ರಾಜ್ಯ ಸುದ್ದಿಗಳು
ಹೊನ್ನಾವರ
ವೀಕೆಂಡ್ ಕರ್ಪ್ಯೂ ಆದೇಶ ಉಲ್ಲಂಘಿಸಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಶರಾವತಿ ನದಿಯಲ್ಲಿ ಬೋಟ್ ಮೂಲಕ ಪ್ರವಾಸಿಗರನ್ನು ವಿಹಾರಕ್ಕೆ ಕೊಂಡೊಯ್ಯುತ್ತಿದ್ದ ಇಬ್ಬರು ಬೋಟ್ ಮಾಲಿಕರು ಸೇರಿ ಐವರ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಒಂದು ಬೋಟನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಮಾವಿನಕುರ್ವಾ ಸಾನಾಮೋಟಾದ ನಿವಾಸಿ ಅಮ್ಕುಸ್ ತಿಮ್ಮಪ್ಪ ಗೌಡ, ಬೆಂಗಳೂರಿನವರಾದ ಪಳನಿ ಚಂದ್ರನ್ ಎಸ್, ಗೌತಮ ಉಮಾಪತಿ, ಕು.ಸೌಮ್ಯ ಕೃಷ್ಣ ಬೆಂಗಳೂರು, ಮಾವಿನಕುರ್ವಾದ ಗಜಾನನ ಶಂಭು ಗೌಡ ಕೊವಿಡ್ ನಿಯಮ ಉಲ್ಲಂಘಿಸಿದ ಐವರು ಆರೋಪಿಗಳಾಗಿದ್ದಾರೆ. ಇವರಲ್ಲಿ ಮೂವರು ಬೆಂಗಳೂರಿನವರಾಗಿದ್ದು, ಹೊನ್ನಾವರ ಕೆಳಗಿನಪಾಳ್ಯದ ಬಿಕಾಸಿತಾರಿ ಎಂಬಲ್ಲಿ ಶರಾವತಿ ನದಿಯಲ್ಲಿ ವಿಹಾರಕ್ಕೆಂದು ಬಂದಿದ್ದರು ಎನ್ನಲಾಗಿದೆ.
ಈ ವೇಳೆ ವೀರಾಂಜನೇಯ ಬೋಟ್ ಮಾಲಿಕ ಅಮ್ಕುಸ್ ತಿಮ್ಮಪ್ಪ ಗೌಡ ಹಾಗೂ ಜೈ ಭಜರಂಗಿ ಬೋಟ್‍ನ ಮಾಲೀಕ ಗಜಾನನ ಶಂಭು ಗೌಡ ಇವರು ಕೊರೋನಾ ವೀಕೆಂಡ್ ಲಾಕ್‍ಡೌನ ಆದೇಶ ಉಲ್ಲಂಘಿಸಿದ್ದಲ್ಲದೆ, ಬೋಟ್‍ನಲ್ಲಿ ಜೀವರಕ್ಷಕ ಲೈಫ್ ಜಾಕೆಟ್‍ಗಳನ್ನು ಇಟ್ಟುಕೊಳ್ಳದೇ ನಿರ್ಲಕ್ಷ್ಯದ ಕೃತ್ಯ ಎಸಗಿದ್ದಾರೆ. ಶನಿವಾರ ಬೆಳಿಗ್ಗೆ 8.30 ರ ಸುಮಾರಿಗೆ ಮುಖಕ್ಕೆ ಮಾಸ್ಕ್ ಧರಿಸದೇ ಇದ್ದುದನ್ನು ಕಂಡು ಪೊಲೀಸರು ನಿಲ್ಲಸುವಂತೆ ಸೂಚನೆ ನೀಡಿದರೂ ಸಹ ನಿಲ್ಲಸದೇ ವೇಗವಾಗಿ ಚಲಾಯಿಸಿಕೊಂಡು ಪ್ರವಾಸಿಗರನ್ನು ಶರಾವತಿ ನದಿಯಲ್ಲಿ ವಿಹಾರಕ್ಕೆ ಕರೆದುಕೊಂಡು ಹೋಗಿ ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ವೀಕೆಂಡ್ ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೊನ್ನಾವರ ಪಿಎಸ್‍ಐ ಶಶಿಕುಮಾರ ಸಿ. ಆರ್ ಹಾಗೂ ಸಾವಿತ್ರಿ ನಾಯಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Be the first to comment