ಸಿದ್ದರಾಮೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಕಾಂಗ್ರೆಸ್ ನಾಯಕರ ದಂಡು

ವರದಿ : ಅಮರೇಶ ಕಾಮನಕೇರಿ ಸಂಪಾದಕರು

ಆಗಸ್ಟ್ 03 ರಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ನವರ 75ನೇ ಜನ್ಮ ದಿನವನ್ನು ಸಿದ್ದರಾಮಯ್ಯ ನವರ ಹಿತೈಷಿಗಳು ಹಾಗೂ ಅಭಿಮಾನಿಗಳಿಂದ ದಾವಣಗೆರೆಯಲ್ಲಿ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು, ಸಿದ್ದರಾಮಯ್ಯ ನವರ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ.

ಇಂದು ಶ್ರೀ “ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಸಮಿತಿ” ವತಿಯಿಂದ “ಸಿದ್ದರಾಮೋತ್ಸವ” ಕಾರ್ಯಕ್ರಮದ ಆಯೋಜನೆಯ ಕುರಿತು ಪೂರ್ವಾಭಾವಿ ಸಭೆ ನಡೆಸಿ ಸ್ಥಳ ವೀಕ್ಷಣೆ ನಡೆಸಿದರು.

ಸಮಿತಿಯ ಅಧ್ಯಕ್ಷರಾದ ಶ್ರೀ ಕೆ.ಎನ್.ರಾಜಣ್ಣ ರವರು, ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಸಿ.ಮಹದೇವಪ್ಪ ರವರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ರಾಯರೆಡ್ಡಿ ರವರು, ಖಜಾಂಚಿ ಗಳಾದ ಶ್ರೀ ಬೈರತಿ ಸುರೇಶ್ ರವರು, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಪ್ರಕಾಶ್ ರಾಥೋಡ್ ರವರು, ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಎಲ್.ಹನುಮಂತಯ್ಯ ನವರು, ಶ್ರೀ ಬಿ.ಎಲ್.ಶಂಕರ್ ರವರು, ಶ್ರೀ ವಿ.ಆರ್.ಸುದರ್ಶನ್ ರವರು, ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್ ರವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ನಜೀರ್ ಅಹ್ಮದ್ ರವರು, ಶ್ರೀ ಹೆಚ್.ಆಂಜನೇಯ ರವರು, ಮಾಜಿ ಶಾಸಕರಾದ ಶ್ರೀ ಅಶೋಕ್ ಪಟ್ಟಣ್ ರವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶ್ರೀನಿವಾಸಣ್ಣ ರವರು, ಶ್ರೀಮತಿ ಉಮಾಶ್ರೀ ಹಾಗೂ ಡಾ.ಜಯಮಾಲಾ ರವರು, ಪಕ್ಷದ ಮುಖಂಡರುಗಳು ಹಾಜರಿದ್ದರು.

Be the first to comment

Leave a Reply

Your email address will not be published.


*