ಅಂಕೋಲಾದಲ್ಲಿ ಕಾಡು ಹಂದಿ ಹೊಡೆದು ಬೇಯಿಸುವಾಗ ಅರಣ್ಯ ಇಲಾಖೆ ದಾಳಿ – ಮೂವರ ಬಂಧನ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಅಂಕೋಲಾ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ ಈರಾನ ಮೂಲೆ ಹಳ್ಳಿಯಲ್ಲಿ ನಡೆದ ಘಟನೆಯಾಗಿದೆ.ಕಾಡು ಹಾದಿಯನ್ನು ಬೇಟೆಯಾಡಿ, ಬೇಯಿಸಿ ಭೋರೀ ಭೋಜನ ಮಾಡಬೇಕು ಎನ್ನುವಷ್ಟರಲ್ಲಿ ದಾಳಿ ನಡೆದಿದೆ. ಖಚಿತ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆ ಮೂವರನ್ನು ವಷಕ್ಕೆ ಪಡೆದಿದೆ.ಈರಾನ ಮೂಲೆ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ರಾಕು ಗೌಡ, ಶಾಂತಾ ಗಣಪತಿ ಗೌಡ, ಗಣಪತಿ ಸುಕ್ರು ಗೌಡ ಬಂಧಿತ ಆರೋಪಿಗಳು. ವನ್ಯಜೀವಿ ಸಂರಕ್ಷಣಾ ಖಾಯಿದೆ 1972 ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ.

CHETAN KENDULI

ಕಾಡು ಹಂದಿಯ ಮಾಂಸ, ತಲೆಭಾಗ, ದೇಹ ಹಾಗೂ ಹಂದಿ ಹಿಡಿಯಲು ಬಳಸಿದ ತಂತಿಯ ಉರುಳನ್ನು ವಶಕ್ಕೆ ಪಡೆಯಲಾಗಿದೆ.ಡಿಎಪ್‌ಓ ವಸಂತ ರೆಡ್ಡಿ, ಎಸಿಎಪ್ ಮಂಜುನಾಥ ನಾವಿ ಮಾರ್ಗದರ್ಶನದಲ್ಲಿ ಆರ್‌ಎಪ್‌ಓ ರಾಘವೇಂದ್ರ ಮಳ್ಳಪ್ಪನವರ, ಡಿಆರ್‌ಎಪ್‌ಓಗಳಾಸ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಜೀರಗಾಳೆ, ರತೀಶ ನಾಯಕ, ಗೌಡಪ್ಪ ಅಂಗಡಿ, ಅರುಣ ನಡುಕಟ್ಟಿನ, ಅರಣ್ಯ ರಕ್ಷಕರಾದ ವೆಂಕಟೇಶ ಗುತ್ತೇಗಾರ, ಅಬಲಪ್ಪಾ ರುದ್ರಪ್ಪ ಪಾಟೀಲ್, ಪ್ರಶಾಂತ, ಚೆನ್ನಪ್ಪ ಲಮಾಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*