ಜಿಲ್ಲಾ ಸುದ್ದಿಗಳು
ವಿಜಯನಗರ:
ಪದವಿ ವಿದ್ಯಾರ್ಥಿಗಳಿಗೆ ಹಾಗೂ ಕೆಲ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಬೆರಳೆಣಿಕೆಯಷ್ಟು ಹತ್ತಿರದಲ್ಲಿದ್ದು,ಸಾರಿಗೆ ಬಸ್ ಸೌಕರ್ಯ ಇಲ್ಲದ್ದರಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ.
ಕಾರಣ ಜಿಲ್ಲಾಡಳಿತ ಕೂಡಲೇ ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ,ಪರೀಕ್ಷೆಗಳು ಸಂಪೂರ್ಣ ಮುಗಿಯೋ ವರೆಗೂ ಸುವ್ಯವಸ್ಥಿತ ಊಟ ಸಹಿತ ವಸತಿ ಸೌಕರ್ಯ ಒದಗಿಸಬೇಕೆಂದು. ಜಿಲ್ಲಾಡಳಿತಕ್ಕೆ ವಂದೇ ಮಾತರಂ ಜಾಗೃತಿ ವೇದಿಕೆ ಈ ಮೂಲಕ ಒತ್ತಾಯಿಸುತ್ತಿದೆ ಎಂದು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಅಧ್ಯಕ್ಷ ವಿ.ಜಿ.ವೃಷಭೆಂದ್ರ ತಿಳಿಸಿದ್ದಾರೆ.
ಎಪ್ರೀಲ್ 19ರಿಂದ ವಿವಿದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭಗೊಳ್ಳುತ್ತಿದ್ದು, ಬಸ್ ಸೌಲಭ್ಯ ಅಲಭ್ಯ ವಾಗಿರೂ ಹಿನ್ಮಲೆಯಲ್ಲಿ ತುಂಬಾ ಪರಿಕ್ಷಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಸಕಾಲಕ್ಕೆ ಗ್ರಾಮೀಣ ಭಾಗದಲ್ಲಿ ವಾಹನ ಗಳ ವ್ಯವಸ್ಥೆ ಇಲ್ಲ,ಹಾಗೂ ಸಾರಿಗೆ ಸೌಕರ್ಯ ಲಭ್ಯವಿಲ್ಲದ್ದರಿಂದಾಗಿ,
ಪರಿಕ್ಷಾರ್ತಿಗಳು ಸುಮಾರು ಹತ್ತರಿಂದ ಮೂವತ್ತು ಕಿಮೀ ದೂರದಿಂದ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಅಸಾಧ್ಯವಾಗಲಿದೆ.
ಕಾರಣ ಪರೀಕ್ಷೆಗೆ ಹಾಜರಾಗುವ ಎಲ್ಲಾ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ,
ಎಲ್ಲಾ ಹಂತದ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ.ಕೂಡಲೇ ಊಟ ವಸತಿ ಯನ್ನ ಕಲ್ಪಿಸಲು ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕಿದೆ.
ಈ ಸೌಲಭ್ಹ ಪರೀಕ್ಷೆಗಳು ಸಂರ್ಪೂರ್ಣ ಮುಗಿಯುವ ವರೆಗೂ ಸಮರ್ಪಕವಾಗಿ,ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲು ಕ್ರಮ ಜರುಗಿಸಬೇಕಿದೆ.
ಈ ಸಂಬಂಧಿಸಿದಂತೆ ಎಲ್ಲಾ ತಾಲೂಕಾಡಳಿತಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕಾಗಿ,ತುರ್ತಾಗಿ ಆದೇಶಿಸಿ ಅಗತ್ಯ ಕ್ರಮ ಜರೂರು ಜರುಗಿಸಬೇಕಿದ್ದು.ತಾವು
ತೆಗೆದು ಕೊಂಡ ಕ್ರಮಗಳ ಕುರಿತು ಹಾಗೂ ದೊರಕಿಸಿಕೊಟ್ಟ ಸೌಲಭ್ಯಗಳ ಕುರಿತು,ಸದುಪಯೋಗಪಡಿಸಿಕೊಳ್ಳುವಂತೆ ಪ್ರತಿ ಕಾಲೇಜುಗಳಿಗೆ ಪ್ರಕಟಣೆ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸಿ ಅನುಕೂಲ ಮಾಡಿಕೊಡಬೇಕಿದೆ ಎಂದು ವೇದಿಕೆ ಕೋರಿದೆ.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದಾಗಿ ವಂದೇ ಮಾತರಂ ಜಾಗೃತಿ ವೇದಿಕೆ, ಈ ಮೂಲಕ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದೆ ಎಂದು ವೇದಿಕೆ ಮುಖಂಡ ವಿ.ಜಿ.ವೃಷಭೆಂದ್ರ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಡಿ.ಹೆಚ್.ಮರಿಸ್ವಾಮಿ,ಗುಡೇಕೋಟೆ ಎಲೆ.ನಾಗರಾಜ,ಕಾವಲ್ಲಿ ಗಣೇಶ,ಶಿರಾಜ್,ಶಬ್ಬೀರ ಅಹಮ್ಮದ್,ಕಲೀಲ್ ಅಹಮದ್,ಜಬಿವುಲ್ಲಾ,ನಾಗರಾಜ,ಬೆಣ್ಣಳ್ಳಿ ಕೊಟ್ರೇಶ,ಡೊಂಕಯ್ಯರ ಕೊಟ್ರೇಶ್,ತಳವಾರ ಬಸವರಾಜ್,ಎ.ಬಸವರಾಜ್,ಜುಬೇರ,ಜೂಗುಲರ ಸೊಲ್ಲೇಶ,ನಿಂಗೇಶ,ವೆಂಕಟೇಶ,ಗೌರಮ್ಮ,ನಾಗವೇಣಿ,ವಿಜಯಲಕ್ಷ್ಮೀ,ವೀರೇಶ,ಶಿವಲೀಲ,ರಾಘವೇಂದ್ರ,ಮುಂತಾದವರು ಇದ್ದರು.
Be the first to comment