ಸಂತೆಯಲ್ಲಿ ತರಕಾರಿ ಬೆಲೆ ಏರಿಕೆ ಖರೀದಿಗೆ ಗ್ರಾಹಕರ ಹಿಂದೇಟು (ನುಗ್ಗೆಕಾಯಿ ಕೆಜಿ ರೂ.೧೫೦, ಕ್ಯಾರೇಟ್ ಕೆಜಿ ರೂ.೮೦ ಮಾರಾಟ)

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ಬೆಂಗಳೂರು ಗ್ರಾಮಾಂತರ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರ ಮಧ್ಯೆ ಚೌಕಾಸಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಕಳೆದ ತಿಂಗಳಿನಿಂದ ಸುರಿದ ಅಕಾಲಿಕ ಮಳೆಯಿಂದಾಗಿ ವಾತಾವರಣದಲ್ಲಿ ಏರುಪೇರು ಪೇರಾಗಿದ್ದ ಕಾರಣ ರೈತರು ಬೆಳೆದ ತರಕಾರಿ, ಹಣ್ಣುಗಳು ಮಾರುಕಟ್ಟೆಗಳಲ್ಲಿ ಕೊಳೆಯುವಂತಾಗಿದ್ದು, ಇದೀಗ ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ-ಹಣ್ಣುಗಳಿಗೆ ಬೆಲೆ ಏರಿಕೆ ಬಿಸಿ ಗ್ರಾಹಕರನ್ನು ಕಾಡತೊಡಗಿದೆ. ನುಗ್ಗೆ, ಕ್ಯಾರೇಟ್ ಬೆಲೆ ಗಗನಮುಕಿ: ತರಕಾರಿ ಬೆಲೆಗಳ ಏರಿಕೆಯ ಮಧ್ಯೆ ೧೦೦ರೂ.ಗಡಿದಾಟಿದ ಕ್ಯಾರೇಟ್ ಮತ್ತು ೧೫೦ರೂ.ಗಳಂತೆ ನುಗ್ಗೆಕಾಯಿ ಬೆಲೆ ಏರಿಕೆ ಗ್ರಾಕರನ್ನು ಕಂಗಾಲಾಗಿಸಿದೆ. ಶೇ.೫೦ರಷ್ಟು ತರಕಾರಿ ಬೆಳೆಗಳು ಸಂತೆಯಲ್ಲಿ ಕೊಳೆಯುತ್ತಿದ್ದು, ಎಪಿಎಂಸಿ ಮಾರುಕಟ್ಟೆಗಳು, ನೆರೆ ರಾಜ್ಯಗಳ ಮಾರುಕಟ್ಟೆಗಳಿಂದ ಬರುವ ತರಕಾರಿಗಳು ಬಹುತೇಕ ನಾಶವಾಗುತ್ತಿರುವುದರಿಂದ ತರಕಾರಿ-ಹಣ್ಣುಗಳ ಬೆಲೆ ಏರಿಕೆಗೆ ಮುಖ್ಯಾ ಕಾರಣವಾಗುತ್ತಿದೆ. 

CHETAN KENDULI

ಅಕಾಲಿಕ ಮಳೆ ಬೆಲೆ ಏರಿಕೆಗೆ ಕಾರಣ: ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ರೈತರು ಬೆಳೆದ ತರಕಾರಿ, ಹಣ್ಣು, ಸೊಪ್ಪು ಕೊಳೆಯಲು ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಮಾರುಕಟ್ಟೆ ಮತ್ತು ಸಂತೆಗಳಲ್ಲಿ ಹಣ್ಣು-ತರಕಾರಿ ಕೊರತೆಯುಂಟಾಗಿದೆ. ವಾರದ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿದ್ದು, ತಾಲೂಕಿನ ದೇವನಹಳ್ಳಿ ಸಂತೆ, ವಿಜಯಪುರ ಸಂತೆ, ಕುಂದಾಣದ ಚಪ್ಪರಕಲ್ಲು, ಚನ್ನರಾಯಪಟ್ಟಣ ಸಂತೆಗಳಲ್ಲಿ ತರಕಾರಿ ಬೆಲೆ ಏರಿಕೆಗೆ ಗ್ರಾಹಕರು ಮತ್ತು ವ್ಯಾಪಾರಸ್ಥರ ನಡುವೆ ವಾಗ್ಧಾಳಿಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.ಅಂಗಡಿಗಳಲ್ಲಿ ತರಕಾರಿ-ಹಣ್ಣಿನ ಬೆಲೆನುಗ್ಗೆಕಾಯಿ ೧೫೦ರೂ, ಕ್ಯಾರೇಟ್ ೮೦ರೂ, ಈರುಳ್ಳಿ, ಟೋಮೆಟೋ ಬೆಲೆ ಏರಿಕೆ ಕಂಡಿದ್ದು, ಕೆಜಿಗೆ ೫೦-೬೦ರೂ.ಇದ್ದು, ಈರುಳ್ಳಿ ಕೆಜಿ ೩೦-೪೦ರೂ, ಬದನೆಕಾಯಿ ಕೆಜಿಗೆ ೪೦-೬೦ರೂ, ಬೆಂಡೆಕಾಯಿ ಕೆಜಿ ೬೦ರೂ., ಈರೇಕಾಯಿ ತಲಾ ೩೦ರೂ., ನೌಕಲ್, ಮೂಲಂಗಿ, ಆಲೂಗಡ್ಡೆ ೨೫ರೂ.ಗಳಂತೆ ಮಾರಾಟವಾಗುತ್ತಿದೆ. ಸೊಪ್ಪುಗಳಾದ ಕೊತ್ತಂಬರಿ, ಪುದೀನಾ, ಪಾಲಕ್, ಮೆಂತ್ಯೆ, ದಂಟು ಸೊಪ್ಪು ಪ್ರತಿ ಕಟ್ಟು ೧೦ರೂ-೨೦ರೂ.ಗಳಂತೆ ಮಾರಾಟವಾಗುತ್ತಿದೆ. ಸೊಪ್ಪು ಮಾರಾಟದಲ್ಲಿ ಸೊಪ್ಪಿನ ಗುಣಮಟ್ಟ ಕಡಿಮೆ ಇದ್ದರೂ ಸಹ ಬೆಲೆ ಮಾತ್ರ ಅಷ್ಟೇ ಇದೆ. ಹಣ್ಣುಗಳ ಬೆಲೆಯೂ ಸಹ ಏರಿಕೆಯಲ್ಲಿದ್ದು, ಸೇಬು, ದಾಳಿಂಬೆ, ಸಪೋಟ ಗುಣಮಟ್ಟದ ಆಧಾರದಲ್ಲಿ ವಿಂಗಡಿಸಿ ಕೆಜಿ ೧೦೦ ರಿಂದ ೧೮೦ರೂ.ಗಳ ವರೆಗೆ ಮಾರಾಟ ಮಾಡಲಾಗುತ್ತಿದೆ. ಚುಕ್ಕೆ ಬಾಳೆಹಣ್ಣು ಕೆಜಿ ೩೦ರೂ., ಏಲಕ್ಕಿ ಬಾಳೆಹಣ್ಣು ಕೆಜಿಗೆ ೩೦-೪೦ರೂ.ಗಳವರೆಗೆ ಮಾರಾಟವಾಗುತ್ತಿದೆ.

* ಮಂಜುನಾಥ್ | ರಾಮನಾಥಪುರ, ತರಕಾರಿ ವ್ಯಾಪರಸ್ಥರುವಾತಾವರಣ ವೈಪರಿತ್ಯ ಮತ್ತು ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಲಭ್ಯವಿಲ್ಲದಿರುವುದರಿಂದ ಇರುವ ಲಭ್ಯತೆಯ ಆಧಾರದಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಪ್ರಸ್ತುತ ನುಗ್ಗೆಕಾಯಿ ಮತ್ತು ಕ್ಯಾರೇಟ್ ಬೆಲೆ ಹೆಚ್ಚಾಗಿದೆ. ಗ್ರಾಹಕರು ಬೆಲೆ ಏರಿಕೆಗೆ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರ ಕುಸಿತದಿಂದ ಹಾಕಿರುವ ಬಂಡವಾಳ ಕೈಸೇರುತ್ತಿಲ್ಲ. 

* ಶೈಲಾ.ಕೆ.ಬಿ.ಬಾಬು | ಗೃಹಿಣಿವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೋಗಿ ತರಕಾರಿ ಬೆಲೆ ವಿಚಾರಿಸಿದರೆ ಸಾಕಷ್ಟು ಬೆಲೆ ಹೇಳುತ್ತಿದ್ದಾರೆ. ಮನೆ ಸಂಸಾರ ನಡೆಸುವುದೇ ಕಷ್ಟವಾಗಿದೆ. ಏನು ಮಾಡೋದು ಮನೆ ಸಂಸಾರ ನಡೆಸಲು ದುಬಾರಿ ಹಣಕೊಟ್ಟು ಅಲ್ಪ ಪ್ರಮಾಣದಲ್ಲಿ ತರಕಾರಿ ಖರೀದಿಸುವಂತಾಗಿದೆ.

Be the first to comment

Leave a Reply

Your email address will not be published.


*