ಸಾರ್ವಜನಿಕ ಪ್ರವೇಶಕ್ಕೆ ಹಂಪಿ ಮುಕ್ತ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಬೆಂಗಳೂರು: ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.ಇದೀಗ ಕೊರೋನಾ ಸೋಂಕಿತರ ಪ್ರಕರಣ ರಾಜ್ಯದಲ್ಲಿ ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅನ್ಲಾಕ್ ಪ್ರಕ್ರಿಯೆ ಸಹ ಆರಂಭವಾಗಿದೆ. ವಿಶ್ವವಿಖ್ಯಾತ ಹಂಪಿಯನ್ನು ಸಹ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

ಹಂಪಿಯ ವಿರೂಪಾಕ್ಷ ದೇಗುಲದಲ್ಲಿ ಎಂದಿನಂತೆ ಪೂಜೆಗಳು ನೆರವೇರಲಿವೆ. ಆದರೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇಲ್ಲ. ಆದರೆ ಹಂಪಿಯ ಸ್ಮಾರಕಗಳು, ಕಮಲಾಪುರ ವಸ್ತು ಸಂಗ್ರಹಾಲಯ ಇಂದಿನಿಂದ ಸಾರ್ವಜನಿಕರಿಗೆ ಸೇವೆ ನೀಡಲಿದೆ. ಆನ್ಲೈನ್ ಮತ್ತು ನಗದು ಪಾವತಿಯ ಜೊತೆಗೆ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Be the first to comment

Leave a Reply

Your email address will not be published.


*