ಬಡವರ ಅಭಿವೃದ್ಧಿಯಾಗದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ – ರವಿ ಮಾವಿನಕುಂಟೆ

ವರದಿ ಹರೀಶ್ ದೊಡ್ಡಬಳ್ಳಾಪುರ

ಜಿಲ್ಲಾ ಸುದ್ದಿಗಳು 

ದೊಡ್ಡಬಳ್ಳಾಪುರ 

 650 ನೇ ದಿನಕ್ಕೆ ಕಾಲಿಟ್ಟ ಅನ್ನದಾಸೋಹ ಕಾರ್ಯಕ್ರಮ… ಕಡುಬಡವರು ನಿರಾಶ್ರಿತರ ಹಸಿವನ್ನು ನೀಗಿಸುವ ಸಲುವಾಗಿ ಆರಂಭಿಸಿದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಇಂದು 650 ರ ಸಂಭ್ರಮಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದು ಸ್ಥಳೀಯ ಪ್ರಸಿದ್ಧ ವಕೀಲರು ಹಾಗೂ ಕನ್ನಡ ಪರ ಹೋರಾಟಗಾರರಾದ ರವಿ ಮಾವಿನಕುಂಟೆ ಮಾತನಾಡಿ ಅನ್ನ ದಾಸೋಹ ಕಾರ್ಯಕ್ರಮ ಸಾಮಾನ್ಯವಾದುದಲ್ಲ ಈ ಸಾಧನೆಗೆ ಮಲ್ಲೇಶ್ ಕಾರಣ ಕಡುಬಡವರು ನಿರಾಶ್ರಿತರು ಬದುಕುವಂತಹ ಕಾಲೋನಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಥಳೀಯ ನಾಯಕರು ಗಮನಹರಿಸಲಿ ಕಾಲೋನಿಗಳ ಅಭಿವೃದ್ಧಿಯಾದಲ್ಲಿ ದೇಶ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು

CHETAN KENDULI

 ಕನ್ನಡ ಪರ ಹೋರಾಟಗಾರರಾದ ಎಂ ನಾಗರಾಜು ಮಾತನಾಡಿ ಈ ಅನ್ನದಾಸೋಹ ಕಾರ್ಯಕ್ರಮ ಕೇವಲ 650 ಮಾತ್ರವಲ್ಲದೆ ಸಾವಿರದ ಗಡಿ ದಾಟಲಿ ನಮ್ಮ ಸಹಕಾರ ಸದಾ ಹೀಗೆ ಇರುತ್ತದೆ ಎಂದು ತಿಳಿಸಿದರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ಗಣ್ಯರು ಕಾರ್ಯಕ್ರಮದ ಆಯೋಜಕರು ಹಾಗೂ ಅನ್ನದಾಸೋಹ ಸಮಿತಿಯ ಮುಖ್ಯಸ್ಥರಾದ ಮಲ್ಲೇಶ್ ಅವರಿಗೆ ಶುಭ ಹಾರೈಸಿದರು

Be the first to comment

Leave a Reply

Your email address will not be published.


*