ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ್
ತಮ್ಮ ಮೇರು ವ್ಯಕ್ತಿತ್ವದೊಂದಿಗೆ ಆಲೂರಿನ ಸಮಸ್ತ ನಾಗರಿಕರ ಸ್ಮರಣೆಯಲ್ಲಿ ಹಚ್ಚ ಹಸಿರಾಗಿದ್ದಾರೆ..!! ಒಂದು ಜ್ಞಾನದ ಕಣ್ಣು ಲಿಂ: ಪಂಡಿತಪ್ಪ ಮಾಸ್ತರರು..!! ಇನ್ನೊಂದು ಲಿಂ:ಡಿ.ಎಸ್. ಹಿರೇಗೌಡ್ರ..!! ಪಂಡಿತಪ್ಪ ಮಾಸ್ತರರು ಮುದ್ದೇಬಿಹಾಳ ತಾಲೂಕಿನ ನಾಲ್ಕೈದು ಸುಪ್ರಸಿದ್ಧ ಮಾಸ್ತರರಲ್ಲಿ ಒಬ್ಬರಾಗಿದ್ದರು..!! ಆಲೂರಿನ ಪ್ರತಿಯೊಬ್ಬರ ಮನೆಯಲ್ಲಿಯೂ ಶಿಕ್ಷಣ ಜ್ಯೋತಿ ಹೊತ್ತಿಸಿದರು..!! ಅಥರ್ಗಾ ರೇವಣಸಿದ್ದಪ್ಪ ಮಾಸ್ತರರನ್ನು ಬಿಟ್ಟರೆ ಇಡೀ ಕರ್ನಾಟಕದಲ್ಲೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡಿ ಕಟ್ಟಿದ ಕೀರ್ತಿ ಆಲೂರಿಗೆ ಸಲ್ಲಬೇಕು..!! ಪಿ.ಎಸ್. ಪಾಟೀಲ್ ಸರಕಾರಿ ಪ್ರೌಢ ಶಾಲೆಯಲ್ಲಿ ಲಿಂ:ಪಂಡಿತಪ್ಪ ಮಾಸ್ತರರ ಪಂಚಲೋಹದ ಮೂರ್ತಿ ಪ್ರತಿಷ್ಠಾಪಿಸಿದ ಗುಡಿ ಇದೆ..!! ಪ್ರಾಥಮಿಕ ಶಾಲಾ ಶಿಕ್ಷಕ ಮನಸ್ಸು ಮಾಡಿದರೆ ಎಷ್ಟು ಎತ್ತರಕ್ಕೆ ಏರಬಲ್ಲ ಎಂಬುದಕ್ಕೆ ಪಂಡಿತಪ್ಪ ಮಾಸ್ತರರೇ ಸಾಕ್ಷಿಯಾಗಿದ್ದಾರೆ..!! ಇವರ ಸಣ್ಣಮಗ ಶ್ರೀ ಸಿದ್ಧನಗೌಡ್ರು, ತಮ್ಮ ತಂದೆಯವರ ಸ್ಮರಣಾರ್ಥ ತಮ್ಮ ಅಮೂಲ್ಯವಾದ ಎರಡುವರೆ ಎಕರೆ ಭೂಮಿಯನ್ನು ದಾನವಾಗಿ ನೀಡಿದರು..!! ಇದಕ್ಕೆ ಅವರ ಸಹೋದರರಾದ ಶ್ರೀ ಬಿ.ಪಿ.ಪಾಟೀಲ್ ಶಿಕ್ಷಕರು ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಪ್ರೊ:ಎಸ್.ಪಿ.ಪಾಟೀಲ ನಿವೃತ್ತ ಪ್ರಾಚಾರ್ಯರು ಸಮ್ಮತಿ ಸೂಚಿಸದರು. ಇವರ ಇಡೀ ಕುಟುಂಬವೇ ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಣೆಯಾಗಿದೆ..!! ಪ್ರೊಫೆಸರ್. ಶಿವನಗೌಡ.ಪಂ.ಪಾಟೀಲ ಅವರು ಬೆಂಗಳೂರಿಲ್ಲಿ ತಂಬು ಕುಟುಂಬದಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ..!! ದೈವಭಕ್ತರಾದ ಶ್ರೀಯುತರು ಆಲೂರಿನ ಆರಾದ್ಯದೈವ ವರಮಾರುತೇಶನ ಮಂಗಲಕಾರ್ಯಾಲಯಕ್ಕೆ 100000/-ರೂ,ಗಳ ಭಕ್ತಿಕಾಣಿಕೆ ಸಮರ್ಪಿಸಿದ್ದಾರೆ..!! ಮಾರುತೇಶನ ಕೃಪೆಯಿಂದ ಶ್ರೀಯುತರು ಸದಾಕಾಲ ಆರೋಗ್ಯದಿಂದ ಚನ್ನಾಗಿ ನೂರ್ಕಾಲ ಬಾಳಲೆಂದು ಆ ಮಾರುತೇಶ ಸಕಲಸೌಭಾಗ್ಯ ನೀಡಲಿ ಎಂದು ಆಲೂರಿನ ಸಮಸ್ತ ನಾಗರಿಕರು ಹಾರೈಸಿ ಅಭಿನಂದಿಸುತ್ತಾರೆ..!! ಪ್ರೇರಣೆಯಾಗಿ ಕೆಲಸ ಮಾಡಿದ ಕೆ ಎಸ್ ಗೂಳಿ ಜಿ.ಎಸ್ ಹಿರೇಗೌಡ್ರ.ಸಿ.ಬಿ.ಬಿರಾದಾರ.ಎಮ್.ಎ.ಗೂಳಿ.ಬಿ.ಎಸ್.ಹಾದಿಮನಿ.ಮುತ್ತಣ್ಣ.ಈ.ಗೂಳಿ. ಈರಣ್ಣ.ದೂ. ಹಿರೇಗೌಡ್ರ ಈರಪ್ಪಗೌಡ.ಮ.ಹಿರೇಗೌಡ್ರ. ಸಂಗಪ್ಪ ಗೂಳಿ. ರಾಜೇಸಾ ಸಾತಿಹಾಳ ಹಾಗೂ ದೈವಮಂಡಳಿ ಅಭಿನಂದನಾರ್ಹರು..!!
Be the first to comment