3-4 ನೇ ವಾರ್ಡ ನಿವಾಸಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

ಮಸ್ಕಿ

ಪಟ್ಟಣದ 3 ಮತ್ತು ನಾಲ್ಕನೇ ವಾರ್ಡಿನ ನಿವಾಸಿಗಳು ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಪುರಸಭೆಯ ಎರಡು ವಾರ್ಡ ಗಳ ನಿವಾಸಿಗಳು ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದ ಬಳಿ ಧರಣಿ ನಡೆಸಿದರು.ಹತ್ತು ಹಲವು ವರ್ಷಗಳಿಂದ ವಾಸವಿರುವ ಬಡ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿಯೇ ಇಲ್ಲಾ, ಶೌಚಾಲಯ ವ್ಯವಸ್ಥೆಯೂ ಇಲ್ಲಾ,ರಸ್ತೆಗಳು ತೀರಾ ಹದಗೆಟ್ಟಿವೆ,ಚರಂಡಿ ನೀರು ಮಳೆ ಬಂದಾಗ ರಸ್ತೆಯಲ್ಲಿಯೇ ಹರಿಯುತ್ತವೆ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ ಆದ್ದರಿಂದ ಇದರ ಬಗ್ಗೆ ಕಾಳಜಿವಹಿಸಿ ಸಮಸ್ಯೆಗಳನ್ನು ಪರಿಹರಿಸಲು ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ರವರ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂದು ಧರಣಿ ನಿರತ ಮಹಿಳೆಯರು ಆರೋಪಿಸಿದರು.

CHETAN KENDULI

ಧರಣಿ ನಿರತ ಸುದ್ದಿ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ,ಕಂದಾಯ ಇಲಾಖೆಯ ಶಿರಸ್ತೇದಾರ್ ಸೈಯದ್ ಅಕ್ತರ್ ಅಲಿ ಇವರುಗಳು ಧರಣಿ ನಿರತರ ಸಮಸ್ಯೆಗಳ ಬೇಡಿಕೆ ಈಡೇರಿಸುವ ಭರವಸೆಯನ್ನು ಕೊಟ್ಟು ಮನವೊಲಿಸಿದ ಬಳಿಕ ಧರಣಿಯನ್ನು ಕೈಬಿಡಲಾಯಿತು. ನಂತರ ಮೂರನೇ ಮತ್ತು ನಾಲ್ಕನೇ ವಾರ್ಡ್ ನ ಸಮಸ್ಯೆಗಳ ಕುರಿತ ಮನವಿಪತ್ರವನ್ನು ನಿವಾಸಿಗಳು ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ರವರಿಗೆ ನೀಡಿದರು.ಇದೇ ಸಂದರ್ಭದಲಿ  ಡಾ. ನಾಗವೇಣಿ ಪಾಟೀಲ ಸಮಾಜ ಸೇವಕರು ರಾಯಚೂರು,ವೀರಭದ್ರ ಕೋಠಾರಿ ಅಧ್ಯಕ್ಷರು ಎನ್ ಎಸ್ ಯು ಐ ಮಸ್ಕಿ, ಬಸವರಾಜ ಕೋಠಾರಿ ಪುರಸಭೆ ಸದಸ್ಯರು 4ನೇ ವಾರ್ಡ್, ಶಿವರೆಡ್ಡಿ 3ನೇ ವಾರ್ಡಿನ ಸದಸ್ಯರು, ಅಪ್ಪಾಜಿ ಕೊಠಾರಿ, ಮಹಿಬೂಬ್ ಸಾಬ್, ಫಾರುಕ್ ಬೇಗ್,ಮಲ್ಲಯ್ಯ ಆನೆ ಹೊಸೂರು, ರಮೇಶ್, ಸಂತೋಷ, ರಾಘವೇಂದ್ರ, ಗಂಗಾಧರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*