ ಪ್ರಕಾಶ್, ಮುರಳಿ, ಮೋಹನ್, ನಾರಾಯಣಸ್ವಾಮಿ, ವೆಂಕಟೇಶ್, ಮುನಿರಾಜು ಇತರರು ಇದ್ದರು.
Be the first to comment