ಮಹಿಳಾ ವೇದಿಕೆ ಸದಸ್ಯೆ ವಿರುದ್ಧವೇ ಎಫ್​ಐಆರ್ ದಾಖಲು ; ಲೈಂಗಿಕ ದೌರ್ಜನ್ಯ ಪ್ರಕರಣ..!!!!

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಮಂಗಳೂರು

ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮಂಗಳೂರಿನ ಅಶೋಕ ನಗರದ ಜಾಗೃತ ಮಹಿಳಾ ವೇದಿಕೆ ಪವಿತ್ರಾ ಆಚಾರ್ಯ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಪವಿತ್ರಾ ಎಂಬವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಅವರು ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ನೆಪದಲ್ಲಿ ಬೆದರಿಕೆ ಹಾಕಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಮುಚ್ಚಳಿಕೆ‌ ಬರೆಸಿದ್ದಾರೆ. ಮುಚ್ಚಳಿಕೆ ಬರೆಸಿಕೊಳ್ಳಲು ಪವಿತ್ರಾ ಆಚಾರ್ಯ ಸಾಥ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪವಿತ್ರಾ ಆಚಾರ್ಯಗಾಗಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ.ಸಂತ್ರಸ್ತೆಯ ಸ್ನೇಹಿತೆ ಬಳಿಯಿಂದ ಬರೆಸಿಕೊಂಡಿರುವ ಮುಚ್ಚಳಿಕೆ ಇದಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆಯ ಸ್ನೇಹಿತೆ ಬಳಿಯಿಂದಲೂ ಹೆಬ್ಬೆಟ್ಟಿನ ಸಹಿ ಪಡೆದಿರುವ ಮುಚ್ಚಳಿಕೆ ಪತ್ರ ಇದಾಗಿದೆ. ಮುಚ್ಚಳಿಕೆಯ ಮೊದಲ ಸಾಲಿನಲ್ಲಿ ರಾಜೇಶ್ ಭಟ್ ಬಳಿ ಕ್ಷಮೆ ಕೇಳಲಾಗಿದೆ. ನೀವು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮ್ಮನ್ನು ಟಾರ್ಗೆಟ್ ಮಾಡಿದ್ದೆ. ಆಡಿಯೋವನ್ನು ಎಡಿಟ್ ಮಾಡಿ ವಾಟ್ಸಪ್ ಮತ್ತು ಸಿಡಿ ಮಾಡಿಸಿ ಹರಿಬಿಟ್ಟಿದ್ದೆ. ಹಲವಾರು ಜನರಿಗೆ ಇದನ್ನು ನಾನೇ ಕಳುಹಿಸಿದ್ದೆ. ನಿಮ್ಮ ಕುಟುಂಬ ಮತ್ತು ಸಮಾಜದಲ್ಲಿ ಹೆಸರು ಹಾಳು ಮಾಡಲು ಬಯಸಿದ್ದೆ. ಬಾರ್ ಅಸೋಸಿಯೇಶನ್​ಗೂ ನಾನೇ ಸಿಡಿ ಕಳಿಸಿಕೊಟ್ಟಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಅಂತ ಯಾವುದೇ ಬೇಷರತ್ ಕ್ಷಮೆ ಕೋರುತ್ತಿದ್ದೇನೆ. ಇನ್ನು ಮುಂದೆ ನಿಮಗೆ ನನ್ನ ಮುಖ ತೋರಿಸುವುದಿಲ್ಲ ಎಂದು ಬರೆದಿರುವ ಮುಚ್ಚಳಿಕೆ ಇದಾಗಿದೆ.

CHETAN KENDULI

ಉರ್ವ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಮುಚ್ಚಳಿಕೆ‌ ಬರೆಸಿರುವ ಆರೋಪ ಕೇಳಿಬಂದಿದೆ. ಮುಚ್ಚಳಿಕೆ ಬರೆಸಲು ಪವಿತ್ರ ಆಚಾರ್ಯ ಸಾಥ್ ನೀಡಿದ್ದಾರೆ ಎಂದು ಹೇಳಲಾಗಿದೆ. ಪವಿತ್ರ ಆಚಾರ್ಯಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಸಂತ್ರಸ್ತೆಯ ಬಾಯ್ ಫ್ರೆಂಡ್ ಮೇಲೂ ಎಫ್.ಐ.ಆರ್. ದಾಖಲುಸಂತ್ರಸ್ತೆಯ ಬಾಯ್ ಫ್ರೆಂಡ್ ಧ್ರುವ ಪ್ರಕರಣದಲ್ಲಿ ಎರಡನೇ ಆರೋಪಿ ಆಗಿದ್ದಾನೆ. ಧ್ರುವ ತಾಯಿಯ ಮೇಲೆ ಕೂಡ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಧ್ರುವ ಹಾಗೂ ತಾಯಿ ಮಹಾಲಕ್ಷಿ ಹೆಗ್ಡೆ ಮೇಲೆ ಕೂಡ ದೂರು ದಾಖಲಿಸಲಾಗಿದೆ. ಸಂತ್ರಸ್ತೆ ಲೈಂಗಿಕ ದೌರ್ಜನ್ಯ ಆದ ಬಳಿಕ ಧ್ರುವನ ರಕ್ಷಣೆ ಕೋರಿದ್ದರು ಎಂದು ತಿಳಿದುಬಂದಿದೆ. ರಕ್ಷಣೆ ನೀಡೋದಾಗಿ ಹೇಳಿ ಬಳಿಕ ರಾಜೇಶ್ ಭಟ್ ಜೊತೆ ಸಂಧಾನ ಮಾಡಿಕೊಂಡಿದ್ದಾರೆ. ನೀನೇ ಸಲುಗೆ ಕೊಟ್ಟಿರಬಹುದು ಎಂದು ಧ್ರುವ ಅನುಮಾನಿಸಿದ್ದಾರೆ. ಬಳಿಕ ಅವರನ್ನು ಎದುರು ಹಾಕಿಕೊಳ್ಳಬೇಡ ಎಂದು ಸಲಹೆ‌ ನೀಡಿದ್ದಾರೆ. ಸಂತ್ರಸ್ತೆ ಬಾಯಿ ಮುಚ್ಚಿಸಲು ಯತ್ನಿಸಿದ್ದ ಧ್ರುವ ಮತ್ತು ಮಹಾಲಕ್ಷ್ಮಿ ಹೆಗ್ಡೆ ವಿರುದ್ಧವೂ ದೂರು ದಾಖಲಾಗಿದೆ.

ವಕೀಲ ರಾಜೇಶ್ ಭಟ್ ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ, ರಾಜೇಶ್ ಸೇರಿದಂತೆ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ ಭಟ್ ಸೇರಿ ಪವಿತ್ರ ಆಚಾರ್ಯ, ಶಿವಾನಂದ ಮತ್ತು ಧ್ರುವ ಪ್ರಮುಖ ಆರೋಪಿಗಳಾಗಿದ್ದಾರೆ. ರಾಜೇಶ್ ಭಟ್ ಮೇಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಮೇಲೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪವಿದೆ.ಸದ್ಯ ನಾಲ್ವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತನಿಖೆಗಾಗಿ ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದಾರೆ. ಪ್ರಸ್ತುತ ಒಂದು ತಂಡ ಹೊನ್ನಾವರ, ಇನ್ನೆರೆಡು ತಂಡದಿಂದ ಮಂಗಳೂರಿನಲ್ಲೇ ಆರೋಪಿಗಾಗಿ ಹುಡುಕಾಟ ನಡೆಸಿದೆ.

Be the first to comment

Leave a Reply

Your email address will not be published.


*