ಮುದ್ದೇಬಿಹಾಳ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ….!!! ಇನ್ನೂ ವಿತರಣೆಯಾಗದ ಸರಕಾರದ ಕಿಟ್….!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ನಮ್ಗೆ ವಿಶೇಷ ಆಹಾರ ಕಿಟ್ ಒದಗಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪಕ್ಕದ ಜಿಲ್ಲೆಯಲ್ಲಿಯೂ ಈಗಾಗಲೇ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಗಿದೆ. ಆದರೆ ನಮ್ಮ ಮುದ್ದೇಬಿಹಾಳ ತಾಲೂಕಿನಲ್ಲಿ ಮಾತ್ರ ಇಲ್ಲಿಯವರೆಗೂ ಕಿಟ್ ವಿತರಣೆ ಮಾಡಿಲ್ಲ. ಈಗಾಗಲೇ ಕೊರೊನಾದಿಂದ ಯಾವುದೇ ಕೆಲಸವಿಲ್ಲದೇ ಕಂಗಾಲಾಗಿದ್ದೇವೆ. ಇಂತಹ ಸ್ಥಿತಿಯಲ್ಲಿಯೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿರುವುದು ಒಳ್ಳೆಯದಲ್ಲ. ಅಲ್ಲದೇ ನಮ್ಮ ಖಾತೆಗೆ ಸರಕಾರದಿಂದ 2 ಸಾವಿರ ಸಹಾಹಧನ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದು ಇಲ್ಲಿಯವರೆಗೂ ನಮಗೆ ಜಮಾ ಆಗಿಲ್ಲ. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಬೇಕು.

-ಬಂದಗಿಸಾಬ ಬಾಗಲಕೋಟ, ನೊಂದಾಯಿತ ಕಾರ್ಮಿಕ.

ಕೊರೊನಾದಿಂದ ವಿಶ್ವವೇ ತತ್ತರಿಸಿದೆ. ಕೊರೊನಾದಿಂದ ಬಹುರಾಷ್ಟ್ರಗಳು ಆರ್ಥಿಕವಾಗಿ ಕುಸಿದಿವೆ. ಇಂತಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಪಾಡು ಹೇಳತೀರದಾಗಿದೆ. ಕಾರ್ಮಿಕರಿಗಾಗಿ ರಾಜ್ಯದ ಮುಖ್ಯಮಂತ್ರಿಗಳು ಈಗಾಗಲೇ ಸಹಾಯಧನ ಸೇರಿದಂತೆ ಇನ್ನಿತರ ಸೌಲಬ್ಯಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಆದರೆ ಸರಕಾರದ ಯೋಜನೆಗಳು ಮಾತ್ರ ನಿಜವಾದ ಕಾರ್ಮಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.

ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕ ಇಲಾಖೆಗೆ ಹೇಳುವವರಿಲ್ಲ ಕೇಳುವವರಿಲ್ಲದಂತಾಗಿದೆ. ಈಗಾಗಲೇ ರಾಜ್ಯ ಸರಕಾರ ಕಾರ್ಮಿಕರು ಕೊರೊನಾದಿಂದ ಸಂಕಷ್ಟದ ಸ್ಥಿತಿಗೆ ತಲುಪಿದ್ದು ನೊಂದಾಯಿತ ಕಾರ್ಮಿಕರಿಗೆ 2 ಸಾವಿರ ಸಹಾಯಧನ ಹಾಗೂ ವಿಶೇಷ ಆಹಾರ ಕಿಟ್ ಒದಗಿಸಿದೆ. ಆದರೆ ಈ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇನ್ನೂ ಇದರ ಬಗ್ಗೆ ಮಾಹಿತಿ ಪಡೆಯಲು ಕಛೇರಿಗೆ ಹೋದರೆ ಅಧಿಕಾರಿಗಳೇ ಸಿಗುವುದಿಲ್ಲ. ಇದರಿಂದ ತಾಲೂಕಿನ ನೊಂದಾಯಿತ ಕಾರ್ಮಿಕರು ಯೋಜನೆಯಿಂದ ವಂಚಿತಗೊಂಡಿದ್ದಾರೆ.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಕೆಯಿಂದ ವಿಶೇಷ ಆಹಾರ ಕಿಟ್ ಕಾರ್ಮಿಕರಿಗೆ ನೀಡಲಾಗಿದೆ. ಪಕ್ಕದ ಬಾಗಲಕೋಟ ಜಿಲ್ಲೆಯಲ್ಲಿಯೂ ವಿತರಿಸಲಾಗಿದೆ. ಆದರೆ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕ ಇಲಾಖೆಯಿಂದ ಮಾತ್ರ ಇನ್ನೂವರೆಗೂ ಕಿಟ್ ವಿತರಣೆ ಮಾಡಿಲ್ಲ. ಇದರ ಬಗ್ಗೆ ವಿಜಯಪುರ ಜಿಲ್ಲಾಧಿಗಳು ಹಾಗೂ ಸ್ಥಳೀಯ ತಹಸೀಲ್ದಾರರು ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಗಮನಹರಿಸಬೇಕು ಎನ್ನುವುದು ಕಾರ್ಮಿಕರ ಪರವಾಗಿ ಅಂಬಿಗ್ ನ್ಯೂಸ್ ತಂಡದ ಮನವಿಯಾಗಿದೆ.

Be the first to comment

Leave a Reply

Your email address will not be published.


*