ಶ್ರೀ ಆದಿ ಪರಮೇಶ್ವರ ಬಸದಿ ಹಾಗೂ ಶ್ರೀ ಪಾಶ್ವನಾಥ ಪದ್ಮಾವತಿ ದೇವಿ ಬಸದಿ ಅತಿಕ್ರಮಣ ಜಾಗವನ್ನು ತೆರೆವುಗೊಳಿಸಿ, ಬೇಲಿ ನಿರ್ಮಿಸಲು ಅನುಮಾತಿ ನೀಡಿ : ಡಾ. ಆಕಾಶ್ ರಾಜ್ ಜೈನ್

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು

ಬಾರ್ಕೂರು

ಬಾರ್ಕೂರಿನಲ್ಲಿರುವ 1100 ವರ್ಷಗಳಷ್ಟು ಪುರಾತನ ಶ್ರೀ ಆದಿ ಪರಮೇಶ್ವರ ಬಸದಿ ಹಾಗೂ ಶ್ರೀ ಪಾಶ್ವನಾಥ ಪದ್ಮಾವತಿ ದೇವಿ ಬಸದಿ, ಈ ಎರಡು ಬಸದಿಗಳು ಸ್ಥಳೀಯರಿಂದ ಅತಿಕ್ರಮಣವಾಗಿತ್ತು. ದೇವರ ಸ್ಥಳ ಮತ್ತು ಸ್ಥಾನವನ್ನು ಅತ್ಯಂತ ಕೀಳಾಗಿ ಬಳಸಲಾಗುತ್ತಿತ್ತು. 2020 ಅಕ್ಟೋಬರ್ ತಿಂಗಳಲ್ಲಿ ಈ ಪುರತತ್ವ ದೇವಳಗಳ ಸಂರಕ್ಷಣೆಗಾಗಿ ಅಂದಿನ ತಹಸಿಲ್ದಾರ್ ಮೂಲಕ ಸರ್ವೆ ಕಾರ್ಯ ಮಾಡಿಸಿ ಜಿಲ್ಲಾಧಿಕಾರಿಗಳಿಗೂ ಸಲ್ಲಿಸಲಾಗಿತ್ತು. ಈ ದೇವಳಗಳು ರಾಷ್ಟ್ರೀಯ ಸಂಪತ್ತಗಿರುವ ಕಾರಣ ಸರಕಾರ ಮನಸ್ಸು ಮಾಡದಿದ್ದರೆ ಕಡೆ ಪಕ್ಷ ಸಮಾಜದ ವತಿಯಿಂದ ಬೇಲಿ ನಿರ್ಮಿಸಲು ಅನುಮತಿಗಾಗಿ ತಹಸಿಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು ಹಾಗೂ ಜಿಲ್ಲಾಧಿಕಾರಿಯವರೆಗೂ ಪದೇ ಪದೇ ಮನವಿ ಮಾಡಲಾಗಿತ್ತು.

CHETAN KENDULI

ಆಡಳಿತ ಯಂತ್ರದಿಂದ ಒಂದು ಮುಕ್ಕಾಲು ವರ್ಷದಿಂದ ದಿವ್ಯ ನಿರ್ಲಕ್ಷವನ್ನು ನೋಡಿ ಏನು ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಪ್ರತಿ ಬಾರಿ ಸಂಪರ್ಕಿಸಿದಾಗಲು ಅನುಮತಿ ನೀಡುವುದಾಗಿ ಉತ್ತರ ಬರುತ್ತದೆ. ಪುರಾತನ ತುಳುನಾಡಿನ ರಾಜಧಾನಿ ತುಳುನಾಡಿನ ಹಂಪಿ ಎನಿಸಿದ ಬಾರ್ಕೂರಿನ ಬಹುತೇಕ ದೇವಾಲಯಗಳು ಈಗಾಗಲೇ ನಾಶವಾಗಿವೆ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಬೇಕೆಂದು ಎಂದು ಡಾ. ಆಕಾಶ್ ರಾಜ್ ಜೈನ್ ಆಳುಪ ರಾಜವಂಶಸ್ಥರು, ಸದ್ಯಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮನವಿ ಮಾಡಿದರು.

Be the first to comment

Leave a Reply

Your email address will not be published.


*