25ರ ವಧುವಿಗೆ 45ರ ವರ…! ಇಲ್ಲಿದೆ ನೋಡಿ ಅಸಲಿ ಕತೆ

ವರದಿ-ಕುಮಾರ್ ನಾಯ್ಕ, ಉಪಸಂಪಾದಕರು

ರಾಜ್ಯ ಸುದ್ದಿಗಳು 

ಕುಣಿಗಲ್ತ

ತುಮಕೂರಿನಲ್ಲಿ ಕುಣಿಗಲ್ ತಾಲೂಕಿನ 45 ವರ್ಷದ ವ್ಯಕ್ತಿ ಶಂಕರ್ ಹಾಗೂ 25 ವರ್ಷದ ಯುವತಿ ಮೇಘನಾ ಮದುವೆಯಾಗಿರುವ ಫೋಟೋ ವೈರಲ್ ಆಗಿದೆ. ಕುಣಿಗಲ್ ತಾಲ್ಲೂಕಿನ ಶಂಕರ್ ಹಾಗೂ 25 ವರ್ಷದ ಮೇಘನಾ ಗುರು-ಹಿರಿಯರ ಆಶೀರ್ವಾದದೊಂದಿಗೆ ವಿವಾಹವಾಗಿದ್ದಾರೆ. 45 ವರ್ಷದ ಶಂಕರ್ ಎಷ್ಟೇ ಹುಡುಗಿದರೂ ಹೆಣ್ಣು ಸಿಕ್ಕಿರಲಿಲ್ಲ. ಮೇಘನಾಗೆ ಈಗಾಗಲೇ ಮದುವೆಯಾಗಿದ್ದು,ಗಂಡನಿಗೆ ಡೈವರ್ಸ್ ಕೊಟ್ಟಿದ್ದಾರೆ.ಕೊನೆಗೆ ಶಂಕರನ ಮದುವೆಯಾಗಲು ಮೇಘನಾ ಮುಂದೆ ಬಂದು ಒಪ್ಪಿಗೆ ಸೂಚಿಸಿದ್ದಾರೆ. ಸ್ಥಳೀಯ ದೇವಾಲಯದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

CHETAN KENDULI

Be the first to comment

Leave a Reply

Your email address will not be published.


*