ರಾಜ್ಯಸಭೆ ಘನತೆಗೆ ಮೆರುಗು ತಂದ ಡಾ| ಡಿ. ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ : ಯಶ್ ಪಾಲ್ ಸುವರ್ಣ

ವರದಿ : ಅಮರೇಶ ಕಾಮನಕೇರಿ ಸಂಪಾದಕರು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಸಭಾ ಸದಸ್ಯರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರನ್ನು ನಾಮ ನಿರ್ದೇಶನದ ಮೂಲಕ ಚಿಂತಕರ ಚಾವಡಿ ಎಂದು ಕರೆಯಲ್ಪಡುವ ರಾಜ್ಯಸಭೆಯ ಘನತೆಗೆ ಮೆರುಗು ನೀಡಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅವರು.

ಅನ್ನ, ಅಭಯ, ವಿದ್ಯೆ, ಶಿಕ್ಷಣದ ಮೂಲಕ ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ, ಧರ್ಮ ಜಾಗೃತಿ, ಆರೋಗ್ಯ, ಶಕ್ತಿ ಸಂಘಟನೆಯ ಮೂಲಕ ಮಹಿಳಾ ಸಶಕ್ತೀಕರಣ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರ ಆರ್ಥಿಕ ಸಬಲೀಕರಣ, ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಜನ ಜಾಗೃತಿ, ವರದಕ್ಷಿಣೆ ಪಿಡುಗು ನಿಯಂತ್ರಿಸಿ ಸರಳ ವಿವಾಹ ಪ್ರೋತ್ಸಾಹಿಸುವ ಹಲವಾರು ಕಾರ್ಯಕ್ರಮಗಳು ಕಾರ್ಯಕ್ರಮದಿಂದ ನಿರಂತರ ಸಾಮೂಹಿಕ ವಿವಾಹ ಯೋಜನೆ ಮೂಲಕ ಹಲವು ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಚಿಂತನೆ ರಾಜ್ಯ ಸಭೆಯ ಸಂಸದರಾಗಿ ದೇಶದಾದ್ಯಂತ ಕಾರ್ಯರೂಪಗೊಳ್ಳಲು ಸಹಕಾರಿಯಾಗಲಿದೆ.

ಅತ್ಯಂತ ಅರ್ಹ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ಮಹತ್ವದ ಹುದ್ದೆಯನ್ನು ನೀಡಿ ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಮುಂದಿನ ದಿನಗಳಲ್ಲಿ ಖಾವಂದರಿಂದ ಸಮಾಜಮುಖಿಯಾಗಿ ನಿರಂತರವಾಗಿ ಮೂಡಿ ಬರಲಿ ಎಂಬ ಶುಭ ಕಾರ್ಯಕ್ರಮವನ್ನು ಪ್ರಕಟಿಸಲಾಯಿತು.

Be the first to comment

Leave a Reply

Your email address will not be published.


*